ನವದೆಹಲಿ,ಏ.೬:ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ೪೨ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ, ಗುಬ್ಬಿಯ ಎಸ್.ಆರ್. ಶ್ರೀನಿವಾಸ್, ಬಾಬುರಾವ್ ಚಿಂಚನಸೂರು, ವಿ.ಎಸ್. ಪಾಟೀಲ್ , ಇಕ್ಬಾಲ್ ಅನ್ಸಾರಿ ಇವರುಗಳು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯಲ್ಲಿ ೧೨೪ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿತ್ತು, ೨ನೇ ಪಟ್ಟಿಯಲ್ಲಿ ೪೨ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಒಟ್ಟಾರೆ ೧೬೬ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇದುವರೆಗೂ ಘೋಷಿಸಿದಂತಾಗಿದೆ. ಉಳಿದ ಕ್ಷೇತ್ರಗಳಿಗೆ ೩ನೇ ಪಟ್ಟಿಯನ್ನು ಏ. ೧೦ರ ನಂತರ ಬಿಡುಗಡೆ ಮಾಡಲಾಗುತ್ತದೆ.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಎನ್.ವೈ. ಗೋಪಾಲಕೃಷ್ಣ ಮೊಳಕಾಲ್ಮೂರು,ಎಸ್.ಆರ್ ಶ್ರೀನಿವಾಸ್ ಗುಬ್ಬಿ, ವಿ.ಎಸ್ ಪಾಟೀಲ್ ಯಲ್ಹಾಪುರ, ಬಾಬುರಾವ್ ಚಿಂಚನಸೂರ್ ಗುರ್‌ಮಿಟ್ಕಲ್, ಇಕ್ಬಾಲ್ ಅನ್ಸಾರಿ ಗಂಗಾವತಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವ್‌ನಲ್ಲಿ ಸ್ಪರ್ಧೆಗಿಳಿಯುತ್ತಾರೆ ಎಂದು ಹೇಳಲಾಗಿದ್ದ ಮಾಜಿ ಸಚಿವ ವಿನಯ್‌ಕುಲಕರ್ಣಿಗೆ ಶಿಗ್ಗಾಂವ್ ಬದಲು ಧಾರವಾಡದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ರವರ ಪುತ್ರ ವಿಜಯ್‌ಧರ್ಮಸಿಂಗ್‌ರವರಿಗೆ ಬಸವ ಕಲ್ಯಾಣದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದ್ದು, ಜೆಡಿಎಸ್‌ನಿಂದ ಅರಕಲಗೂಡಿನಿಂದ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಎ. ಮಂಜುನಾಥ್ ಅವರ ಪುತ್ರ ಡಾ. ಮಂಥರ್‌ಗೌಡ ಅವರಿಗೆ ಮಡಿಕೇರಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೆದ್ದಿದ್ದ ಬಾದಾಮಿಯಿಂದ ಸಿದ್ದರಾಮಯ್ಯರವರಿಗೆ ಕ್ಷೇತ್ರ ತ್ಯಾಗ ಮಾಡಿದ್ದ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿರವರಿಗೆ ಈ ಬಾರಿ ಮತ್ತೆ ಬಾದಾಮಿ ಟಿಕೆಟ್ ನೀಡಲಾಗಿದೆ. ತೀರ್ಥಹಳ್ಳಿ ಕ್ಷೇತ್ರದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಟಿಕೆಟ್ ನೀಡಲಾಗಿದೆ.ಮಂಡ್ಯದ ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಆದರೆ, ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ರೈತ ಸಂಘದ ದಿ. ಪುಟ್ಟಣ್ಣಯ್ಯರವರ ಪುತ್ರ ದರ್ಶನ್ ಪುಟ್ಟಣ್ಣಯ್ಯರವರಿಗೆ ಬೆಂಬಲ ನೀಡಿದೆ. ಉಳಿದಂತೆ ಮಾಜಿ ಸಚಿವರಾದ ಸಂತೋಷ್ ಲಾಡ್, ಕಲಘಟಗಿಯಿಂದ ಹೆಚ್. ಆಂಜನೇಯ, ಹೊಳಲ್ಕೆರೆಯಿಂದ ಗಂಡಸಿ ಶಿವರಾಂ, ಬೇಳೂರಿನಿಂದ ಹೆಚ್.ವೈ ಮೇಟಿ, ಬಾಗಲಕೋಟೆಯಿಂದ ಆರ್.ಬಿ ತಿಮ್ಮಾಪುರ ಕಣಕ್ಕಿಳಿಯಲಿದ್ದಾರೆ.ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಎಸ್. ಬಾಲಾಜಿಗೌಡ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಕೇಶವಮೂರ್ತಿ, ಪದ್ಮಣಾಬನಗರದಿಂದ ರಘುನಾಥ್‌ನಾಯ್ಡು, ಯಲಹಂಕದಿಂದ ಕೇಶವರಾಜಣ್ಣ, ಕೊಳ್ಳೆಗಾಲದಿಂದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಇವರುಗಳಿಗೂ ೨ನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಲಾಗಿದೆ.ತುಮಕೂರು ನಗರ ಕ್ಷೇತ್ರದಿಂದ ಇಕ್ಬಾಲ್ ಅಹ್ಮದ್, ತೀರ್ಥಹಳ್ಳಿಯಿಂದ ಕಿಮ್ಮನೆರತ್ನಾಕರ್, ಮಂಡ್ಯ ನಗರದಿಂದ ಪಿ.ರವಿಕುಮಾರ್, ಚಾಮುಂಡೇಶ್ವರಿಯಿಂದ ಸಿದ್ದೇಗೌಡ ಇವರುಗಳಿಗೆ ಟಿಕೆಟ್ ನೀಡಲಾಗಿದೆ.
ಅಭ್ಯರ್ಥಿಗಳ ೨ನೇ ಪಟ್ಟಿ
ನಿಪ್ಪಾಣಿ -ಕಾಕಾಸಾಹೇಬ್ ಪಾಟೀಲ್
ಗೋಕಾಕ್- ಮಹಂತೇಶ್ ಕಡಡಿ
ಕಿತ್ತೂರ್-ಬಾಬಾಸಾಹೇಬ್ ಡಿ. ಪಾಟೀಲ್
ಸವದತ್ತಿ ಯಲ್ಲಮ್ಮ-ವಿಶ್ವಾಸ್ ವಸಂತ್ ವೈದ್ಯ
ಮುಧೋಳ್ ಎಸ್‌ಸಿ-ರಾಮಪ್ಪ ಬಾಳಪ್ಪ ತುಮ್ಮಾಪುರ್
ಬೀಳಗಿ-ಜೆ.ಟಿ ಪಾಟೀಲ್
ಬಾದಾಮಿ- ಭೀಮಸೇನ್ ಬಿ. ಚಿಮ್ಮನಕಟ್ಟಿ
ಬಾಗಲಕೋಟೆ-ಹಾಲಪ್ಪ ವೈ ಮೇಟಿ
ಬಿಜಾಪುರ ಸಿಟಿ-ಅಬ್ದುಲ್ ಹಮೀದ್ ಕಾಜಾಸಾಹೇಬ್ ಮುಸಾರಿಫ್
ನಾಗಠಾಣ(ಎಸ್‌ಸಿ ಮೀಸಲು)-ವಿಠ್ಠಲ್ ಕಾಟಕಡೊಂಡ್
ಅಫ್ಜಲ್‌ಪುರ್-ಎಂ.ವೈ. ಪಾಟೀಲ್
ಯಾದಗಿರ್-ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್
ಗುಲ್ಬರ್ಗಾ ದಕ್ಷಿಣ-ಅಲ್ಲಮ್ಮಪ್ರಭು ಪಾಟೀಲ್
ಬಸವ ಕಲ್ಯಾಣ-ವಿಜಯ್‌ಧರ್ಮಸಿಂಗ್
ಗಂಗಾವತಿ-ಇಕ್ಬಾಲ್ ಅನ್ಸಾರಿ
ನರಗುಂದ-ಬಿ.ಆರ್ ಯಾವ್‌ಗಲ್
ಧಾರವಾಡ-ವಿನಯ್‌ಕುಲಕರ್ಣಿ
ಕಲಘಟಗಿ-ಸಂತೋಷ್ ಎಸ್. ಲಾಡ್
ಶಿರಸಿ-ಭೀಮಣ್ಣ ನಾಯಕ್
ಯಲ್ಹಾಪುರ-ವಿ.ಎಸ್ ಪಾಟೀಲ್
ಕೂಡ್ಲಿಗಿ (ಎಸ್‌ಟಿ ಮೀಸಲೂ)-ಡಾ. ಶ್ರೀನಿವಾಸ್
ಮೊಳಕಾಲ್ಮೂರು(ಎಸ್‌ಟಿ ಮೀಸಲು)-ಎನ್‌ವೈ ಗೋಪಾಲಕೃಷ್ಣ
ಚಿತ್ರದುರ್ಗ-ಕೆ.ಸಿ ವೀರೇಂದ್ರ
ಹೊಳಲ್ಕೆರೆ(ಎಸ್‌ಸಿ ಮೀಸಲು)-ಆಂಜನೇಯ, ಹೆಚ್
ಚನ್ನಗಿರಿ=ಬಸವರಾಜು.ವಿ. ಶಿವಗಂಗಾ
ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ
ಉಡುಪಿ-ಪ್ರಸಾದ್ ರಾಜ್ ಕಂಚನ್
ಕಡೂರು-ಆನಂದ್ ಕೆ.ಎಸ್
ತುಮಕೂರು ನಗರ-ಇಕ್ಬಾಲ್ ಅಹ್ಮದ್
ಗುಬ್ಬಿ-ಎಸ್.ಆರ್ ಶ್ರೀನಿವಾಸ್
ಯಲಹಂಕ-ಕೇಶವ ರಾಜಣ್ಣ.ಬಿ
ಯಶವಂತಪುರ-ಎಸ್. ಬಾಲರಾಜ್ ಗೌಡ
ಮಹಾಲಕ್ಷ್ಮಿ ಲೇಔಟ್-ಕೇಶವಮೂರ್ತಿ
ಪದ್ಮನಾಭನಗರ-ವಿ. ರಗೂನಾಥನಾಯ್ಡು
ಮೇಲುಕೋಟೆ-ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
ಮಂಡ್ಯ-ಪಿ. ರವಿಕುಮಾರ್
ಕೃಷ್ಣರಾಜಪೇಟೆ-ಬಿ.ಎಲ್ ದೇವರಾಜ
ಬೇಲೂರು-ಬಿ. ಶಿವರಾಂ
ಮಡಿಕೇರಿ-ಡಾ. ಮಂಥರ್‌ಗೌಡ
ಚಾಮುಂಡೇಶ್ವರಿ-ಸಿದ್ದೇಗೌಡ
ಕೊಳ್ಳೆಗಾಲ-ಎಸ್‌ಸಿ ಮೀಸಲು-ಎ.ಆರ್.ಕೃಷ್ಣಮೂರ್ತಿ