೪೦ ದೇಶಗಳಿಂದ ಭಾರತಕ್ಕೆ ನೆರವು


ನವದೆಹಲಿ, ಏ.೩೦- ದೇಶದಲ್ಲಿ ಎರಡನೇ ಹಂತದ ಕೊರೊನಾ ಸೋಂಕು ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ೪೦ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ .
ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಸೇರಿದಂತೆ ಇನ್ನಿತರ ವೈದ್ಯಕೀಯ ಪರಿಕರಗಳನ್ನು ಪೂರೈಕೆ ಮಾಡಲು ವಿವಿಧ ದೇಶಗಳು ಮುಂದೆ ಬಂದಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ದೇಶದಲ್ಲಿ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆದರ ತಡೆಗೆ ಜಾಗತಿಕ ಸಮುದಾಯ, ಭಾರತದ ಜೊತೆ ಕೈಜೋಡಿಸಲು ಮುಂದೆ ಬಂದಿವೆ ಇದು ಒಳ್ಳೆಯ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ನೆರವು ನೀಡುವ ಸಂಬಂಧ ಅನೇಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿದೆ ತುರ್ತಾಗಿ ಆಮ್ಲಜನಕ ವೈದ್ಯಕೀಯ ಉಪಕರಣ ಸೇರಿದಂತೆ ಇನ್ನಿತರ ವೈದ್ಯಕೀಯ ಪರಿಕರಗಳನ್ನು ಪೂರೈಕೆ ಮಾಡಲು ಮುಂದೆ ಬಂದಿದ್ದಾರೆ ಎಂದು ಅವರು ತಿಳಿಸಿದರು.
ಆಮ್ಲಜನಕ ,ರೆಮಿಡಿಸಿವಿರ್ ಸೇರಿದಂತೆ ಇನ್ನಿತರೆ ಅಗತ್ಯ ವೈದ್ಯಕೀಯ ಅಧಿಕಾರಿಗಳನ್ನು ಪೂರೈಕೆ ಮಾಡುವುದಾಗಿ ನಲವತ್ತಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ಭರವಸೆ ನೀಡುವ ಸದ್ಯದಲ್ಲೇ ದೇಶಕ್ಕೆ ಬರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕಾ ಇಂಗ್ಲೆಂಡ್ ಜಪಾನ್ ಚೀನಾ ಪಾಕಿಸ್ತಾನ ,ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಭಾರತಕ್ಕೆ ಸಂಕಷ್ಟದ ಸಮಯದಲ್ಲಿ ನೆರವು ನೀಡುವುದಾಗಿ ಮುಂದೆ ಬಂದಿವೆ ಎಲ್ಲ ದೇಶಗಳಿಗೆ ಮತ್ತು ದೇಶಗಳ ಮುಖ್ಯಸ್ಥರಿಗೆ ಧನ್ವಾದ ಸಲ್ಲಿಸುವುದಾಗಿ ಅವರು ತಿಳಿಸಿದರು.
ಮೊದಲ ಹಂತದ ಕೊರೊನಾ ಸೋಂಕು ಅಲೆಯ ಸಂದರ್ಭದಲ್ಲಿ ಭಾರತ ಜಗತ್ತಿನ ಎಂಬತ್ತಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಪರಿಕರಗಳನ್ನು ಸಹಾಯಮಾಡಿತ್ತು. ಇದೀಗ ಭಾರತಕ್ಕೆ ಹಲವು ದೇಶಗಳು ನೆರವು ನೀಡುತ್ತಿದೆ ಎಂದು ಅವರು ಹೇಳಿದರು