೪ನೇ ದಿನಕ್ಕೆ ಮುಂದುವರೆದ ಸರದಿ ಉಪವಾಸ ಸತ್ಯಾಗ್ರಹ

ರಾಯಚೂರು,ಜ.೨೧- ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಇಂದಿಗೆ ನಾಲ್ಕನೇ ದಿನಕ್ಕೆ ಮುಂದುವರೆದಿದೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲೇಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಶ್ರೀ ಕಾಮರಾಜ ಪಾಟೀಲ್ ವಿನಯಕುಮಾರ್ ಚಿತ್ರಗಾರ್, ಪಾಲ್ಗೊಂಡಿದ್ದರು.
ಸತ್ಯಾಗ್ರಹದಲ್ಲಿ ಡಾ.ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್, ಆಂಜನೇಯ ಜಾಲಿಬೆಂಚಿ, ಗುರುರಾಜ ಕುಲಕರಣಿ, ನರಸಪ್ಪ ಬಾಡಿಯಾಳ್, ಎಸ್ .ತಿಮ್ಮಾರೆಡ್ಡಿ, ಚಾಂದ್ ಪಾಶ ಜಿ ಹನುಮಪುರ, ವೆಂಕಟರೆಡ್ಡಿ ದಿನ್ನಿ, ಸಂಗಪ್ಪ ಕಡಿ, ವೀರೇಶ್ ಬಾಬು, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ದಸ್ತಿಗಿರಿ ಸಾಬ್ ಕಾಕರಗಲ್, ವೆಂಕಟೇಶ ಆಚಾರಿ, ಪ್ರಸಾದ್ ಭಂಡಾರಿ, ವೆಂಕಟಯ್ಯ ಶೆಟ್ಟಿ ಹೊಸಪೇಟೆ, ಮಿಮಿಕ್ರಿ ಬಸವರಾಜ್, ಅಯ್ಯನಗೌಡ ನಂದಿಹಳ್ಳಿ, ಸುಲೋಚನಾ ಸಂಘ,ಚಂದ್ರಶೇಖರ್ ಭಂಡಾರಿ ,ಅನ್ವಾರ್ ಬಾಯ್ , ಸಾಧಿಕ್ ಖಾನ್, ಅಸಿಕಹಾಳ ಶರಣಪ್ಪ, ಸಂತೋಷ್ ಜೈನ್ ,ಸುಚಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.