
ನಗರಸಭೆಯಾಗಿ ಮೇಲ್ದರ್ಜೆಗೇರಲು ಸರ್ಕಾರದಿಂದ ಘೋಷಣೆಯಷ್ಟೇ ಬಾಕಿ
ಮಾನ್ವಿ,ಮಾ.೦೪- ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ರಶೀದಾಬೇಗಂ ಖಾಸಿಂಸಾಬ್ ಅಧ್ಯಕ್ಷತೆಯಲ್ಲಿ ನಡೆದ ೨೦೨೩-೨೪ನೇ ಸಾಲಿನ ಆಯವ್ಯಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ವೆಂಕಟೇಶ ನಾಯಕ ೩.೩೭ ಲಕ್ಷ ರೂ.ಗಳ ಉಳಿತಾಯ ಬಜೆಟ್‌ನ್ನು ಮಂಡಿಸಿದರು.
೨೦೨೩-೨೪ನೇ ಸಾಲಿನ ಬಜೆಟ್‌ನಲ್ಲಿ ಅಂದಾಜು ಆದಾಯದಲ್ಲಿ ಸಂಸದರ, ಶಾಸಕರ, ಎಂಎಲ್‌ಸಿ ಅನುದಾನ, ಕಲ್ಯಾಣ ಕರ್ನಾಟಕ ಮಂಡಳಿ ಅನುದಾನ, ಆಸ್ತಿ ತೆರಿಗೆ ಖಾತಾ ಪ್ರತಿಗಳು, ಎಸ್‌ಎಫ್‌ಸಿ ಅನುದಾನ, ೧೫ನೇ ಹಣಕಾಸು, ವಿದ್ಯುತ್, ಕುಡಿಯುವ ನೀರುಮ ವಾಣಿಜ್ಯ ಮಳಿಗೆಗಳು, ವೇತನ ಭತ್ಯೆ, ಜಾಹೀರಾತು, ಕಟ್ಟಡ ಸೇರಿದಂತೆ ಒಟ್ಟು ಅಂದಾಜು ರಾಜಸ್ವ ಸ್ವೀಕೃತಿ ೧೩.೮೬ ಕೋಟಿ, ಒಟ್ಟು ಅಂದಾಜು ಬಂಡವಾಳ ಸ್ವೀಕೃತಿ ೬.ಕೋಟಿ, ಒಟ್ಟು ಅಂದಾಜು ಅಸಮಾನಾಯ ಸ್ವೀಕೃತಿ ೫.೧೫ ಕೋಟಿ ಸೇರಿದಂತೆ ಒಟ್ಟು ೨೪.೮೮ ಕೋಟಿ ಮತ್ತು ೨೦೨೩-೨೪ನೇ ಸಾಲಿನ ಅಂದಾಜು ವೆಚ್ಚದಲ್ಲಿ ಖಾಯಂ ನೌಕರರ ವೇತನ, ದಿನಗೂಲಿ ನೌಕರರ ವೇತನ, ಹೊರಗುತ್ತಿಗೆ ನೌಕರರ ವೇತನ, ಬಾಡಿಗೆ, ವಿಮೆ, ಮುದ್ರಣ, ಜಾಹೀರಾತು, ಪ್ರಚಾರ, ಕಟ್ಟಡಗಳ ದುರಸ್ತಿ ನಿರ್ವಹಣೆ, ರಸ್ತೆಗಳು, ಬೀದಿದೀಪಗಳು, ನೈರ್ಮಲ್ಯ ವಿಭಾಗ, ನೀರು ಸರಬರಾಜು, ಪ.ಜಾ.ಪ.ಪಂ.ಗಳ ಅಭಿವೃದ್ದಿ, ಹಿಂದುಳಿದ ವರ್ಗಗಳ ಅಭಿವೃದ್ದಿ ಒಟ್ಟು ಅಂದಾಜುರಾಜಸ್ವ ಪಾವತಿ ೧೩.೪೩ ಕೋಟಿ, ಒಟ್ಟು ಅಂದಾಜು ಬಂಡವಾಳ ಪಾವತಿ ೬.೪೦ ಕೋಟಿ ಒಟ್ಟು ಅಂದಾಜು ಅಸಾಮಾನ್ಯ ಪಾವತಿ ೫.೧೫ ಕೋಟಿ ಸೇರಿದಂತೆ ಒಟ್ಟು ೨೪.೮೪ ಕೋಟಿ ಅಂದಾಜು ವೆಚ್ಚದಲ್ಲಿ ಸಾರ್ವಜನಿಕರಿಗೆ ಅವಶ್ಯವಾಗಿರುವ ಮೂಲಸೌಕರ್ಯಗಳು ಕಲ್ಪಿಸುವುದಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಈ ಬಾರಿ ಬಜೆಟ್‌ನಲ್ಲಿ ೩.೩೭ ಲಕ್ಷ ಉಳಿತಾಯ ಬಜೆಟ್‌ನ್ನು ಮಂಡಿಸಲಾಯಿತು.
೨೦೨೩-೨೪ ನೇ ಸಾಲಿನ ಬಜೆಟ್ ಮೇಲಿನ ವಿಷಯಕ್ಕೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಾಜಾಮಹೇಂದ್ರ ನಾಯಕ ಅವರು ಈ ಸಆಲಿನ ಬಜೆಟ್ ಅಭಿವೃದ್ದಿ ಪೂರಕವಾಗಿದ್ದು, ಈಗಾಗಲೇ ಶೆ.೭೫ ರಷ್ಟು ಪ್ರಗತಿಯನ್ನು ಸಾಧಿಸಿದ್ದು ಮುಂದಿನ ದಿನಗಳಲ್ಲಿ ಶೆ.೧೦೦ ರಷ್ಟು ಅಭಿವೃದ್ದಿ ಗುರಿಯನ್ನು ಸಾಧಿಸಲಿ ಎಂದರು.
ಪುರಸಭೆ ವತಿಯಿಂದ ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಸಂಸದರ, ಎಂಎಲ್‌ಸಿ ನಿಧಿಯಿಂದ ತಲಾ ೫೦ ಲಕ್ಷ ರೂ.ಗಳು ಹಾಗೂ ಶಾಸಕರ ಅನುದಾನದಿಂದ ೧.ಕೋಟಿಯನ್ನು ನಿರೀಕ್ಷಿಸಬೇಕೆಂದರು. ಶಾಸಕ ರಾಜಾವೆಂಕಟಪ್ಪ ನಾಯಕರು ಪಟ್ಟಣದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಪುರಸಭೆ ಅಧ್ಯಕ್ಷೆ, ಸದಸ್ಯರು ಮನವಿ ಹಾಗೂ ಶಾಸಕರು ಒತ್ತಾಯದ ಮೇರೆಗೆ ಪುರಸಭೆಯನ್ನು ನಗರಸಭೆಯನ್ನಾಗಿಸಲು ಪಣ ತೊಟ್ಟಿದ್ದರಿಂದ ಸರ್ಕಾರವು ಘೋಷಣೆ ಮಾಡುವುದಷ್ಟೇ ಬಾಕಿಯಿದೆ ಎಂದರು.
ಮಾನ್ವಿ ಜನತೆಗೆ ಶುದ್ದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಹಾಗೂ ಸೊಳ್ಳೆಗಳ ಕಾಟದಿಂದ ಜನರು ಬೆಸತ್ತು ಹೋಗಿದ್ದು ಸಾಂಕ್ರಮಿಕ ರೋಗಗಳು ಉಲ್ಬಣಿಸುವ ಮೊದಲೇ ಫಾಗಿಂಗ್ ಸಿಂಪಡಣೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬಿಡಾಡಿ ದನಗಳ, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ರಾಜಾಮಹೇಂದ್ರ ನಾಯಕ ಸೂಚಿಸಿದರು. ೨೦೨೩-೨೪ನೇ ಸಾಲಿನ ಪುರಸಭೆ ಬಜೆಟ್‌ನ್ನು ಸದಸ್ಯರಾದ ಲಕ್ಷ್ಮಿ ದೇವಿ ನಾಯಕ , ಶೇಖ್ ಫರೀದ್ ಉಮ್ರಿ, ಅಮ್ಜದ್‌ಖಾನ್ ಸೇರಿದಂತೆ ಇನ್ನಿತರರು ಸ್ವಾಗತಿಸಿದರು.
ಪಟ್ಟಣದ ಅಭಿವೃದ್ದಿಗೆ ಪ್ರತಿಯೂಬ್ಬರು ಸಹಕಾರ ನೀಡುವುದಾಗಿ ತಿಳಿಸಿದರು. ಈ ಬಜೆಟ್ ಮಂಡನೆ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ರಶೀದಾಬೇಗಂ ವಹಿಸಿದ್ದರು. ಮುಖ್ಯಾಧಿಕಾರಿ ಗಂಗಾಧರಅವರು ಅಭಿವೃದ್ದಿ ಪರ ಬಜೆಟ್ ಕುರಿತು ವಿಷಯವನ್ನು ಮಂಡಿಸಿದರು. ವೇದಿಕೆ ಮೇಲೆ ಉಪಾಧ್ಯಕ್ಷೆ ಸಂತೋಷಿ ಜಯಪ್ರಕಾಶ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ವೆಂಕಟೇಶ ನಾಯಕ ಇದ್ದರು.
ಈ ವೇಳೆ ಪುರಸಭೆ ಸದಸ್ಯರಾದ ಲಕ್ಷ್ಮೀದೇವಿ ನಾಯಕ, ಸಾಬೀರ್‌ಪಾಷ, ಭಾಷಸಾಬ್, ಶರಣಪ್ಪ ಮೇದಾ, ಮೀನಾಕ್ಷಿ, ಬಸ್ಸಮ್ಮ ಹನುಮಂತ, ಶರಣಬಸವ, ಕೆ.ಶುಕಮುನಿ, ಇಬ್ರಾಹಿಂ ಖುರೇಶಿ, ಸೂರ್ಯಕುಮಾರಿ, ಅಮ್ಜದ್‌ಖಾನ್, ಶೇಖ್ ಫರೀದ್ ಉಮ್ರಿ, ಮೀನಾಕ್ಷಿ, ಲಕ್ಷ್ಮಿ, ಸೂರ್ಯ ಕುಮಾರಿ, ಸುಫಿಯಾ ಬೇಗಂ, ವನಿತಾ, ಸೈನಾಜ್ ಬಾನು, ಸೈಯದ್ ತನ್ವಿರುಲ್ಲಾ ಹಸನ್, ಭಾಷಾ ಸಾಬ್, ಬಸವರಾಜ್ ಭಜಂತ್ರಿ, ರೇವಣಸಿದ್ದಯ್ಯ ಸ್ವಾಮಿ,
ಶರಣಯ್ಯಸ್ವಾಮಿ, ಚಂದ್ರು ಜಾನೇಕಲ್, ಜೆಇ ಶರಣಪ್ಪ, ಮ್ಯಾನೇಜರ್ ದೊಡ್ಡನರಸಿಂಹ, ಲೆಕ್ಕಪರಿಶೋಧಕ ವೆಂಕಟೇಶ ಸೇರಿದಂತೆ ಸದಸ್ಯರು, ಸಿಬ್ಬಂದಿಗಳು ಇದ್ದರು.