೩ ಸಾವಿರ ಚೀನಿಯರ ವೀಸಾ ರದ್ದು ಮಾಡಿದ ಅಮೆರಿಕ

ವಾಷಿಂಗ್ಟನ್, ಸೆ. ೧೦- ಜಗತ್ತಿನಲ್ಲಿ ಕೊರೊನಾ ವೈರಸ್ ಹರಡಲು ಕಾರಣರಾಗಿರುವ ಚೀನಾದ ಮೇಲೆ ಅವಕಾಶ ಸಿಕ್ಕಾಗಲೆಲ್ಲಾ ಕೆಂಡಕಾರುತ್ತಿರುವ ಅಮೆರಿಕಾ, ಸುಮಾರು ಸಾವಿರ ಚೀನಿಯರ ವೀಸಾವನ್ನು ರದ್ದುಗೊಳಿಸಿದೆ.
ಚೀನಾದ ಮಿಲಟರಿ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಅನುಮಾನದ ಮೇರೆಗೆ ಅಮೆರಿಕಾ ಸುಮಾರು ಸಾವಿರ ಚೀನಿಯರ ವೀಸಾಗಳನ್ನು ರದ್ದುಗೊಳಿಸಿದೆ.
ಚೀನಾದಿಂದ ಅಮೆರಿಕಾ ಪ್ರವೇಶ ಬಯಸುವ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಅಮೆರಿಕಾ ಪ್ರವೇಶದ ಮೇಲೆ ಅಮೆರಿಕಾ ಅಧ್ಯಕ್ಷ ಟ್ರಂಪ್ ನಿಬಂಧ ಹೇರಿರುವ ಬೆನ್ನಲ್ಲೆ ಅಮೆರಿಕಾದಲ್ಲಿರುವ ಸಾವಿರ ಚೀನಿಯರ ವೀಸಾಗಳನ್ನು ರದ್ದುಗೊಳಿಸಿದೆ.
ಚೀನಾ ಮಿಲಟರಿ ಜತೆ ಇವರೆಲ್ಲಾ ಸಂಪರ್ಕ ಹೊಂದಿದ್ದು, ಅಮೆರಿಕಾಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚೀನಾಗೆ ತಲುಪಿಸುತ್ತಿದ್ದರು ಎಂಬ ಅನುಮಾನಗಳನ್ನು ಅಮೆರಿಕಾದ ವಿದೇಶಾಂಗ ವಕ್ತಾರರು ವ್ಯಕ್ತಪಡಿಸಿದ್ದು, ಅದರಂತೆ ಇವರೆಲ್ಲಾ ವೀಸಾಗಳನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ.
ಇದುವರೆಗೂ ಅಮೆರಿಕಾ ವಿದೇಶಾಂಗ ಇಲಾಖೆ ಸಾವಿರ ಚೀನಿಯರ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಇವರೆಲ್ಲಾ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ, ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದರು ಎಂದು ಹೇಳಲಾಗಿದೆ.
ಅಮೆರಿಕಾದಲ್ಲಿ ಸುಮಾರು ೩ ಲಕ್ಷದ ೬೦ ಸಾವಿರ ಚೀನಿಯರು ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಅಮೆರಿಕಾದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.