೩ ಪಕ್ಷಗಳಿಂದ ಬಿರುಸಿನ ಪ್ರಚಾರ; ಶೇ.೯೫ ರಷ್ಟು ಮತದಾನ

ವಿಜಯಪುರ.ಅ೨೯:ಪಟ್ಟಣದಲ್ಲಿ ಬುಧುವಾರ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಬಿರುಸಿನಿಂದ ಕೂಡಿದ್ದು, ಶಾಂತಿಯುತವಾಗಿ ಶೇ.೯೫ ರಷ್ಟು ಮತದಾನ ನಡೆಯಿತು.
ಮತದಾನಕ್ಕಾಗಿ ಪಟ್ಟಣದ ನಾಡಕಛೇರಿಯಲ್ಲಿ ೧ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಈ ಚುನಾವಣೆಯಲ್ಲಿ ೧೫೫ ಮಂದಿ ಶಿಕ್ಷಕ ಮತದಾರರಿದ್ದು ಒಟ್ಟು ೧೪೫ ಮಂದಿ ತಮ್ಮ ಹಕ್ಕು ಚಲಾಯಿಸಿದರು.
ಜಿಲ್ಲಾಡಳಿತವು ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಮತಗಟ್ಟೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಭದ್ರತೆ ಒದಗಿಸಲಾಗಿತು.
ಕೋವಿಡ್ ಕಾರಣಕ್ಕೆ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತಗಟ್ಟಿಗೆ ಬರಬೇಕೆಂದು ಸೂಷಿಸಲಾಗಿತ್ತು. ಮತಗಟ್ಟೆಯಲ್ಲಿ ಸ್ಯಾನಿಟೈಸರ್ ಹಾಗೂ ಸ್ಕ್ಯಾನಿಂಗ್ ಮಾಡಿ, ಒಳಗೆ ಬಿಡುವುದರೊಂದಿಗೆ ಅಂತರ ಕಾಯ್ದುಕೊಂಡು ಮತವನ್ನು ಚಲಾಯಿಸಲಾಯಿತು.
ಬೆಳಗ್ಗೆ ೮ ಘಂಟೆಯಿಂದ ಎಲ್ಲಾ ಪಕ್ಷದ ಮುಂಖಡರು ತಮ್ಮ ಅಭ್ಯರ್ಥಿಪರ ಮತ ಹಾಕುವಂತೆ ಶಿಕ್ಷಕರನ್ನು ಮನವಲಿಸುವಂತ ಘಟನೆಗಳ ಮತಗಟ್ಟೆಯ ಬಳಿ ನಡೆಯುತ್ತಿತ್ತು.
ಬಿಜೆಪಿ ಪಕ್ಷದಿಂದ ಪುಟ್ಟಣ್ಣ ಪರವಾಗಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ರವಿಕುಮಾರ್, ಟೌನ್ ಬಿಜೆಪಿ ಅಧ್ಯಕ್ಷ ಚ.ವಿಜಯಬಾಬು, ಯುವಮೋರ್ಚಾ ಅಧ್ಯಕ್ಷ ಮೋಹನ್ ಗೌಡ, ರಾಮಕೃಷ್ಣ ಹೆಗಡೆ, ರಾಮುಭಗವಾನ್, ಮತ್ತಿತರರು ಮತಯಾಚನೆಯಲ್ಲಿ ತೊಡಗಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರವೀಣ್‌ಪೀಟರ್‌ರವರ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಬಿ.ಚೇತನ್‌ಗೌಡ, ಟೌನ್ ಅಧ್ಯಕ್ಷ ವಿ.ಎಂ.ನಾಗರಾಜು, ಯಲುವಳ್ಳಿ ನಟರಾಜ್, ಜೆ.ಡಿ.ಎಸ್.ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್ ಪರವಾಗಿ ಟೌನ್ ಜೆ.ಡಿ.ಎಸ್ ಅಧ್ಯಕ್ಷ ಎಸ್.ಭಾಸ್ಕರ್, ಕಾರ್ಯದರ್ಶಿ ಭುಜಂಗಪ್ಪ, ಮತ್ತಿತರರು ಮತಯಾಚನೆಯಲ್ಲಿ ತೊಡಗಿದ್ದರು.
ಚುನಾವಣಾ ಕೇಂದ್ರದಲ್ಲಿ ಚುನಾವಣಾಧಿಕಾರಿಯಾಗಿ ನಾಡಕಚೇರಿ ಉಪತಹಸೀಲ್ದಾರ್ ನಿಸ್ಸಾರ್, ಕಂದಾಯಾಧಿಕಾರಿ ಚಿದಾನಂದ್, ಲೆಕ್ಕಾಧಿಕಾರಿಗಳಾದ ಸುನೀಲ್, ಮಡಿವಾಳಪ್ಪ, ಮಹಬೂಬ್, ಸಹಾಯಕರಾಗಿ ನರಸಿಂಹಮೂರ್ತಿ, ಶ್ರೀರಾಮ, ಸತೀಶ್‌ರವರು ಕಾರ್ಯನಿರ್ವಹಿಸಿದ್ದು, ಯಾವುದೇ ಸಮಸ್ಯೆಯಿಲ್ಲದೇ, ಮತದಾನ ನಡೆಯಿತು.