ನವದೆಹಲಿ,ಏ.೨೫- ದೇಶದಲ್ಲಿ ಏರುಮುಖದಲ್ಲಿದ್ದ ಕೊರೊನೋ ಸೋಂಕು ಸಂಖ್ಯೆ ಕಳೆದ ಮೂರು ದಿನಗಳಿಂದ ಇಳಿಕೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೬,೬೬೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೯,೨೧೩ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕೊರೊನಾ ಸೋಂಕಿನಿಂದ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಈ ಮೂಲಕ ಚೇತರಿಕೆಯ ಒಟ್ಟು ಸಂಖ್ಯೆ ೪,೪೩,೬೧,೪೮೦ಕ್ಕೆ ಏರಿಕೆಯಾಗಿದೆ.
ಇಂದು ೬ ಸಾವಿರಕ್ಕೂ ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೬೩,೩೮೦ ಕ್ಕೆ ಇಳಿಕೆಯಾಗಿದೆ.ಕಳೆದ ಮೂರು ದಿನಗಳಿಂದ ಕೊರೊಮಾ ಸೋಂಕು ಇಳಿಕೆಯಾಗಿದೆ . ಸೋಂಕಿನಿಂದ ಹೊಸದಾಗಿ ೯ ಸಾವಿರಕ್ಕೂ ಮಂದಿ ಚೇತರಿಸಿಕೊಂಡಿದ್ದಾರೆ.ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.೦.೧೩ಕ್ಕೆ ಹೆಚ್ಚಳವಾಗಿದೆ.
ನಿನ್ನೆ ೭,೧೭೮ ಮಂದಿಯಲ್ಲಿ ಹಾಗು ಮೊನ್ನೆ ೧೦,೧೧೨ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ದಿನದಿಂದ ದಿನಕ್ಕೆ ಸೋಂಕು ಇಳಿಕೆಯಾಗುತ್ತಿದೆ.ಇದು ತುಸು ನೆಮ್ಮದಿ ನಿಟ್ಟಿಸಿರುವ ಬಿಡುವಂತಾಗಿದೆ. ಆದರೂ ಎಚ್ಚರ ತಪ್ಪುವಂತಿಲ್ಲ ಎಂದು ಸಚಿವಾಲಯ ಹೇಳಿದೆ. ಸೋಂಕಿನಿಂದ ಇಲ್ಲಿಯ ತನಕ ೫,೩೧,೩೫೦ ಮಂದಿ ಸಾವನ್ನಪ್ಪಿದ್ದು ಸಾವಿನ ಪ್ರತಿಶತ ಪ್ರಮಾಣ ಶೇ.೧.೧೩ ರಷ್ಟು ಇದೆ. ದೇಶದಲ್ಲಿ ಹೊಸದಾಗಿ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.೯೮.೬೮ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕಿನ ದಿನದ ಪಾಸಿಟಿವಿ ಪ್ರಮಾಣ ಶೇ. ೦.೧೩ ರಷ್ಟು ಇದ್ದು ದಿನದ ಪಾಸಿಟಿವಿಟಿ ಪ್ರಮಾಣ ಶೇ ೫.೪೬ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ,ಶೇ.೫.೩೨ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.