೩ ತಿಂಗಳ ಬಳಿಕ ಕಿಲೌಯಾ ಜ್ವಾಲಾಮುಖಿ ಸ್ಫೋಟ

ಹೊನೊಲುಲು, ಜೂ. ೮-ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿರುವ ಕಿಲೌಯಾವು ಮೂರು ತಿಂಗಳ ವಿರಾಮದ ನಂತರ ಇದೀಗ ಮತ್ತೆ ಸ್ಫೋಟಗೊಳ್ಳಲು ಪ್ರಾರಂಭಿಸಿದೆ. ದೊಡ್ಡ ದ್ವೀಪದಲ್ಲಿ ಹೊಳೆಯುವ ಅದ್ಭುತವಾದ ಲಾವಾದ ಕಾರಂಜಿಗಳನ್ನು ಸೃಷ್ಟಿಸುತ್ತಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಹವಾಯಿಯನ್ ಜ್ವಾಲಾಮುಖಿ ವೀಕ್ಷಣಾಲಯವು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿ, ಜ್ವಾಲಾಮುಖಿ ಮತ್ತೆ ಬುಧವಾರ ಮುಂಜಾನೆ ಕಿಲುವೆಯ ಶಿಖರದಿಂದ ಸ್ಫೋಟಿಸಿತು, ಶಿಖರ ಕ್ಯಾಲ್ಲೆರಾದಲ್ಲಿನ ಹಲೇಮ್ ಕುಳಿಯೊಳಗೆ ಸ್ಫೋಟ ಸಂಭವಿಸುತ್ತಿದೆ ಎಂದು ತಿಳಿಸಿದೆ. ಜೊತೆಗೆ, ಕುಳಿ ನೆಲದ ಮೇಲ್ಕೆಯಲ್ಲಿ ಲಾವಾ ಹರಿಯುತ್ತಿರುವ ಮತ್ತು ಅಲ್ಲಿ ಬಿರುಕು ಬಿಟ್ಟಿರುವ ಫೋಟೋಗಳನ್ನು ವೀಕ್ಷಣಾಲಯವು ಹಂಚಿಕೊಂಡಿದೆ.
ಮುಂಜಾನೆ ಲಾವಾ ಹೊರಚಿಮ್ಮಿದ್ದು, ಇದು ಶಿಖರ ಕ್ಯಾಲ್ಲೆರಾ ಒಳಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಯಾವುದೇ ಮನೆಗಳಿಗೆ ಅಥವಾ ಮೂಲಸೌಕರ್ಯಗಳಿಗೆ ತೊಂದರೆಯಿಲ್ಲ, ಹವಾಯಿ ಜ್ವಾಲಾಮುಖಿಗಳ ರಾಷ್ಟ್ರೀಯ ಉದ್ಯಾನದ ಮುಚ್ಚಿದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ ಎಂದು ರಾಷ್ಟ್ರೀಯ ಉದ್ಯಾನವನದ ವಕ್ತಾರ ಜೆಸ್ಸಿಕಾ ಫೆರಾಕೇನ್ ಹೇಳಿದ್ದಾರೆ.
ನಿನ್ನೆ ಬೆಳಿಗ್ಗೆ ಸುಮಾರು ೪:೩೦ ಂಒ ನಾವು ೧೫೦ ಅಡಿ (೪೬ ಮೀಟರ್) ಎತ್ತರದ ಕಾರಂಜಿಗಳನ್ನು ನೋಡಲು ಸಾಧ್ಯವಾಯಿತು. ನಾನು ಸುಮಾರು ೧೫ ಕಾರಂಜಿಗಳನ್ನು ನೋಡಿದೆ ಎಂದು ಉದ್ಯಾನವನ ಸ್ವಯಂಸೇವಕ ಛಾಯಾಗ್ರಾಹಕ ಜಾನಿಸ್ ವೀ ಹೇಳಿದರು.
ಹವಾಯಿಯ ಎರಡನೇ ಅತಿದೊಡ್ಡ ಜ್ವಾಲಾಮುಖಿ ಕಿಲಾಯುವಾ, ಸೆಪ್ಟೆಂಬರ್ ೨೦೨೧ ರಿಂದ ಕಳೆದ ಡಿಸೆಂಬರ್ ವರೆಗೆ ಸ್ಫೋಟಿಸಿತು. ಹವಾಯಿಯ ಅತಿದೊಡ್ಡ ಜ್ವಾಲಾಮುಖಿಯಾದ ಮೌನಾ ಲೋವಾ ಕೂಡ ಡಿಸೆಂಬರ್ ನಲ್ಲಿ ಸುಮಾರು ಎರಡು ವಾರಗಳ ಕಾಲ ಹವಾಯಿಯ ಬಿಗ್ ಐಲ್ಯಾಂಡ್ ನಲ್ಲಿ ಸ್ಫೋಟಿಸಿತು. ಒಂದು ಸಣ್ಣ ವಿರಾಮದ ನಂತರ, ಜನವರಿಯಲ್ಲಿ ಕಿಯಾ ಮತ್ತೆ ಸ್ಫೋಟಿಸಲು ಪ್ರಾರಂಭಿಸಿತು. ಆ ಸ್ಫೋಟವು ೬೧ ದಿನಗಳ ಕಾಲ ನಡೆಯಿತು ಮತ್ತು ಮಾರ್ಚ್ ನಲ್ಲಿ ಕೊನೆಯಾಯಿತು. ಈಗ ಮತ್ತೆ ಜ್ವಾಲಾಮುಖಿ ಸ್ಫೋಟಿಸಲು ಆರಂಭಿಸಿದೆ.
ಕಳೆದ ಮಾರ್ಚ್ ಎರಡನೇ ವಾರದಲ್ಲಿ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ಮೌಂಟ್ ಮೆರಾಪಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಇದರಿಂದಾಗಿ ದಟ್ಟ ಹೊಗೆ ಮತ್ತು ಬೂದಿ ಉಗುಳಿ ನೆರೆಯ ಹಳ್ಳಿಗಳನ್ನು ಆವರಿಸಿತು. ಮೆರಾಪಿ ಜ್ವಾಲಾಮುಖಿ ವೀಕ್ಷಣಾಲಯವು ಬೂದಿಯು ಶಿಖರದಿಂದ ಸುಮಾರು ೯,೬೦೦ ಅಡಿಗಳಷ್ಟು (೩,೦೦೦ ಮೀಟರ್) ಹಾರಿಹೋಗಿದೆ ಎಂದು ಅಂದಾಜಿಸಿದೆ. ಇದಲ್ಲದೆ, ಮೆರಾಪಿ ಜ್ವಾಲಾಮುಖಿಯಿಂದ ಬಿಸಿ ಬೂದಿ, ಬಂಡೆ, ಲಾವಾ ಮತ್ತು ಅನಿಲದ ಮಿಶ್ರಣವು ಇಳಿಜಾರುಗಳಲ್ಲಿ ೭ ಕಿಲೋಮೀಟರ್ (೪.೩ ಮೈಲುಗಳು) ವರೆಗೆ ಸರಿಯಿತು ಹೋಗಿತ್ತು.