
ಅರಕೇರಾ,ಮಾ.೦೧- ಪಟ್ಟಣದಲ್ಲಿ ಎಸ್ಸೆಎಸ್ಸೆಎಲ್ಸಿ ಪ್ರಥಮ ಭಾಷೆ ಕನ್ನಡ ಮತ್ತು ಆಂಗ್ಲಬಾಷೆ ಪರೀಕ್ಷೆ ಸುಸೂತ್ರವಾಗಿ ಶುಕ್ರವಾರ ನಡೆಯಿತು.
ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢ ಶಾಲೆ ಪರೀಕ್ಷೆ ಕೇಂದ್ರ ಸಂಖ್ಯೆ ಆರ್ ಆರ್ ೦೦೪ ರಲ್ಲಿ ದಾಖಲಾತಿ ೨೦೮ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪೈಕಿ ೩ ವಿದ್ಯಾರ್ಥಿಗಳು ಗೈರಾಗಿದ್ದು ೨೦೫ ವಿದ್ಯಾರ್ಥಿಗಳು ಪರೀಕ್ಷೆ ಬರೆದರು., ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಕೇಂದ್ರ ಸಂಖ್ಯೆ ಆರ್ ಆರ್ ೦೬೮ರಲ್ಲಿ ದಾಖಲಾತಿ ೨೫೯ರ ಪೈಕಿ ೧ ಗೈರಾಗಿದ್ದು ೨೫೮ ವಿದ್ಯಾರ್ಥಿಗಳು ಪರಿಕ್ಷೆ ಬರೆದರು. ಹಾಗೂ ಸರಕಾರಿಆದರ್ಶ ವಿದ್ಯಾಲಯ ಕೇಂದ್ರ ಸಂಖ್ಯೆ ಆರ್ ಆರ್ ೨೦೧ ದಾಖಲಾತಿ ೩೧೫ ಪೈಕಿ ೨ ಗೈರಾಗಿದ್ದರು ೩೧೩ ವಿದ್ಯಾರ್ತಿಗಳು ಪರೀಕ್ಷೆ ಬರೆದರುಮೂರು ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು ೭೭೪ ನೋಂದಾಯಿತ ವಿದ್ಯಾರ್ಥಿಗಳ ಪೈಕಿ ೬ ವಿದ್ಯಾರ್ಥಿಗಳು ಗೈರಾಗಿದ್ದರು.
ವಿದ್ಯಾರ್ಥಿಗಳು ಎಸ್ಸೆಎಸ್ಸೆಎಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಅಧ್ಯಕ್ಷರಾದ ಸೂಗೂರೇಶ್ವರ ಎಸ್ ಗುಡಿ, ಶೇಖರಪ್ಪ ಗೌಡ ಮಾ.ಪಾ, ಮುಖ್ಯ ಶಿಕ್ಷಕ ಕುಮಾರ ಸ್ವಾಮಿ ಹಿರೇಮಠ ಹೂ ಗುಚ್ಛ ನೀಡಿ ಅಭಿಲಾಷಿಸಿದರು.
ಮೂರು ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕರಾದ ಕುಮಾರಸ್ವಾಮಿ ಹಿರೇಮಠ.ಜಗದೀಶಪ್ಪ ,ಬಿ.ಗಣೇಕಲ್ ಸುಂಕದ ,ಹನುಮಂತ್ರಾಯ ಶಾಖೆ.ವೆಂಕಟೇಶಪ್ಪಕೋಲಾರ.ಶ್ಯಾಮಿದ್ ಅಲಿ.ಪ್ರಕಾಶ ಬಿ.ಗಣೇಕಲ್ ಸ್ಥಾನಿಕ ಜಾಗೃತದಳ ಆರೋಗ್ಯ ಇಲಾಖೆಸಿಬ್ಬಂದಿ ಆಶಾಕಾರ್ಯಕರ್ತರು ಹಾಗೂ ಭದ್ರತಾ ದೃಷ್ಟಿಯಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸಿಸಿ ಕ್ಯಾಮೆರಾ ಕಣ್ಗಾವಲು ಸೇರಿದಂತೆ ಪರೀಕ್ಷಾ ಕೇಂದ್ರದ ಹತ್ತಿರವಿರುವ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು.