೩೭೧ (ಜೆ) ಕಲಂ ರದ್ದಿಗೆ ಪತ್ರ : ಉಗ್ರ ಹೋರಾಟಕ್ಕೆ ಮುಂದು-ಕೆ.ವಿರುಪಾಕ್ಷಪ್ಪ

filter: 0; fileterIntensity: 0.0; filterMask: 0; module: h; hw-remosaic: 0; touch: (0.25270656, 0.25270656); modeInfo: ; sceneMode: Hdr; cct_value: 0; AI_Scene: (-1, -1); aec_lux: 256.29382; hist255: 0.0; hist252~255: 0.0; hist0~15: 0.0;

ಸಂಜೆವಾಣಿ ವಾರ್ತೆ
ಸಿಂಧನೂರು.ಏ.೧೩- ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಹಾಯ ಆಗುವಂತೆ ೩೭೧ (ಜೆ) ಕಲಂ ಕೇಂದ್ರ ಸರ್ಕಾರ ಜಾರಿ ಮಾಡಿತ್ತು, ಅದನ್ನು ವಿರೋಧಿಸಿ ಹಾಲಿ ಸಚಿವರಾದ ಹೆಚ್.ಕೆ.ಪಾಟೀಲ್ ತಾರತಮ್ಯ ನೀತಿ ವಿರೋಧಿಸಿ ಮುಖ್ಯಮಂತ್ರಿ ಗಳಿಗೆ ಈ ಮುಂಚೆ ಪತ್ರ ಬರೆದಿದ್ದು ಖಂಡನೀಯ. ಸರ್ಕಾರ ಆ ಪತ್ರಕ್ಕೆ ಸಹಮತ ನೀಡಿದಲ್ಲಿ ವಿದ್ಯಾರ್ಥಿಗಳೊಂದಿಗೆ ರಸ್ತೆ ಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಹೇಳಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ೨೦೧೨ ರಲ್ಲಿ ೩೭೧ (ಜೆ) ಹೈದ್ರಾಬಾದ್ ಕರ್ನಾಟಕ ವಿಶೇಷ ಕಾಯ್ದೆಯನ್ನು ಜಾರಿಗೆ ತಂದಿತ್ತು, ಕಲ್ಯಾಣ ಕರ್ನಾಟಕ ಭಾಗದಲ್ಲದ ಗದಗ ಮೂಲದ ಸಚಿವ ಹೆಚ್.ಕೆ ಪಾಟೀಲ್ ಈ ಕಾಯ್ದೆ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಆ ಕಾರಣ ಇದನ್ನು ರದ್ದು ಪಡಿಸಬೇಕು ಎಂದು ಪತ್ರ ಬರೆದಿದ್ದಾರೆ. ಸರ್ಕಾರಿ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೇ.೮೦% ಹಾಗೂ ಕಲ್ಯಾಣ ಕರ್ನಾಟಕ ಅಲ್ಲದ ಭಾಗಗಳಲ್ಲಿ ಶೇ ೮%. ರಿಯಾಯತಿ ನೀಡಬೇಕು ಎಂಬುದು ನಿಯಮ.ನಮ್ಮ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು ಹೋರಾಟಕ್ಕೆ ಬದ್ದ ಎಂದರು.
ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಮಾತನಾಡಿ ಈಶಾನ್ಯ ರಾಜ್ಯಗಳಲ್ಲಿ (೩೭೧ ಜೆ) ಕಲಂ ಪ್ರಸ್ತುತ ಜಾರಿ ಯಲ್ಲಿದೆ. ಮಕ್ಕಳ ಶೈಕ್ಷಣಿಕ, ಸಾಮಾಜಿಕ ಪ್ರಗತಿಗಾಗಿ ಈ ಕಲಂ ಜಾರಿಯಲ್ಲಿದೆ ಹಾಗೂ ಐ.ಐ.ಟಿ ಪಡೆಯಲು ಮೂರು ಜಿಲ್ಲೆಗಳಾದ ರಾಯಚೂರು, ಧಾರವಾಡ, ಮೈಸೂರು ಶಿಪಾರಸ್ಸು ಮಾಡಲಾಗಿತ್ತು. ಕೇಂದ್ರ ಸರ್ಕಾರದ ಮೇಲೆ ಧಾರವಾಡದವರು ಹೆಚ್ಚಿನ ಒತ್ತಡ ಹಾಕಿದ ಪರಿಣಾಮವಾಗಿ ಕೊನೆಗೆ ಐ.ಐ.ಟಿ ತಪ್ಪಿತು, ಈಗ ಏಮ್ಸ್ ನಮಗೆ ದಕ್ಕ ಬೇಕು ಆಗ ಈ ಭಾಗ ಎಲ್ಲಾ ರೀತಿಯಿಂದಲೂ ಪ್ರಗತಿ ಸಾಧಿಸಲಿದೆಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣ, ಮುಖಂಡರಾದ ವೆಂಕನಗೌಡ ಕಲ್ಲೂರು, ಗೋಪಿ ಉಪಸ್ಥಿತರಿದ್ದರು.