೩೭೦ನೇ ವಿಧಿ ಮರಳಿ ತನ್ನಿ:ಕಾಂಗ್ರೆಸ್‌ಗೆ ಮೋದಿ ಸವಾಲು

ಉದಮ್ ಪುರ,ಏ.೧೨-ಭಾರತದ ಯಾವುದೇ ರಾಜಕೀಯ ಪಕ್ಷಕ್ಕೆ, ವಿಶೇಷವಾಗಿ ಕಾಂಗ್ರೆಸ್‌ಗೆ ಸಂವಿಧಾನದ ೩೭೦ ನೇ ವಿಧಿಯನ್ನು ಮರಳಿ ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆ ದೇಶದಲ್ಲಿ ಬಲಿಷ್ಠ ಸರ್ಕಾರ ರಚಿಸುವ ಚುನಾವಣೆಯಾಗಿದೆ.ಸರ್ಕಾರ ಪ್ರಬಲವಾದಾಗ ಮಾತ್ರ ಸವಾಲು ಎದುರಿಸಿ ಕೆಲಸ ಮಾಡಲು ಸಹಕಾರಿಯಾಗಲಿದೆ.ಹೀಗಾಗಿ ಬಲಿಷ್ಠ ಸರ್ಕಾರ ರಚನೆ ಮಾಡಲು ಮತ ಚಲಾಯಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅಧಿಕಾರಕ್ಕಾಗಿ, ಕೆಲವು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ ರ ಗೋಡೆ ನಿರ್ಮಿಸಿದ್ದರು ಅದನ್ನು ತೆಗೆದು ಹಾಕಿದ್ದೇವೆ. ಈಗ ಗೋಡೆಯ ಅವಶೇಷಗಳನ್ನು ನೆಲದಲ್ಲಿ ಹೂತು ಹಾಕಲಾಗಿದೆ ಎಂದು ಕಿಡಿಕಾರಿದ್ದಾರೆ.
ಇಲ್ಲಿಯವರೆಗೆ ನಡೆದಿರುವುದು ಕೇವಲ ಟ್ರೇಲರ್. ನಾನು ಹೊಸ ಜಮ್ಮು ಮತ್ತು ಕಾಶ್ಮೀರದ ಹೊಸ ಮತ್ತು ಅದ್ಭುತವಾದ ಚಿತ್ರವನ್ನು ರಚಿಸುವಲ್ಲಿ ನಿರತರಾಗುವ ಉದ್ದೇಶ ನಮ್ಮದು ಎಂದರು.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಇತರ ಎಲ್ಲಾ ಪಕ್ಷಗಳು ಜಮ್ಮು ಮತ್ತು ಕಾಶ್ಮೀರವನ್ನು ಆ ಹಳೆಯ ದಿನಗಳಿಗೆ ಹಿಂತಿರುಗಿಸಲು ಬಯಸುತ್ತವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾರೂ ಹಾನಿ ಮಾಡಿಲ್ಲ. ಈ ಕುಟುಂಬ ನಡೆಸುವ ಪಕ್ಷಗಳು ಮಾಡಿದಂತೆ ಇನ್ನು ಮುಂದೆ ಅವರ ಆಟ ನಡೆಯುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಕುಟುಂಬ ಆಡಳಿತ ದುರ್ಬಲ ಸರ್ಕಾರಗಳು ಶಹಪುರಕಂಡಿ ಅಣೆಕಟ್ಟನ್ನು ದಶಕಗಳಿಂದ ಹೇಗೆ ಸ್ಥಗಿತಗೊಳಿಸಿದ್ದವು ಎಂಬುದು ನಿಮಗೆ ನೆನಪಿದೆ. ಜಮ್ಮುವಿನ ರೈತರ ಹೊಲಗಳು ಒಣಗಿದ್ದವು ಮತ್ತು ಹಳ್ಳಿಗಳು ಒಣಗಿದ್ದವು. ಕತ್ತಲೆಯಲ್ಲಿತ್ತು, ಆದರೆ ಇಲ್ಲಿಯ ನೀರು ಪಾಕಿಸ್ತಾನಕ್ಕೆ ಹೋಗುತ್ತಿತ್ತು ಅದನ್ನು ತಡೆಯುವ ಪ್ರಯತ್ನ ಮಾಡಲಾಗಿದೆ ಎಂದು ಮೋದಿ ತಿಳಿಸಿದರು.
ನನ್ನನ್ನು ನಂಬಿ ಮತ್ತು ೬೦ ವರ್ಷಗಳ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಹೇಳಿದ್ದೆ. ಇಲ್ಲಿನ ತಾಯಂದಿರು ಮತ್ತು ಸಹೋದರಿಯರಿಗೆ ಗೌರವ ಖಾತರಿಪಡಿಸಿದ್ದೇನೆ. ಬಡವರು. ಎರಡು ಹೊತ್ತಿನ ಊಟದ ಬಗ್ಗೆ ಚಿಂತಿಸಬೇಕಾಗಿಲ್ಲ, ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಕುಟುಂಬಗಳು ಮುಂದಿನ ೫ ವರ್ಷಗಳವರೆಗೆ ಉಚಿತ ಪಡಿತರ ಖಾತರಿ ಸೌಲಭ್ಯ ಪಡೆದಿದ್ದಾರೆ ಎಂದರು

ಶೀಘ್ರ ರಾಜ್ಯ ಸ್ಥಾನಮಾನ
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ನಡೆಯುವ ಸಮಯ ದೂರವಿಲ್ಲ ಜೊತೆಗೆ ರಾಜ್ಯ ಸ್ಥಾನಮಾನ ಶೀಘ್ರ ಲಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆರಾಜ್ಯ ಸ್ಥಾನಮಾನ ಸಿಕ್ಕರೆ ಕಣಿವೆ ಪ್ರದೇಶದ ಕನಸುಗಳನ್ನು ನಿಮ್ಮ ಶಾಸಕರು ಮತ್ತು ನಿಮ್ಮ ಮಂತ್ರಿಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ