ಶ್ರೀಹರಿಕೋಟಾ,ಮಾ.೨೬-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ೩೬ ಒನ್ ವೆಬ್ ಉಪಗ್ರಹ ಹೊತ್ತ ಎಲ್ ವಿಎಂ-೩ ಯಶಸ್ವಿಯಾಗಿ ಉಡವಾಣೆಯಾಗಿದೆ.
ಎಲ್ ವಿಎಂ-೩ ರಾಕೆಟ್‌ನ ಎರಡನೇ ವಾಣಿಜ್ಯ ಉಡಾವಣೆ ಇಂದು ಬೆಳಗ್ಗೆ ೯ ಗಂಟೆಗೆ. ೫,೮೦೫ ಕೆಜಿ ಹೊತ್ತಿದ್ದ ರಾಕಟ್ ೩೬ ಮೊದಲ ತಲೆಮಾರಿನ ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಿ ಯಶಸ್ವಿಯಾಗಿ ಕಕ್ಷೆ ಸೇಸುತ್ತಿದ್ದಂತೆ ಬಾಹ್ಯಾಕಾಶ ಕೇಂದ್ರದಲ್ಲಿ ಹಗಲಿರುಳು ಕೆಲಸ ಮಾಡಿದ್ದ ವಿಜ್ಞಾನಿಗಳ ಮುಖದಲ್ಲಿ ಸಂತಸ ಮನೆ ಮಾಡಿತ್ತು.
ದೇಶದ ಅತಿದೊಡ್ಡ ವಾಣಿಜ್ಯ ಉಪಗ್ರಹ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಒನ್ ವೆಬ್ ನೊಂದಿದೆ. ಎರಡು ಹಂತಗಳಲ್ಲಿ ೭೨ ಉಪಗ್ರಹ ಉಡಾವಣೆ ಮಾಡಲು ಒಪ್ಪಂದಕ್ಕೆ ಸಹಿಹಾಕಲಾಗಿದ್ದು ೧೦೦೦ ಕೋಟಿ ರೂ ಮೊತ್ತದಾಗಿದೆ.
ಎಲ್‌ವಿಎಂ-೩ ಇಂಗ್ಲೆಂಡ್ ಮೂಲದ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್‌ನ ೩೬ ಉಪಗ್ರಹಗಳನ್ನು ಹೊತ್ತು ಆಕಾಶಕ್ಕೆ ಹಾರಿತು. ಕಂಪನಿ ೭೨ ಉಪಗ್ರಹ ಉಡಾವಣೆ ಮಾಡಲು ಇಸ್ರೋದ ವಾಣಿಜ್ಯ ವಿಭಾಗ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರ ಭಾಗವಾಗಿ ಇಂದು ಉಡಾವಣೆ ಯಶಸ್ವಿಯಾಗಿದೆ.
ಎರಡು ಸಂಸ್ಥೆಗಳ ನಡುವಿನ ಮೊದಲ ಉಪಗ್ರಹ ನಿಯೋಜನೆ ಸಹಯೋಗ ೨೦೨೨ರ ಅಕ್ಟೋಬರ್ ತಿಂಗಳಲ್ಲಿ ಇಸ್ರೋ ಒನ್‌ವೆಬ್‌ನ ೩೬ ಉಪಗ್ರಹಗಳನ್ನು ಉಡಾವಣೆ ಮಾಡಲು ಸಮ್ಮತಿ ಸೂಚಿಸಿದ್ದವು.
ಭಾರ್ತಿ ಎಂಟರ್‍ಪ್ರೈಸಸ್ ಅನ್ನು ಪ್ರಮುಖ ಹೂಡಿಕೆದಾರರಾಗಿ ಹೊಂದಿರುವ ಒನ್ ವೆಬ್, ೧೮ ನೇ ಉಡಾವಣೆ ಮತ್ತು ಈ ವರ್ಷ ಮೂರನೇ ಲಿಯೋ ಸಮೂಹದ ಮೊದಲ ಪೀಳಿಗೆ ಪೂರ್ಣಗೊಳಿಸಲಿದೆ. ಈ ವರ್ಷ ಇಸ್ರೋದ ಎರಡನೇ ಯಶಸ್ವಿ ಉಡಾವಣೆಯಾಗಿದೆ.
ಹಿಂದೆ ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣೆ ಮಾಡಲಾಗಿತ್ತು .ಕಂಪನಿ ೨೦೨೩ ರಲ್ಲಿ ಜಾಗತಿಕ ಸೇವೆಗಳನ್ನು ಹೊರತರಲಿದೆ ಎಂದು ಹೇಳಿದೆ.