೩೫ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು,ಸೆ.೫-ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಿರುವ ಸರ್ಕಾರ ಇಂದು ಮುಂಜಾನೆ ೩೫ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ಎತ್ತಂಗಡಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿ ಸರ್ಕಾರ ಅಧಿಕಾರಿಗಳಿಗೆ ಶಾಕ್ ನೀಡಿದೆ.
ರಾಜ್ಯಾದ್ಯಂತ ಪ್ರಮುಖ ಹುದ್ದೆಗಳಲ್ಲಿ ವರ್ಗಾವಣೆಯಾಗಿದ್ದು,ಡಿಸಿಪಿಗಳು ಸೇರಿ ಹಲವು ಜಿಲ್ಲೆಗಳ ಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ವರ್ಗಾವಣೆಗೊಂಡು ಖಾಲಿ ಇರುವ ಹುದ್ದೆಗಳಿಗೆ ಮತ್ತೆ ವರ್ಗಾವಣೆ ನಡೆಸಲಾಗುತ್ತದೆ.
ಬೆಂಗಳೂರು ನಗರ ಅಪರಾಧ ವಿಭಾಗ(ಸಿಸಿಬಿ)ದ ಡಿಐಜಿಪಿ ಡಾ. ಶರಣಪ್ಪ ಅವರನ್ನು ಮೈಸೂರು ಪೊಲೀಸ್ ಅಕಾಡೆಮಿ ಡಿಐಜಿಯಾಗಿ ವರ್ಗಾಯಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರನ್ನು ವರ್ಗಾಯಿಸಿ ಅವರ ಜಾಗಕ್ಕೆ ಅನುಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ.
ವೈಟ್ ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಅವರನ್ನು ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ,ಬೆಳಗಾವಿ ಎಸ್‌ಪಿ ಸಂಜೀವ್ ಎಂ. ಪಾಟೀಲ್ ಅವರನ್ನು ವೈಟ್ ಫೀಲ್ಡ್ ಡಿಸಿಪಿಯಾಗಿ,ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ,ಹುದ್ದೆ ನಿರೀಕ್ಷೆಯಲ್ಲಿದ್ದ ಡಿ. ದೇವರಾಜ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಬೆಳಗಾವಿ ಎಸ್‌ಪಿಯಾಗಿ,ರಾಜ್ಯ ಕ್ರೈಮ್ ರೆಕಾರ್ಡ್ ಬ್ಯೂರೊ ಎಸ್‌ಪಿ ವರ್ತಿಕಾ ಕಟಿಯಾರ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯಾಗಿ ನಿಯೋಜಿಸಲಾಗಿದೆ.ಉಡುಪಿ ಎಸ್‌ಪಿ ಅಕ್ಷಯ್ ಹಾಕೇ ಮಚ್ಚಿಂದ್ರ ಅವರ ಬದಲಿಗೆ ಡಾ. ಅರುಣ್ ಕುಮಾರ್ ಅವರನ್ನು ನೇಮಕ ಮಾಡಿ,ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಸಂಚಾರ ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.ಗುಪ್ತಚರ ವಿಭಾಗದ ಎಸ್‌ಪಿ ಸಂತೋಷ್ ಬಾಬು ಅವರನ್ನು ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿಯಾಗಿ, ಸಿಸಿಬಿಯ ಡಿಸಿಪಿ ಯತೀಶ್ಚಂದ್ರ ಜಿ.ಎಚ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.ಕಾರ್ಕಳ ನಕ್ಸಲ್ ನಿಗ್ರಹ ಪಡೆ ಎಸ್‌ಪಿ ನಿಕಮ್ ಪ್ರಕಾಶ್ ಅಮೃತ್ ವೈರ್‌ಲೆಸ್ ವಿಭಾಗದ ಎಸ್‌ಪಿಯಾಗಿ,ಉಡುಪಿ ಕರಾವಳಿ ರಕ್ಷಣಾ ಪಡೆ ಎಸ್‌ಪಿ ಅಬ್ದುಲ್ ಅಹದ್ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.ಕೆ. ಪರಶುರಾಮ ಅವರನ್ನು ಗುಪ್ತಚರ ಎಸ್‌ಪಿಯಾಗಿ,ವಿಜಯಪುರ ಎಸ್‌ಪಿ ಆನಂದ್ ಕುಮಾರ್ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯ ವಿಭಾಗದ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ ಡಿಸಿಪಿ ಸುಮನ್ ಪನ್ನೇಕರ್ ಅವರನ್ನು ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾಗಿ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ.
ಗುಪ್ತಚರ ಎಸ್‌ಪಿ ದೆಕ್ಕಾ ಕಿಶೋರ್ ಬಾಬು ಅವರನ್ನು ಕಲಬುರಗಿ ಪೊಲೀಸ್ ತರಬೇತಿ ಸಂಸ್ಥೆಯ ಎಸ್‌ಪಿ ಮತ್ತು ಪ್ರಾಂಶುಪಾಲರಾಗಿ ನೇಮಿಸಲಾಗಿದ್ದರೆ,ಕೆಎಸ್‌ಆರ್‌ಪಿ ಕಮಾಂಡೆಂಟ್ ಡಾ. ಕೋನಾ ವಂಶಿ ಕೃಷ್ಣ ಅವರನ್ನು ಬೆಂಗಳೂರು ಕಮಾಂಡ್ ಸೆಂಟರ್ ಡಿಸಿಪಿಯಾಗಿ ನೇಮಿಸಲಾಗಿದೆ.
ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಕ್ರೈಮ್ ರೆಕಾರ್ಡ್ ಬ್ಯೂರೋದ ಎಸ್‌ಪಿಯಾಗಿ,ಬೆಂಗಳೂರು ಸಂಚಾರ ದಕ್ಷಿಣ ಡಿಸಿಪಿ ಮೊಹಮ್ಮದ್ ಸುಜೀತಾ ಅವರನ್ನು ಹಾಸನ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.ಕಲಬುರಗಿ ಪೊಲೀಸ್ ತರಬೇತಿ ಸಂಸ್ಥೆಯ ಎಸ್‌ಪಿ ಮತ್ತು ಪ್ರಾಂಶುಪಾಲ ಅರುಣ್. ಕೆ ಅವರನ್ನು ಉಡುಪಿ ಎಸ್‌ಪಿಯಾಗಿ,ಬಾಗಲಕೋಟೆ ಎಸ್‌ಪಿ ಜಯಪ್ರಕಾಶ್ ಅವರನ್ನು ಗುಪ್ತಚರ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.ಶೇಖರ್ ಎಚ್ ತೆಕ್ಕನವರ್ ಅವರನ್ನು ಬೆಂಗಳೂರು ನಗರ ಸಿಸಿಬಿ ಡಿಸಿಪಿ-೧ಯಾಗಿ,ಸಿಐಡಿ ಎಸ್‌ಪಿ ಸಾರಾ ಫಾತಿಮಾ ಅವರನ್ನು ಬೆಂಗಳೂರು ಸಂಚಾರ ಪೂರ್ವ ವಲಯದ ಡಿಸಿಪಿಯಾಗಿ,ಗುಪ್ತಚರ ಎಸ್‌ಪಿ ಸೋನಾವನೆ ರಿಷಿಕೇಶ್ ಭಗವಾನ್ ಅವರನ್ನು ವಿಜಯಪುರ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.ಪೊಲೀಸ್ ಅಕಾಡೆಮಿ ಮೈಸೂರು ನಿರ್ದೇಶಕ ಲೋಕೇಶ್ ಭರಮಪ್ಪ ಅವರನ್ನು ಅದೇ ಸಂಸ್ಥೆಯ ಎಸ್‌ಪಿ ಮತ್ತು ಉಪ ನಿರ್ದೇಶಕರಾಗಿ ನಿಯೋಜಿಸಲಾಗಿದೆ.
ಬೆಂಗಳೂರು ಕೇಂದ್ರ ವಲಯ ಡಿಸಿಪಿ ಶ್ರೀನಿವಾಸ ಗೌಡ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗ-೨ ಡಿಸಿಪಿಯಾಗಿ ವರ್ಗಾಯಿಸಿ,ಬೆಂಗಳೂರು ದಕ್ಷಿಣ ಚಿಭಾಗದ ಕೃಷ್ಣಕಾಂತ್ ಅವರನ್ನು ಆಡಳಿತ ವಿಭಾಗದ ಸಹಾಯಕ ಪೊಲೀಸ್ ಮಹಾನಿರೀಕ್ಷಕರಾಗಿ ನೇಮಿಸಲಾಗಿದೆ.
ಕಲಬುರಗಿ ಗುಪ್ತಚರ ವಿಭಾಗದ ಎಸ್‌ಪಿ ಅಮರನಾಥ್ ರೆಡ್ಡಿ ಅವರನ್ನು ಬಾಗಲಕೋಟೆ ಎಸ್‌ಪಿಯಾಗಿ,ಹಾಸನ ಎಸ್‌ಪಿ ಹರಿರಾಂ ಶಂಕರ್ ಅವರನ್ನು ಗುಪ್ತಚರ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.ಕಲಬುರಗಿ ಕಾನೂನು ಸುವ್ಯವಸ್ಥೆ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಕಲಬುರಗಿ ಎಸ್‌ಪಿಯಾಗಿ,ಅಂಶು ಕುಮಾರ್ ಅವರನ್ನು ಉಡುಪಿ ಕರಾವಳಿ ರಕ್ಷಣಾ ಪಡೆ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.ಕನಿಕಾ ಸಿಕ್ರಿವಾಲ್ ಅವರನ್ನು ಕಲಬುರಗಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ,ಕೌಶಲ್ ಚೌಸ್ಕೆ ಅವರನ್ನು ಬೆಂಗಳೂರು ವಿಧಿವಿಜ್ಞಾನ ವಿಭಾಗದ ಜಂಟಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿ ರವೀಂದ್ರ ಕಾಶಿನಾಥ್ ಗಡಾಡಿ ಅವರನ್ನು ಗುಪ್ತಚರ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.