೩೫ನೇ ವರ್ಷಕ್ಕೆ ಕಾಲಿಟ್ಟ ನಟಿ ತಾಪ್ಸಿ ಪನ್ನು

ಮುಂಬೈ, ಆ ೧-ಬಹುಭಾಷಾ ನಟಿ ತಾಪ್ಸಿ ಪನ್ನು ಅವರಿಗೆ ಇಂದು ೩೫ನೇ ಹುಟ್ಟುಹಬ್ಬದ ಸಂಭ್ರಮ.

ತಾಪ್ಸಿ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ಅಭಿನಯಿಸುವ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೆ ತಪ್ಪಾಗಲಾರದು.

ಹಿಂದಿ ಹಾಗೂ ತೆಲುಗು ಸಿನಿರಂಗದಲ್ಲಿ ತಮ್ಮ ಅಭಿನಯದ ಮೂಲಕ ತಮ್ಮದೇ ಆದ ಸ್ಥಾನ ಪಡೆದುಕೊಂಡಿರುವ ತಾಪ್ಸಿ ಪನ್ನು ಸದ್ಯ ಬಾಲಿವುಡ್ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ತಾಪ್ಸಿ, ಇದೀಗ ಕ್ರೀಡಾಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ತಾಪ್ಸಿ ಪನ್ನು ಯಾವಾಗಲೂ ನೇರನುಡಿ. ತನ್ನ ವೃತ್ತಿಜೀವನದ ಬಗ್ಗೆ ಅಥವಾ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವಾಗ ತನ್ನ ಮಾತನ್ನು ಕಡಿಮೆ ಮಾಡದ ಖ್ಯಾತಿಯನ್ನು ಬೆಳೆಸಿಕೊಂಡಿದ್ದಾರೆ. ಮತ್ತು ಇದು ಹೊಸದೇನೂ ಅಲ್ಲ. ವರ್ಷಗಳ ಹಿಂದೆ, ಬಾಲಿವುಡ್‌ನಲ್ಲಿ ಅವರು ಇನ್ನೂ ಹೊಸ ಮತ್ತು ತುಲನಾತ್ಮಕವಾಗಿ ಕಡಿಮೆ ಸ್ಥಿರತೆ ಹೊಂದಿರುವಾಗ, ತಾಪ್ಸಿ ಅವರು ಎಂದಿಗೂ ನಟನೊಂದಿಗೆ ಡೇಟಿಂಗ್ ಮಾಡುವುದಿಲ್ಲ ಎಂದು ಘೋಷಿಸಿದರು.
ತಾಪ್ಸಿ ಪನ್ನು ಅವರು ದಿಲ್ಮೋಹನ್ ಸಿಂಗ್ ಪನ್ನು ಮತ್ತು ನಿರ್ಮಲ್ಜೀತ್ ದಂಪತಿಗಳಿಗೆ ೧ ಆಗಸ್ಟ್ ೧೯೮೭ ರಂದು ನವದೆಹಲಿಯಲ್ಲಿ ಜನಿಸಿದರು. ನಂತರ ಅಶೋಕ್ ವಿಹಾರ್‌ನಲ್ಲಿರುವ ಮಾತಾ ಜೈ ಕೌರ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ಗುರು ತೇಜ್ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ.

ಇನ್ನು, ತಾಪ್ಸಿ ಪನ್ನು ೨೦೧೦ ರಲ್ಲಿ ಕೆ. ರಾಘವೇಂದ್ರ ರಾವ್ ಅವರ ರೊಮ್ಯಾಂಟಿಕ್ ಮ್ಯೂಸಿಕಲ್ ಜುಮ್ಮಂಡಿ ನಾದಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ೨೦೧ರಲ್ಲಿ ಡಬಲ್ಸ್ ಚಿತ್ರದ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡದರು.
ಕೇವಲ ನಟನೆ ಮಾತ್ರವಲ್ಲದೆ ಪನ್ನು ದಿ ವೆಡ್ಡಿಂಗ್ ಫ್ಯಾಕ್ಟರಿ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ಜೊತೆಗೆ ಅನೇಕ ಮಹಿಳಾ ಬ್ರಾಂಡ್ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು, ತಾಪ್ಸಿ ಪನ್ನು ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್, ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು, ೨೨ ನೇ IIಈಂ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕಾಂಚನಾ ೨, ರಶ್ಮಿ ರಾಕೆಟ್, ತಪ್ಪಡ್, ಬದ್ಲಾ, ಪಿಂಕ್, ನಾಮ್ ಶಬಾನಾ, ಬೇಬಿ, ಗೇಮ್ ಓವರ್, ಸೂರ್ಮಾ, ಜುಡುವಾ, ಮಿಶನ್ ಇಂಪಾಸಿಬಲ್, ರನ್ನಿಂಗ್ ಶಾದಿ, ಡಬಲ್ಸ್, ಎಕೆ & ಎಕೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ತಾಪ್ಸಿ ಅವರಿಗೆ ಜನ್ಮದಿನದ ಶುಭಾಷಯಗಳು.