೩೪ ಲಕ್ಷ ಜೀವ ಉಳಿಸಿದ ಕೋವಿಡ್ ಲಸಿಕೆ

ನವದೆಹಲಿ/ ವಾಷಿಂಗ್ಟನ್,ಫೆ.೨೫- ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಗಿ ಕೈಗೊಂಡ ಹಿನ್ನೆಲೆಯಲ್ಲಿ ಬರೋಬ್ಬರಿ ೩೪ ಲಕ್ಷಕ್ಕೂ ಅಧಿಕ ಮಂದಿ ಜೀವ ಉಳಿಸಲಾಗಿದೆ ಎಂದು ಅಮೇರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ

ಭಾರತದಲ್ಲಿ ರಾಷ್ಟ್ರವ್ಯಾಪಿ ಕೋವಿಡ್ -೧೯ ಲಸಿಕೆ ಅಭಿಯಾನ ಕೈಗೊಳ್ಳುವ ಮೂಲಕ ದೇಶಾದ್ಯಂತ ೩.೪ ದಶಲಕ್ಷ ಕ್ಕೂ ಅಧಿಕ ಜೀವ ಉಳಿಸಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.

ದೆಹಲಿಯಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಸ್ಪರ್ಧಾತ್ಮಕ ಸಂಸ್ಥೆ ’ಹೀಲಿಂಗ್ ದಿ ಎಕಾನಮಿ: ಎಸ್ಟಿಮೇಟಿಂಗ್ ದ ಎಕನಾಮಿಕ್ ಇಂಪ್ಯಾಕ್ಟ್ ಆನ್ ಇಂಡಿಯಾಸ್ ವ್ಯಾಕ್ಸಿನೇಷನ್ ಅಂಡ್ ರಿಲೇಟೆಡ್ ಇಶ್ಯೂಸ್’ ಎಂಬ ಶೀರ್ಷಿಕೆಯ ಕೃತಿ ಬಿಡುಗಡೆ ಮಾಡಿ ಈ ತಿಳಿಸಿದ್ದಾರೆ.

ಲಸಿಕಾ ಅಭಿಯಾನದಲ್ಲಿ ೧೮.೩ ಶತಕೋಟಿ ಡಾಲರ್ ನಷ್ಟವನ್ನು ತಡೆಗಟ್ಟುವ ಮೂಲಕ ಧನಾತ್ಮಕ ಆರ್ಥಿಕ ಪರಿಣಾಮಕ್ಕೆ ಸಹಕಾರಿಯಾಗಿದೆ ಎಂದು ಎಂದಿದ್ದಾರೆ.

ಉದ್ಯೋಗದಲ್ಲಿರುವ ಪ್ರತಿ ವ್ಯಕ್ತಿಗೆ ಸುಮಾರು ೩.೪೯ ಶತಕೋಟಿ ಡಾಲರ್ ನಿಂದ ೮.೭ ಶತಕೋಟಿ ಡಾಲರ್ ವರೆಗೆ ಬದಲಾಗುತ್ತದೆ. ಲಸಿಕೆ ಮೂಲಕ ಉಳಿಸಿದ ಜೀವಗಳ ಸಂಚಿತ ಜೀವಿತಾವಧಿಯ ಗಳಿಕೆ ೨೧.೫ ಶತಕೋಟಿ ಡಾಲರ್‍ಗೆ ಎರಿದೆ ಎಂದಿದ್ಧಾರೆ.

೨೦೨೦ ರ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -೧೯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವ ಮೊದಲು, ಸಾಂಕ್ರಾಮಿಕ ನಿರ್ವಹಣೆಯ ವಿವಿಧ ಅಂಶಗಳ ಮೇಲೆ ಸಮರ್ಪಿತವಾಗಿ ಗಮನಹರಿಸುವ ಪ್ರಕ್ರಿಯೆಗಳು ಮತ್ತು ರಚನೆಗಳನ್ನು ಜಾರಿಗೆ ತರಲಾಯಿತು ಎಂದು ಮಾಂಡವಿಯಾ ಹೇಳಿದ್ದಾರೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಕೋವಿಡ್ -೧೯ ರ ಪರಿಣಾಮಕಾರಿ ನಿರ್ವಹಣೆಗಾಗಿ ಸಮಗ್ರ ಪ್ರತಿಕ್ರಿಯೆ ತಂತ್ರ ಅಳವಡಿಸಿಕೊಂಡಿದೆ ಎಂದು ತಿಳಿಸಿದೆ.