೩೧ ಕಿ.ಮೀ ದ್ವಿಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಕಳಪೆ ಆರೋಪ

ಲಿಂಗಸುಗೂರ,ಏ.೧೬- ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯನ್ನು ನೂರಾರು ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನಾಗಿಸಲು ನಡೆಸಲಾಗುತ್ತಿರುವ ನಿರ್ಮಾಣ ಕಾಮಗಾರಿಯು ಲಿಂಗಸುಗೂರ ತಾಲೂಕಿನ ಹೂನ್ನಾಳಿ ಗ್ರಾಮದಿಂದ ಒಂದು ಕಿಲೋ ಮೀಟರ ಅಂತರದಲ್ಲಿ ಬರುವ ದೇವನಹಳ್ಳದಿಂದ ಮುದಬಾಳ ಕ್ರಾಸ್ ನವರೆಗೆ ಒಟ್ಟು ೩೧ ಕೀಲೋ ಮೀಟರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಕಳೆದ ೪ ಮತ್ತು ೫ ತಿಂಗಳಿನಿಂದ ೩೧ ಕಿಲೋಮೀಟರ್ ರಸ್ತೆ ಕಾಮಗಾರಿಯು ಆಮೆ ವೇಗದಲ್ಲಿ ನಡೆಯುತ್ತಿದ್ದು, ಸದರಿ ದ್ವಿಪಥ ರಸ್ತೆ ಕಾಮಗಾರಿಯು ಕರ್ನಾಟಕ ಸರಕಾರದಾಗಿದ್ದು ರಾಷ್ಟ್ರೀಯ ಹೆದ್ದಾರಿ ನಿಗಮದ ಉಸ್ತುವಾರಿಯಲ್ಲಿದೆ. ಅಂದಾಜು ೧೮೫ ಕೋಟಿರೂಗಳದಾಗಿದ್ದು ದ್ವಿಪಥ ರಸ್ತೆ ಜೊತೆ ಜೊತೆ ಸೇತುವೆಗಳ ನಿರ್ಮಾಣವಾಗಬೇಕು ಸದರಿ ಕಾಮಗಾರಿ ಗುತ್ತಿದಾರರು ಸ್ಥಳೀಯ ಎಸ್.ಎಚ್ ಅಮ್ಮಾಪೂರ ಕಂಪನಿಯವರು ಪಡೆದಿದ್ದು ಇಪಿಸಿ ಮೋಡ ಅಂದರೆ ಕೆಲವೆಡೆ ಕಮ್ಮಿ ಕೆಲವಡೆ ಹೆಚ್ಚು ಹಾಗೂ ಮಧ್ಯದಲ್ಲಿ ಬರುವ ಸೇತಯವೆಗಳ ಕಾಮಗಾರಿ ತಾಂತ್ರಿಕವಾಗಿ ಗುಣಮಟ್ಟದ್ದಾಗಿ ಮಾಡುವದಾಗಿದೆ. ಆದರೆ ಕಾಮಗಾರಿ ಗುತ್ತಿಗೆದಾರ ಡಿಸೈ ಹಾಗೂ ಇಲಾಖೆ ಡಿಸೈನ ಮೇಲೆ ಮಾಡುವ ಗುತ್ತಿಗೆ ಹೊಂದಿರುವರಿಂದ ತಾಂತ್ರಿಕವಾಗಿ ಗುಣಮಟ್ಟದ ರಸ್ತೆಯಾಗಿ ಸಂಚರಿಸುವ ವಾಹನಗಳಿಗೆಅನೂಕೂಲವಾಗುವದು ಮುಖ್ಯ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆದರೆ ರಸ್ತೆ ಕಾಮಗಾರಿಯು ಗುಣ ಮಟ್ಟದಿಂದ ಕೂಡಿರುವುದಿಲ್ಲಾ. ರಸ್ತೆ ವಿಸ್ತರಣೆ ಮಾಡಿ ಹೊಸದಾಗಿ ರಸ್ತೆ ಮಾಡುವಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯನ್ನು ತೀರ ಅವೈಜ್ಞಾನಿಕವಾಗಿ ಕಂಕರ ಮರಮ ಹಾಗೂ ಡಾಂಬರ ಬಳಸಿ ರಸ್ತೆ ನಿರ್ಮಾಣ ಮಾಡುತ್ತಿದ್ದು ಕೊಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೂಳ್ಳಬೇಕು .
ಇದರಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಪ್ರಾಣಕಳೆದುಕೊಳ್ಳುವಂತಾಗಿದೆ. ಸೂಚನಾ ಫಲಕಗಳಿಲ್ಲ ಅಧಿಕಾರಿಗಳು, ಗುತ್ತಿಗೆ ದಾರರು ನಿತ್ಯ ಓಡಾಡುವ ವಾಹನಗಳ ಸುರಕ್ಷಿತ ಪ್ರಯಾಣಕ್ಕೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಕಾಮಗಾರಿ ನಡೆಯು ತ್ತಿದ್ದರೂ ಯಾವುದೇ ಸೂಚನಾ ಫಲಕಗಳಿಲ್ಲ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ವಾಹನ ಗಳು ವೇಗವಾಗಿ ಬರುವುದರಿಂದ ಅಪಘಾತಗಳು ಸಂಭವಿಸಬಹುದು. ರಸ್ತೆ ಅಕ್ಕಪಕ್ಕ ಕಾಮಗಾರಿ ನಡೆಯುತ್ತಿರುವುದರಿಂದ ಮಣ್ಣು, ಜಲ್ಲಿ-ಕಲ್ಲುಗಳು ರಸ್ತೆಗೆ ಬೀಳುವುದು, ಕಾಮಗಾರಿ ನಡೆಸುವಾಗ ಬಿದ್ದಿರುವ ಗುಂಡಿಗಳಿಂದ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಸೇರಿದಂತೆ ಆಯತಪ್ಪಿ ಬಿದ್ದರೆ ಅಪಘಾತಗಳು ಸಂಭವಿಸಿದರೆ ಇದಕ್ಕೆ ಯಾರು ಹೂಣೆಗಾರರು.
ರಸ್ತೆ ಕಾಮಗಾರಿಗೆ ಬಳಸುತ್ತಿರುವ ಜಲ್ಲಿಕಲ್ಲು ಹಾಗೂ ಪೌಡರ ಮಿಕ್ಸಿಂಗನಿಂದ ಕೂಡಡಿದ ಕಂಕರ್ ರಸ್ತೆ ಮೇಲೆ ಹಾಕಿದ ಮೇಲೆ ರಸ್ತೆಯ ಮೇಲೆ ಭಾರಿ ಗಾತ್ರದ ವಾಹನಗಗಳು ಸಂಚಾರಿಸುವಾಗ ರಸ್ತೆ ಎಲ್ಲಾ ದೂಳಿನಿಂದ ಕೂಡಿದ್ದು ರಸ್ತೆ ಮೇಲೆ ಸಂಚಾರಿಸುವ ಸವಾರರಿಗೆ ಸುತ್ತಮತ್ತಲು ಇರುವ ಗ್ರಾಮಗಳ ಜನರಿಗೆ ಉಸಿರಾಟದ ಸಮಸ್ಯೆಯುಂಟಾಗುತ್ತಿದೆ.
ರಸ್ತೆ ಕಾಮಗಾರಿ ಮಾಡುವಾಗ ರಸ್ತೆ ಬದಿಯಲ್ಲಿ ಮಾತ್ರ ರಸ್ತೆ ಅಗೆದು ಮರಮ್ ಕಂಕರ ಪೌಡರ ಮಿಕ್ಸಿಂಗನ್ನು ಹಾಕಿ ಮಾಡುತ್ತಿದ್ದು ರಸ್ತೆ ಮಧ್ಯೆದಲ್ಲಿ ಹಾಗೇ ಡಾಂಬರೀಕರಣ ಮಾಡುತ್ತಿದ್ದು ಕೂಡಲೇ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿ ಪರೀಶೀಲನೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಸರ್ಜಾಪುರ ಆರೋಪಿಸಿದ್ದಾರೆ.