೩೦೦ ಕ್ಕೂ ಹೆಚ್ಚ ಯುವಕರು ಕಾಂಗ್ರೆಸ್ ಸೇರ್ಪಡೆ

ರಾಯಚೂರು,ಮಾ.೨೭-
ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ಅವರ ಸರಳತೆಯ ನಾಯಕತ್ವ ಮೆಚ್ಚಿ ವಾರ್ಡ್ ೨೭ ರ ಜಲಾಲ್ ನಗರ, ನೀರಬಾವಿಕುಂಟಾ ಮುಖಂಡರಾದ ಗುಡ್ಸಿ ಸೋಮಶೇಖರ್, ಪುಂಡ್ಲ ತಿರುಮಲರಡ್ಡಿ, ಗೋಪಿ, ವೀರೇಶ, ಕುರುಬರು ವೀರೇಶ, ಬಾಯಿದೊಡ್ಡಿ ಮಹೇಶ, ಅರವಿಂದ ಕಬ್ಬೇರ ಸೇರಿದಂತೆ ೩೦೦ ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೊಸರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ನಿಜಲಿಂಗಪ್ಪ ಕಾಲೋನಿಯ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ಅವರ ನಿವಾಸದಲ್ಲಿ ಸೇರ್ಪಡೆಯಾದರು.
ರಾಯಚೂರು ನಗರ ಕ್ಷೇತ್ರದ ಅಭಿವೃದ್ದಿಗಾಗಿ ಬಿಜೆಪಿಗೆ ಬೆಂಬಲ ನೀಡಿದ್ದೆವು ಆದರೆ ಶಾಸಕರು ಯಾವುದೆ ಅಭಿವೃದ್ದಿ ಮಾಡದ ಕಾರಣ ಭರವಸೆ ಹುಸಿ ಮಾಡಿದ್ದು, ಶಾಸಕರ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ತತ್ವ ಸಿದ್ದಾಂತವನ್ನು ಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ.
ಕಾಂಗ್ರೆಸ್ ಮುಖಂಡರಾದ ಮಾಜಿ ನಗರಸಭೆ ಸದಸ್ಯ ವೀರೇಶ ಬೂತಪ್ಪ, ಪೋಗುಲ್ ಚಂದ್ರಶೇಖರ ರಡ್ಡಿ, ಎನ್ ಶ್ರೀನಿವಾಸ್ ರಡ್ಡಿ, ಗುಡ್ಸಿ ತಿಮ್ಮಾ ರಡ್ಡಿ ನೇತೃತ್ವದಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಎನ್ ಎಸ್ ಬೋಸರಾಜು ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ವಾಗಲ್ ಸೋಮು, ಹೋಟೆಲ್ ಮಲ್ಲು, ರಾಮು, ಕೊಂದೊಡ್ಡಿ ಹರಿ, ವಿನೋದ್, ಮಡಿವಾಳ ವಿಜಯ್, ವೀರೇಶ ರಡ್ಡಿ ಸೇರಿದಂತೆ ಅನೇಕರು ಇದ್ದರು.