
ನವದೆಹಲಿ, ಮಾ.೫-೨೦೨೬ರ ವೇಳೆಗೆ ೩೦೦ ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಎಲೆಕ್ಟ್ರಾನಿಕ್ಸ್ ಸರಕುಗಳನ್ನು ತಯಾರಿಸಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲೆಕ್ಟ್ರಾನಿಕ್ಸ್ ಉತ್ಪನ್ನ ಮಾರುಕಟ್ಟೆಯನ್ನು ವಿಸ್ತರಿಸುವ ದೂರದೃಷ್ಟಿ ಹೊಂದಿದ್ದಾರೆ.
ಜಾಗತಿಕ ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಭಾರತವು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು, ೨೦೨೬ರ ವೇಳೆಗೆ ಭಾರತವು ೩೦೦ ಶತಕೋಟಿ ಅಮೆರಿಕನ್ ಡಾಲರ್ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಮಾಡಲಿದೆ ಎಂದರು.
ಎಲೆಕ್ಟ್ರಾನಿಕ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಸ್ಪಷ್ಟ ಚಿತ್ರಣವಿದೆ. ಶೀಘ್ರದಲ್ಲೇ ಭಾರತದಲ್ಲಿ ವಿನ್ಯಾಸ, ಪ್ಯಾಕೇಜಿಂಗ್, ಫ್ಯಾಬ್ರಿಕೇಶನ್ ಮತ್ತು ಉತ್ಪಾದನೆ ಸೇರಿದಂತೆ ಸಮಗ್ರ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಇದು ಉತ್ಪಾನೆಯನ್ನು ಹೆಚ್ಚಿಸುವ ಮೂಲಕ, ಈ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಆಟಗಾರನನ್ನಾಗಿ ಮಾಡುತ್ತದೆ.
ಇನ್ನೂ, ನಾವು ಆಧುನಿಕ ಕಾನೂನುಗಳ ಚೌಕಟ್ಟನ್ನು ರಚಿಸುತ್ತಿದ್ದೇವೆ. ಭಾರತವು ನಾವೀನ್ಯತೆಗೆ ಜಾಗತಿಕ ಕೇಂದ್ರವಾಗುತ್ತಿದೆ. ನಮ್ಮ ಸ್ಟಾರ್ಟ್-ಅಪ್‌ಗಳನ್ನು ಸಕ್ರಿಯಗೊಳಿಸಲು, ಆಧುನಿಕ ನೀತಿಗಳ ಚೌಕಟ್ಟು ಅತ್ಯಂತ ಪ್ರಮುಖವಾಗಿದೆ. ನಾವು ಶೀಘ್ರದಲ್ಲೇ ಡಿಜಿಟಲ್ ಇಂಡಿಯಾ ಆಕ್ಟ್ ಅನ್ನು ಜಾರಿಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ವರ್ಷದಿಂದ, ಮೊಬೈಲ್ ಫೋನ್‌ಗಳು ಭಾರತದಿಂದ ರಫ್ತು ಮಾಡುವ ಟಾಪ್ ೧೦ ವಿಭಾಗಗಳಲ್ಲಿ ಸೇರಿವೆ. ಜಾಗತಿಕ ಬ್ರ್ಯಾಂಡ್‌ಗಳಲ್ಲಿ ಈ ಬದಲಾವಣೆಯು ಭಾರತವನ್ನು ಜಾಗತಿಕ ಉತ್ಪಾದನಾ ತಾಣವಾಗಿ ಹುಡುಕಲು ಕಾರಣವಾಗುವ ದೃಷ್ಟಿಕೋನ ಮತ್ತು ನೀತಿಯ ಚೌಕಟ್ಟನ್ನು ಸೃಷ್ಟಿಸಲಿದೆ ಎಂದೂ ಉಲ್ಲೇಖಿಸಿದರು.