೩೦ರ ಯವಕ ಕೊರೋನಾಗೆ ಬಲಿ: ಗ್ರಾಮದ ಜನರಿಗೆ ನಡುಕ

ಗಬ್ಬೂರು.ಏ.೨೭-ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಶಿವಮ್ಮ ಶಿಕ್ಷಕಿಯ ಮಗನಾದ ಭೀಮಾಶಂಕರ ಸೋಮವಾರ ಮಧ್ಯರಾತ್ರಿ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ರೋಗಕ್ಕೆ ಬಲಿಯಾಗಿದ್ದಾನೆ.
ರಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೩೦ವರ್ಷದ ಯುವಕ ಕೊರೋನಾ ಸೋಂಕಿತ ಸೋಮವಾರ ಮಧ್ಯರಾತ್ರಿ ೧೨ಘಂಟೆಗೆ ಸಾವನ್ನಪ್ಪಿದ್ದಾನೆ. ಇದು ರಾಯಚೂರಿನಲ್ಲಿ ಮತ್ತಷ್ಟು ಭಯ ಹುಟ್ಟಿಸಿದೆ. ಸೋಮವಾರ ರಾತ್ರಿ ಯುವಕನನ್ನು ಬಲಿ ಪಡೆದಿದ್ದ ಡೆಡ್ಲಿ ಕೊರೋನಾ, ಕೆಲ ದಿನಗಳ ಹಿಂದೆ ಜ್ವರ ಬಂದ ಕಾರಣಕ್ಕೆ೩೦ವರ್ಷದ ಯುವಕನೋರ್ವ ರಾಯಚೂರಿನ ರಿಮ್ಸ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈತನ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಯವಕನಿಗೆ ಕೊರೋನಾ ಸೋಂಕಿರುವ ದೃಢಪಟ್ಟಿದೆ. ನಂತರ ಈತನನ್ನು ರಿಮ್ಸ ಆಸ್ಪತ್ರೆದಿಂದ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಮಧ್ಯರಾತ್ರಿ ಸಾವನ್ನಪ್ಪಿದ್ದಾನೆ.ಹೀಗಾಗಿ ಗ್ರಾಮದ ಜನರಲ್ಲಿ ಆರೋಗ್ಯದ ಭೀತಿ ವ್ಯಕ್ತಿಗಳಿಗೂ ಕೊರೋನಾ ಡೆಡ್ಲಿ ವೈರಸ್ ಆಗುತ್ತಿದೆಯೇ ಎಂದು ನಡುಕ ಎದುರಾಗಿದೆ.ಮೃತನ ಪತ್ನಿ,ಒರ್ವ ಆರೇಳು ತಿಂಗಳ ಪುತ್ರಿ ಅಪಾರ ಬಂಧು- ಬಳಗವನ್ನು ಬಿಟ್ಟು ಅಗಲಿದ್ದಾರೆ, ಕೊತ್ತದೊಡ್ಡಿ ಗ್ರಾಮದಲ್ಲಿ ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ ನಡೆಯಿತು ಎಂದು ದಶವಾನ ನಾಯಕ ಹಾಗೂ ಪ್ರಭು ದೊರೆ ಸಂಜೆವಾಣಿಗೆ ತಿಳಿಸಿದರು.