೩ನೇ ಬಾರಿ ಎನ್‌ಡಿಎ ಸರ್ಕಾರ

ಮಿರ್ಜಾಪುರ್, ಮೇ.೨೬- ದೇಶದಲ್ಲಿ ಜೂನ್ ೪ ರಂದು ಮಂಗಳಕರ ದಿನ. ಅಂದು ಮೂರನೇ ಬಾರಿಗೆ ಮೂರನೇ ಬಾರಿಗೆ “ಮೋದಿ ನೇತೃತ್ವದ ಸರ್ಕಾರ” ಕೇಂದ್ರದಲ್ಲಿ ರಚನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ದೇಶದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ ಡಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ. ಇದಕ್ಕೆ ಪ್ರಮುಖ ಕಾರಣ ರಾಷ್ಟ್ರ ನಿಷ್ಟ ಮೋದಿ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ೭ನೇ ಹಾಗು ಕೊನೆಯ ಹಂತದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು ದೇಶ ಮೊದಲು ಎನ್ನುವ ನೀತಿ ಅನುಸರಿಸುತ್ತಿದ್ದೇನೆ, ಇದು ತಮ್ಮನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈಗಾಗಲೇ ೬ ಹಂತದ ಲೋಕಸಭೆಯ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಎಲ್ಲಾ ೬ ಹಂತಗಳಲ್ಲಿ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುವ ಘೋಷಣೆ ಮೊಳಗುತ್ತಿದೆ. ದೇಶದಲ್ಲಿ ನಡೆದ ಆರು ಹಂತಗಳಲ್ಲಿ ಸಾರ್ವಜನಿಕರು ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಸಜ್ಜಾಗಿದ್ದಾರೆ ಎಂದು ತಿಳಿಸಿದ್ದಾರೆ.
ಐದು ವರ್ಷದಲ್ಲಿ ಐವರು ಪ್ರಧಾನಿ:
ದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆ ಆದರೆ ಐದು ವರ್ಷದಲ್ಲಿ ಐವರು ಪ್ರಧಾನ ಮಂತ್ರಿಗಳನ್ನು ನೇಮಕ ಮಾಡುತ್ತಾರೆ ದೇಶದಲ್ಲಿ ಅಂತಹ ಘಟನೆಗಳಿಗೆ ಅವಕಾಶ ಮಾಡಿಕೊಡದಿರಿ ಎಂದು ಕಿವಿಮಾತು ಹೇಳಿದರು.
ಭಾರತದಂತಹ ದೊಡ್ಡ ದೇಶದಲ್ಲಿ ಓರ್ವ ಮತ್ತು ಸುಭದ್ರ ಸರ್ಕಾರವಿದ್ದಾಗ ದೇಶದಲ್ಲಿ ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ. ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ ನೀಡಿದರೆ ಪ್ರತಿ ವರ್ಷ ಐವರು ಪ್ರಧಾನಿ ಮಾಡುವ ಹುನ್ನಾರ ಅವರದು ಎಂದಿದ್ದಾರೆ.
ಬಲಿಷ್ಠದೇಶವನ್ನು ನಿರ್ಮಿಸಲು ಬಲಿಷ್ಠ ಪ್ರಧಾನಿಯನ್ನು ಆಯ್ಕೆ ಮಾಡಿ. ಅದಕ್ಕಾಗಿಯೇ ಎನ್‌ಡಿಎಗೆ ಭಾರಿ ಬೆಂಬಲ ನೀಡಿ ಯಾರೂ ತಮ್ಮ ಹುದ್ದೆಯನ್ನು ವ್ಯರ್ಥ ಮಾಡಲು ಬಯಸುವುದಿಲ್ಲ ದೇಶದಲ್ಲಿ ಮೂರನೇ ಭಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದರೆ ಪ್ರತಿ ಮತವೂ ವ್ಯರ್ಥವಾಗುತ್ತದೆ. ಜೊತೆಗೆ ಒಂದು ಸಮುದಾಯವನ್ನು ಒಲೈಸುವ ತುಷ್ಠೀಕರಣ ರಾಜಕೀಯ ಮಾಡುತ್ತಾರೆ ಅದಕ್ಕೆ ಅವಕಾಶ ನೀಡಬೇಡಿ ಎಂದರು.

ತುಷ್ಠೀಕರಣಕ್ಕೆ ಒತ್ತು
ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಆದಾಗಲೆಲ್ಲಾ ತುಷ್ಠೀಕರಣ ರಾಜಕಾರಣ ಮಾಡಲಾಗಿದೆ. ಅದನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ತುಷ್ಠೀಕರಣ ಮತ್ತು ತೀವ್ರ ಸ್ವಜನ ಪಕ್ಷಪಾತಿಗಳನ್ನು ದೇಶದ ಜನರು ಕಾಲ ಕಾಲಕ್ಕೆ ಸರಿಯಾಗಿ ನೋಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಸರ್ಕಾರದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿತ್ತು. ಯೋಗಿ ಆದಿತ್ಯನಾಥ್ ಬಂದ ನಂತರ ಮಾಫಿಯಾ ಮಂದಿ ನಡುಗುತ್ತಿದ್ದಾರೆ ಎಂದು ಹೇಳಿದರು.