ನವದೆಹಲಿ,ಏ.೧೫- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಸತತ ಮೂರನೇ ದಿನವೂ ೧೦ ಸಾವಿರಕ್ಕಿಂತ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ. ನಿನ್ನೆ ದಾಖಲಾಗಿದ್ದ ಸೋಂಕಿಗಿಂತ ತುಸು ಕಡಿಮೆ ದೃಢಪಟ್ಟಿದೆ.
ಕಳೆದ ೨೪ ಗಂಟೆಗಳಲ್ಲಿ ೨೭ ಮಂದಿ ಸೊಂಕಿಗೆ ಮೃತಪಟ್ಟಿದ್ದರು. ಇದು ಆತಂಕಕ್ಕೆ ಕಾರಣವಾಗಿದೆ.ದೇಶದಲ್ಲಿ ಸತತ ಮೂರನೇ ೧೦ ಸಾವಿರ ಗಡಿ ದಾಟಿ ಸೋಂಕು ಕಾಣಿಸಿಕೊಂಡಿದೆ.ನಿನ್ನೆ ೧೧,೧೦೯ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇಂದು ೧೦,೭೫೩ ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇದೇ ಅವಧಿಯಲ್ಲಿ ೬,೬೨೮ ಮಂದಿ ಸೋಂಕಿನಿಂದ ಚೇತರಿಸಿಕೊಂಡು ತೆರಳಿದ್ದಾರೆ.
ಕಳೆದ ಹಲವು ದಿನಗಳಿಂದ ಇಳಿಕೆಯಾಗಿದ್ದ ಕೊರೊನಾ ಸೋಂಕು ಕಳೆದ ಎರಡು ದಿನಗಳಿಂದ ಏರಿಳಿತವಾಗುತ್ತಿz. ಕಳೆದ ೨೪ ಗಂಟೆಯ ಅವಧಿಗಳಲ್ಲಿ ೧೦,೭೮೩ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ೫೩,೭೨೦ ದಾಟಿದೆ .ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ೫೦ ಸಾವಿರ ಗಡಿ ದಾಟಿದೆ. ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕಿನ ವಿವಿಧ ಉಪತಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯ ಎರಿಕೆಗೆ ಕಾರಣವಾಗಿದ್ದು ಇಂದೂ ಸೋಂಕು ಹೆಚ್ಚಳ ಕಂಡಿದೆ.
ಸೋಂಕಿನಿಂದ ಹೊಸದಾಗಿ ೬ ಸಾವಿರಕ್ಕೂ ಮಂದಿ ಚೇತರಿಸಿಕೊಂಡಿದ್ದು ಚೇತರಿಕೆಯ ಒಟ್ಟು ಸಂಖ್ಯೆ ೪,೪೨,೨೩,೨೧೧ ಕ್ಕೆ ಏರಿಕೆಯಾಗಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.೦.೧೨ ಕ್ಕೆ ಹೆಚ್ಚಳವಾಗಿದೆ. ಸೋಂಕಿನಿಂದ ಇಲ್ಲಿಯ ತನಕ ೫,೩೧,೦೭೬ ಮಂದಿ ಸಾವನ್ನಪ್ಪಿದ್ದು ಸಾವಿನ ಪ್ರತಿಶತ ಪ್ರಮಾಣ ಶೇ.೧.೧೯ ರಷ್ಟು ಇದೆ. ಎಂದು ಹೇಳಿದೆ.
ದೇಶದಲ್ಲಿ ಹೊಸದಾಗಿ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.೯೮.೬೯ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ಅಂಕಿಅಂಶ ನೀಡಿದೆ.
ಕೊರೊನಾ ಸೋಂಕಿನ ದಿನದ ಪಾಸಿಟಿವಿ ಪ್ರಮಾಣ ಶೇ. ೦.೧೨ ರಷ್ಟು ಇದ್ದು ದಿನದ ಪಾಸಿಟಿವಿಟಿ ಪ್ರಮಾಣ ಶೇ ೬.೭೮ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ,ಶೇ.೪.೪೯ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧,೫೮,೬೨೫ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಿದ್ದು ಇಲ್ಲಿಯ ತನಕ ೯೨.೩೮ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ. ಜೊತೆಗೆ ಇದೇ ಅವಧಿಯಲ್ಲಿ ೩೯೭ ಮಂದಿಗೆ ಲಸಿಕೆ ಹಾಕಿದ್ದು ಇದುವರೆಗೆ ೨೨೦.೬೬ ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.