೩ನೇ ದಿನವೂ ಇಂಧನ ದರ ಏರಿಕೆ

ನವದೆಹಲಿ, ನ ೨೨- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಸತತ ಮೂರನೇ ದಿನವೂ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.
ಮುಂಬೈನಲ್ಲಿ ಭಾನುವಾರ ಅಂದರೆ ಇಂದು ಪ್ರತಿ ಲೀಟರ್ ಪೆಟ್ರೋಲ್‌ಗೆ ೮೮.೦೯, ಪ್ರತಿ ಲೀಟರ್ ಡೀಸೆಲ್ ೭೭.೩೪ ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ೮೪.೧೦ , ಡೀಸೆಲ್ ದರ ೭೫.೧೪ ರೂ ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಮಂಗಳೂರಿನಲ್ಲಿ ೮೩.೩೦ ಗೆ ಪೆಟ್ರೋಲ್ ೭೪.೩೭ ಗೆ ಡೀಸೆಲ್ ಮಾರಾಟವಾಗುತ್ತಿದೆ.
ಶೀಘ್ರದಲ್ಲೇ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾದ ಬಗ್ಗೆ ಸಕಾರಾತ್ಮಕ ಸುದ್ದಿಗಳ ಹರಿದಾಡಿದ ಬಳಿಕ ಜಾಗತಿಕ ತೈಲ ಮಾರುಕಟ್ಟೆಯು ಸದೃಢತೆಯ ಲಕ್ಷಣಗಳು ತೋರಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ. ಗ್ರಾಹಕ ಮಾರುಕಟ್ಟೆಗಳಲ್ಲಿ ತೈಲದ ಬೇಡಿಕೆ ಮತ್ತು ದಾಸ್ತಾನು ಮಟ್ಟ ಕುಸಿಯುತ್ತಿವೆ. ಶುಕ್ರವಾರ ಮತ್ತು ಶನಿವಾರ ವಾಹನ ಇಂಧನ ದರ ಹೆಚ್ಚಳ ಸೂಚನೆಯು ಮುಂದಿನ ವಾರದಲ್ಲಿ ಎರಡು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕ್ರಮೇಣ ಹೆಚ್ಚಾಗಬಹುದು ಎಂದು ಒಎಂಸಿ ಮೂಲಗಳು ತಿಳಿಸಿವೆ.