೩ನೇ ದಿನಕ್ಕೆ ಕಾಲಿಟ್ಟ ಧರಣಿ ತಹಶಿಲ್ದಾರರ ವಿರುದ್ಧ ಆಕ್ರೋಶ

ಗಬ್ಬೂರು.ಸೆ.೧೪- ಸಮೀಪದ ಮಸೀದಪುರಿನ ದಲಿತ ಕೇರಿ ಸಮಸ್ಯೆ ಬಗ್ಗೆ ಮಸೀದಪುರು ಗ್ರಾಮದಿಂದ ಗಬ್ಬೂರು ನಾಢ ಕಛೇರಿಯವರೆಗೆ ಕಾಲ್ನಡಿಗೆ ಜಾಥ ಹಾಗೂ ನಾಢ ಕಛೇರಿಯ ಮುಂದೆ ೩ನೇ ದಿನಕ್ಕೆ ಅಹೋ ರಾತ್ರಿ ಧರಣಿ ಕಾಲಟ್ಟಿರು ಸಹ ಸ್ಥಳಕ್ಕೆ ಬಾರದ ದೇವದುರ್ಗ ತಾಲ್ಲೂಕು ಪ್ರಭಾರಿ ತಹಶಿಲ್ದಾರರಾದ ಶ್ರೀನಿವಾಸ ಚಾಪೆಲ್ ವಿರುದ್ಧ ಮಾದಿಗ ಮೀಸಲಾತಿ ಸಮಿತಿ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದುವರೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ವಂದಿಸದೆ ಇರುವುದಕ್ಕೆ ನರಕಯಾತನೆ ಅನುಭವಿಸುತ್ತಿರುವ ಮಾದಿಗ ಸಮುದಾಯದವರು ಹಿಡಿ ಶಾಪ ಹಾಕುತ್ತಿದ್ದಾರೆ.
ದಲಿತ ಕೇರಿ ಸ್ಥಳಾಂತರಿಸಿ ಶಾಶ್ವತ ಪರಿಹಾರ ನೀಡಬೇಕೆಂದು ಮಕ್ಕಳು ಮರಿ ಕುಟುಂಬ ಸಮೇತವಾಗಿ ಮಸೀದಪುರು ಗ್ರಾಮದಿಂದ ಗಬ್ಬೂರು ನಾಢ ಕಚೇರಿ ಆವರಣದಲ್ಲಿ ಅಹೋ ರಾತ್ರಿ ಧರಣಿ ಇವತ್ತಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.ನಮ್ಮ ಹೋರಾಟಕ್ಕೆ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮರೆಪ್ಪ ಮಲದಕಲ್ ಶಾಂತಕುಮಾರ ಹೊನ್ನಟಿಗಿ,ರಾಜಪ್ಪ ಸಿರವಾರಕರ್,ನರಸಪ್ಪ ಎನ್ ಗಣೇಕಲ್, ತುಕರಾಮ್, ಬಸವಲಿಂಗ, ಮಲ್ಲಯ್ಯ ಖಾನಾಪೂರ,ಹುಲಿಗೆಪ್ಪ ಹೊನ್ನಟಿಗಿ, ಮಸೀದಪುರು ಗ್ರಾಮದ ಮಹಿಳೆಯರು, ಯುವಕರು ಹಾಗೂ ಸುತ್ತಮುತ್ತಲಿನ ಮಾದಿಗ ಸಮುದಾಯದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.