೩ನೇ ಅಲೆ ಎದುರಿಸಲು ರಾಜ್ಯಗಳು ತಯಾರಿ


ನವದೆಹಲಿ, ಮೇ,೨೮-ದೇಶದಲ್ಲಿ ಮಾರಕ ಕೊರೊನಾ ಎರಡನೇ ಅಲೆ ಅಬ್ಬರಿಸಿ ಬೊಬ್ಬಿರಿದಿದೆ. ಈಗ ಮೂರನೇ ಅಲೆ ಮಕ್ಕಳ ಮೇಲೆ ಭಾರೀ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ ಎಂದು ತಜ್ಞರು ಎಚ್ಚರಿಕೆಯ ಸಂದೇಶ ರವಾನಿಸಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಈಗಿನಿಂದಲೆ ಬಿರುಸಿನ ತಯಾರಿ ನಡೆಸಿವೆ.
ಮೂರನೇ ಸೋಂಕು ತಡೆಗೆ ಮುಂದಾಗಿದ್ದು ಪ್ರಮುಖವಾಗಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿವೆ. ಹೆಚ್ಚು ಪ್ರಯೋಗಾಲಯಗಳ ಸ್ಥಾಪನೆ,ಆಮ್ಮಜನಕ ಘಟಕ, ೧೨ ವರ್ಷದೊಳಗಿರುವ ಮಕ್ಕಳ ತಂದೆ ತಾಯಿಗಳಿಗೆ ಲಸಿಕೆ ಹಾಕಿಸುವುದು ಸೇರಿದಂತೆ ಇನ್ನಿತರ ಶಿಷ್ಟಾಚಾರಗಳನ್ನು ಪಾಲಿಸುವತ್ತ ರಾಜ್ಯಗಳು ಗಮನಹರಿಸುತ್ತಿವೆ.
ಎರಡನೇ ಅಲೆ ತೀವ್ರವಾಗಿ ಕಾಣಿಸಿಕೊಂಡಿದ್ದರಿಂದ ಅಮ್ಲಜನಕ, ಹಾಸಿಗೆ ಹಾಗೂ ಐಸಿಯು ಸಿಗದೆ ಬಹುತೇಕ ಮಂದಿ ನೆರಳಾಡಿದ್ದರು. ಕೆಲವರಿಗೆ ಹಾಸಿಗೆ ಆಮ್ಲಜನಕ ದೊರೆಯದೆ ಪ್ರಾಣಬಿಟ್ಟ ಪ್ರಸಸಂಗಳು ನಡೆದಿದ್ದವು.
ಈಗ ಮೂರನೇ ಅಲೆ ಮಕ್ಕಳನ್ನು ಭಾದಿಸುವ ಭೀತಿ ಎದುರಾಗಿದೆ.ಈ ಹಿನ್ನೆಲೆಯಲ್ಲಿ ಈಗಿಂದಲೇ ಮುನ್ನೆಚ್ಚರಿಕೆ ಕ್ರಮಗಳತ್ತ ರಾಜ್ಯಗಳ ಗಮನ ಕೇಂದ್ರೀಕೃತವಾಗಿದೆ.
ಉತ್ತರ ಪ್ರದೇಶದಲ್ಲಿ ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೋಷಕರಿಗೆ ಲಸಿಕೆ ಹಾಕಲು ಪ್ರಾಶಸ್ತ್ಯ ನೀಡಿದರೆ, ಗೋವಾ ಸರ್ಕಾರ ಎರಡು ವರ್ಷದ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಲಸಿಕೆ ಹಾಕಲು ಮುಂದಾಗಿದೆ.
ಬಹುತೇಕ ರಾಜ್ಯಗಳು ಮಕ್ಕಳಿಗೆ ಹಾಸಿಗೆ, ಹೆಚ್ಚುವರಿ ಐಸಿಯು ಮತ್ತು ಆಗ ತಾನೆ ಜನಿಸಿದ ಮಗುವಿನ ಆರೈಕೆಗೆ ತೀವ್ರ ನಿಗಾ ಘಟಕ ಇನ್ನಿತರ ವೈದ್ಯಕೀಯ ಸೌಲಭ್ಯಗಳ ಕಡೆಗೆ ಒತ್ತು ನೀಡಿದೆ.
ಬಹುತೇಕ ರಾಜ್ಯಗಳ ತಜ್ಞರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಿದೆ. ಒಟ್ಟಾರೆ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ರಾಜ್ಯಗಳು ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕಲ್ಲೂ ಮೂರನೇ ಅಲೆ ಎದುರಿಸಲು ಮೂಲಭೂತ ಸೌಕರ್ಯ ಸೇರಿದಂತೆ ಹಾಸಿಗೆ, ಆಮ್ಲಜನಕ ಐಸಿಯು ಒದಗಿಸುವತ್ತ ಗಮನಹರಿಸಿದೆ.