೨ ವರ್ಷದಲ್ಲಿ ಹಳ್ಳಿಗಳಿಗೆ ಶುದ್ಧ ನೀರು – ನಾಡಗೌಡ

ಸಿಂಧನೂರು.ಜೂ.೩-ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಹಾಗು ಶಾಲಾ ಕಟ್ಟಡ, ಸಿಸಿ ರಸ್ತೆ ,ಚರಂಡಿ ಕಾಮಗಾರಿಗಳಿಗೆ ಸಂಸದರು ,ಶಾಸಕರು ಭೂಮಿ ಪೂಜೆ ನೆರೆವರಿಸಿದರು.
ತಾಲೂಕಿನ ತಿಮ್ಮಪೂರ ರೂ ೧.೫ ಕೋಟಿ ಆರ್.ಎಚ್ ಕ್ಯಾಂಪ್ ನಂ೪ ೧೩೧.೫೦ ಕೋಟಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿ ಜನ ಕಲ್ಯಾಣ ಸಂಸ್ಥೆಯಿಂದ ಕೊರೊನಾ ಸಂಕಷ್ಟದಲ್ಲಿ ಇರುವ ಬಡ ಜನರಿಗೆ ಶಾಸಕರ ವೆಂಕಟರಾವ್ ನಾಡಗೌಡ ,ಸಂಸದ ಸಂಗಣ್ಣ ಕರಡಿ ಆಹಾರ ಕಿಟ್‌ಗುಳನ್ನು ವಿತರಿಸಿದರು.
ತಾಲೂಕಿನ ಬೆಳೆಗುರ್ಕಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ೧.೧೦ ಕೋಟಿ ,ಸಾಲಗುಂದ ೨.೩೧ ಕೋಟಿ ,ಗೊಬ್ಬರಕಲ್ ಕೆ.ಕೆ ಅರ್.ಡಿ.ಬಿ ಯೋಜನೆಯಲ್ಲಿ ಪಿಡಿಬ್ಯ್ಲೂಡಿ ಇಲಾಖೆ ಯಿಂದ ೨೮.೦೦ ಲಕ್ಷದಲ್ಲಿ ಸಿಸಿ ರಸ್ತೆ ,ಚರಂಡಿ ನಿರ್ಮಾಣ ಕಾಮಗಾರಿ ,ಮುಕ್ಕುಂದ ಜಲ ಜೀವನ್ ಮಿಷನ್ ೫೫ ಲಕ್ಷ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಗುದ್ದಲಿ ಪೂಜೆ ೨ ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾಧ್ ಶಾಲಾ ಕಟ್ಟಡ ನಿರ್ಮಾಣ ಭೂಮಿ ಪೂಜೆ ಮಾಡಲಾಯಿತು , ಸಿಂಗಾಪುರ ೯೫ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗುದ್ದಲಿ ಪೂಜೆಯನ್ನು ಶಾಸಕ ನಾಡಗೌಡ ನೆರವೇರಿಸಿದರು.
ಜಲ ದಾರ ಯೋಜನೆ ಗೆ ಜಿಲ್ಲೆಗೆ ೨ ಸಾವಿರ ಕೋಟಿ ಹಣ ಬಂದಿದ್ದು ಟೆಂಡರ್ ಯಾಗಿದ್ದು ಕಾಮಗಾರಿಯನ್ನ ಆರಂಭಿಸಲಾಗಿತ್ತಿದ್ದು ಮುಂದಿನ ೨ ವರ್ಷದಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿ ಮನೆ-ಮನೆಗೆ ಶುದ್ಧವಾದ ಕುಡಿಯುವ ನೀರು ದೊರಕಲಿದೆ ಗ್ರಾಮಸ್ಥರು ಆಸಕ್ತಿ ವಹಿಸಿ ಕಾಮಗಾರಿ ಕಳಪೆ ಯಾಗದಂತೆ ನೋಡಿಕೊಳ್ಳಿ ಒಂದು ವೇಳೆ ಕಳಪೆ ಕಂಡು ಬಂದರೆ ನನ್ನ ಗಮನಕ್ಕೆ ತರಬೇಕು ಅಧಿಕಾರಿಗಳು ಸಹ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜವ ದಾರಾ ಯೋಜನೆ ಮೊದಲು ಬಿಹಾರ ರಾಜ್ಯದಲ್ಲಿ ಆರಂಭಿಸಿ ಈಗ ದೇಶಾದ್ಯಂತ ಯೋಜನೆ ಆರಂಭ ಮಾಡಿದ್ದು ಇದು ಪ್ರಧಾನಿ ಮೋದಿಯ ಕನಸಿನ ಯೋಜನೆ ಯಾಗಿದೆ ಎಂದು ಸಂಸದ ಸಂಗಣ್ಢ ಕರಡಿ ಹೇಳಿದರು ಕೊರೊನಾ ದಿಂದ ಇಡಿ ವಿಶ್ವವೆ ತಲ್ಲಣಗೊಂಡಿದ್ದು ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿ ಕೊರೊನಾವನ್ನು ಸಮರ್ಥವಾಗಿ ಎದುರಿಸಿ ಜನರಿಗೆ ನೆರವಾಗಿದ್ದಾರೆ.
ಜನ ಕಲ್ಯಾಣ ಸಂಸ್ಥೆ ಕೊರೊನಾ ಸಂಕಷ್ಟದಲ್ಲಿ ಇರುವ ಬಡ ಜನರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಮಾನವಿಯತೆ ತೋರಿದ್ದು ಇತರಿರಿಗೆ ಮಾದರಿ ಯಾಗಿದೆ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲ್ಲಿ ಎಂದು ಕರಡಿ ಹಾರೈಸಿದರು.
ಜನ ಕಲ್ಯಾಣ ಸಂಸ್ಥೆ ಕೊರೊನಾ ಮೊದಲ ಅಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಕಷ್ಟದವಲ್ಲಿ ಇದ್ದವರಿಗೆ ಸಂಸ್ಥೆವತಿಯಿಂದ ಪ್ರತಿಯೊಬ್ಬರ ಖಾತಿಗೆ ಹಣ ಹಾಕುವ ಮೂಲಕ ಒಟ್ಟು ೫೦ ಲಕ್ಷ ೮೦ ಸಾವಿರ ಹಣ ಹಾಕಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರಸನ್ನ ವಿವರಿಸಿದರು.
ಕೊರೊನಾ ಎರಡನೆ ಅಲೆಯಲ್ಲಿ ಹಣದ ಬದಲು ೨೫೦೦ ರೂ ಆಹಾರದ ಕಿಟಗಳನ್ನು ಬಡ ಕುಟುಂಬಗಳಿಗೆ ಸಂಸ್ಥೆ ನೀಡುತ್ತಿದ್ದು ಕೊರೊನಾ ಬಂದು ಮೃತ ಪಟ್ಟರೆ ೨೦ ಸಾವಿರ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ ಕೊರೊನಾದಿಂದ ಮೃತಪಟ್ಟ ಬಗ್ಗೆ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಬೇಕು ಎಂದು ಪ್ರಸನ್ನ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ,ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಅಮರೇಗೌಡ ವಿರುಪಾಪುರು,ಸದಸ್ಯರಾದ ಜೆಡೆಯಪ್ಪ ಹೂಗಾರ್ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಣುಕಮ್ಮ ,ಜಿ.ಪ ಮಾಜಿ ಸದಸ್ಯರಾದ ಶಿವನಗೌಡ ಗೊರೆಬಾಳ ,ನಗರ ಸಭೆಯ ನಾಮ ನಿರ್ದೇಶನ ಸದಸ್ಯರಾದ ಮಲ್ಲಿಕಾರ್ಜುನ ಜಿನೂರು , ಬಿ.ಜೆ.ಪಿ ಮಂಡಲ್ ಅಧ್ಯಕ್ಷರಾದ ಹನುಮೇಶ ಸಾಲಗುಂದ ,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಎಂ.ದೊಡ್ಡ ಬಸವರಾಜ್,ಜೆ.ಡಿ.ಎಸ್ ಮುಂಖಡರಾದ ನಾಗೇಶ್ ಹಂಚಿನಾಳ ಕ್ಯಾಂಪ್ ವೀರಭದ್ರಪ್ಪ ವಕೀಲರು ,ಪರಮೇಶ ದಡೇಸೂಗುರು, ದೇವೇಂದ್ರಪ್ಪ ನಾಯಕ ಸೇರಿದಂತೆ ಇತರ ಮುಂಖಡರು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.