೨ ದಶಕದ ಬೇಡಿಕೆಗೆ ಆರ್.ವಿ.ಎನ್ ಸ್ಪಂದನೆ: ಹಟ್ಟಿ ರಸ್ತೆ ನಿರ್ಮಾಣಕ್ಕೆ ೬.೫೦ ಕೋಟಿ

ಸಿರವಾರ: ನ.೧೮- ರಾಜ್ಯದ ಏಕೈಕ ಚಿನ್ನದ ಗಣಿಯಾದ ಹಟ್ಟಿಗೆ ತೆರಳುವ ರಸ್ತೆಯು ಮದ್ಯದಲ್ಲಿ ಹಾಳಿಗಿದ್ದೂ, ನಿರ್ಮಿಸುವಂತೆ ೨ ದಶಕದಿಂದ ಜನರ ಬೇಡಿಕೆಯಂತೆ ೬ ಕೊ.ಅನುದಾನದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡುವ ಮೂಲಕ ನಿಮ್ಮ ೨ ದಶಕ ಬೇಡಿಕೆಗೆ ಸ್ಪಂದಿಸಿರುವೆ, ರಾಜ್ಯ ಸರ್ಕಾರವು ಬೇರೆ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಮಲತಾಯಿ ದೊರಣೆ ಅನುಸರಿಸುತ್ತಿದೆ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದರು. ೨ ದಶಕದಿಂದ ಅಭಿವೃದ್ಧಿ ಕಾಣದ ಹಟ್ಟಿ ಚಿನ್ನದ ಗಣಿ-ಸಿರವಾರ ಜಿಲ್ಲಾ ಮುಖ್ಯರಸ್ತೆಯ ನಿರ್ಮಾಣಕ್ಕೆ ೬.೫ ಕೊ.ಕಾಮಗಾರಿಗೆ ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಗುರುವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಅಪೆಂಡಿಕ್ಸ್ ಸಿ ಯೋಜನೆಯಲ್ಲಿ ೫ಕೋಟಿ, ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ೧.೫೦ಕೋಟಿ ನವಲಕಲ್ ನಿಂದ ಹಟ್ಟಿಯವರೆಗೆ ಒಟ್ಟು ೬.೫೦ಕೋಟಿ ಅನುದಾನ ನೀಡಲಾಗಿದೆ. ಗುತ್ತಿಗೆದಾರರು ಅವಧಿ ಒಳಗೆ ಗುಣಮಟ್ಟದ ಕಾಮಗಾರಿ ಮಾಡಬೇಕು. ಮಾನ್ವಿ ವಿಧಾನ ಸಭಾ ಕ್ಷೇತ್ರಕ್ಕೆ ಮಾನ್ವಿ-ಸಿರವಾರ ಎರಡು ತಾಲೂಕು ಅಭಿವೃದ್ಧಿಗೆ ಹಿಂದಿನ ಜನಪ್ರತಿನಿಧಿಗಳು ತಮ್ಮದೆ ಸರ್ಕಾರವಿದರೂ ಅನೇಕ ಅಭಿವೃದ್ಧಿ ಕೆಲಸಗಳು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದರಿಂದ ಎರಡೂ ತಾಲೂಕಿನಲ್ಲಿ ಮಿನಿವಿಧಾನಸೌಧ, ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಬಿಎಡ್ ಕಾಲೇಜು, ಕ್ರೀಡಾಂಗಣ ನಿರ್ಮಾಣ ಮಾಡಿ ಜನಪ್ರತಿನಿಧಿಗಳು ಜನರ ಋಣ ತಿರಿಸಬೇಕಾಗಿತು. ೩೦ ಕೊ. ಚಿಕಲಪರ್ವಿ ರಸ್ತೆ, ೧೦ ಕೊ. ಅಡವಿ ಅಮರೇಶ್ವರ ರಸ್ತೆ ನಿರ್ಮಾಣ ಮಾಡಿದೆ ಅದು ಸಹ ಬಹು ದಿನಗಳ ಬೇಡಿಕೆಯಾಗಿತು. ಅಧಿಕಾರ ಶಾಶ್ವತ ಅಲ, ಅದಿಕಾರ ಇದಾಗ ಹೆಸರು ಉಳಿಯುವ ಕೆಲಸ ಆಗಬೇಕು. ಸಿರವಾರ ಪಟ್ಟಣದಲ್ಲಿ ಡಿವೈಡರ್, ಬೀದಿ ದೀಪ, ೩ ಕೊ. ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಿನಿ ವಿಧಾನ ಸೌದ, ಕ್ರೀಡಾಂಗಣ ನಿರ್ಮಾಣ ಅನುದಾನ ಮಿಸಲು ಇದೆ. ಶಾಲೆಗಳಿಗೆ ೧೬೦ ಶುದ್ಧ ಕುಡಿಯುವ ನೀರಿನ ಘಟಕ ನೀಡಿದೆ, ೧೫೦ ಕೊ. ಶಿಕ್ಷಣಕ್ಷೇತ್ರಕ್ಕೆ ಅನುದಾನ ನೀಡಲಾಗಿದೆ. ನಮ್ಮ ತಾ.ಪಂ ಸದಸ್ಯನಿಂದ ಕುರುಕುಂದಾ ಗ್ರಾಮಕ್ಕೆ ತಾ.ಪಂ ಅದ್ಯಕ್ಷ ಸ್ಥಾನ ದೊರೆಯಲು ಸಹಾಯ ಮಾಡಿದೆ. ಗ್ರಾಮಗಳಿಗೆ ಶುದ್ಧ ನೀರಿನ ಘಟಕ, ರಸ್ತೆ, ಹೈ ಮಾಸ್ಟ್ ದೀಪಗಳು, ಎಲ್ಲಾ ಜಾತಿ ಜನಾಂಗದ ಸಮೂದಾಯ ಭವನಗಳು ಸೇರಿದಂತೆ ಅನೇಕ ಅಭಿವೃದ್ಧಿ ಮಾಡಲಾಗಿದೆ. ಅತ್ತನೂರು ಗ್ರಾಮಕ್ಕೆ ೨ ಕೊ ಅನುದಾನದಲ್ಲಿ ಕೆರೆಯಿಂದ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲಾಗುವುದು. ರಾಜ್ಯ ಸರ್ಕಾರವ ಜೆಡಿಎಸ್ ಸರ್ಕಾರ ನಾನೆ ಶಾಸಕ :- ೨೦೨೩ ಕ್ಕೆ ರಾಜ್ಯದಲ್ಲಿ ಜೆಡಿಎಸ್ ಸರಕಾರ ಬರುತ್ತದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರೆ. ಮಾನ್ವಿ ಕ್ಷೇತ್ರಕ್ಕೆ ಬೆಳಗಾವಿ, ದೇವದುರ್ಗ, ಅರಕೇರಿ, ಇನ್ನಿತರ ಕಡೆಯಿಂದ ಯಾರೆ ಬಂದರು, ಜನರು ಜೆಡಿಎಸ್ ಪಕ್ಷಕ್ಕೆ ಆಶಿರ್ವಾದ ಮಾಡಿ, ಕ್ಷೇತ್ರದವರೆಗೆ ಮಣಿ ಹಾಕುತ್ತಾರೆ, ನಮಗೆ ಜನರ ಬೆಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ. ಸರ್ಕಾರದಿಂದ ಮಲತಾಯಿ ಧೋರಣೆ:- ರಾಜ್ಯ ಸರ್ಕಾರದಲ್ಲಿ ತಮ್ಮ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ, ಬೇರೆ ಪಕ್ಷದ ಶಾಸಕರಿಗೆ ಅನುದಾನ ನೀಡುವಲ್ಲಿ, ಕೆಲಸ ಕಾರ್ಯಗಳು ಮಾಡುವಲ್ಲಿ ಮಲತಾಯಿ ಧೋರಣೆ ಅನುಸರಿಸುವ ಮೂಲಕ ಆನೆ ನಡೆದಿದೆ ದಾರಿ ಎಂಬಂತೆ ಆಗಿದೆ ಎಂದರು.
ನವಲಕಲ್ ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಿಗಿ, ಜೆಡಿಎಸ್ ಮುಂಖಡರಾದ ಜಿ. ಲೋಕರೆಡ್ಡಿ, ಅನಿತ ಬಸವರಾಜ ಮಂತ್ರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಹುಸೇನಸಾಬ್ ಮಾತನಾಡಿದರು. ಜೆ ಶರಣಯ್ಯಸ್ವಾಮಿ ಹುನುಕುಂಟಿ , ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ,ಯುವ ಮುಂಖಡ ರಾಜಾ ಆದರ್ಶ ನಾಯಕ, ನಾಗರಾಜ ಭೋಗಾವತಿ,ಶರಣಪ್ಪಗೌಡ ಮದ್ಲಾಪೂರ, ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ, ಪಿ.ರವಿಕುಮಾರ್,ಗೋಪಾಲ ನಾಯಕ ಹರವಿ, ದಾನಪ್ಪ ,ಶೀಖರಯ್ಯಸ್ವಾಮಿ ಮಲ್ಲಟ, ಶಿವರಾಜ ನಾಯಕ ಚಾಗಭಾವಿ, ಬಂದೇ ನವಾಜ್, ಎಂ.ಡಿ ವಲಿಸಾಬ್ ,ನಾಗೇಶ್ , ಚಂದ್ರಶೇಖರಗೌಡ ,ರಂಜಿತ್ ಸತ್ತರ್ ಸಾಬ್,ಎಸ್ ಯಕೋಬ,
ಪರಮೇಶ ಮುರ್ಕಿಗುಡ್ಡ, ಶಿವರಾಜಭುಲೇಟ್, ಸಿದ್ದಪ್ಪಗೌಡ ಹೀರಾ, ಹನುಮಂತ್ರಾಯ ಉಪ್ಪಾರ, ಸಂಗಮೇಶ ಪಾಟೀಲ, ವಿಕ್ರಮ್ ಪಾಟೀಲ, ನಾಗರಾಜಗೌಡ, ಕುರುಕುಂದಾ,ಹನುಮಂತ ನಾಯಕ, ಪಿಡಬ್ಲ್ಯೂಡಿ ಎಇಇ ರಾಜಕುಮಾರ, ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ, ವಿವಿಧ ಇಲಾಖೆಯ ಅಧಿಕಾರಿಗಳು ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.