೨ ಡೋಸ್ ಪಡೆಯಿರಿ ಕೊರೊನಾ ದೂರವಿಡಿ


ನವದೆಹಲಿ, ಏ.೨೨: ಜೀವ ಮಾರಕ ಕೋವಿಡ್ ತಡೆಗೆ ಲಸಿಕೆಯೇ ಮಹಾಮದ್ದು. ಎರಡು ಡೋಸ್ ಲಸಿಕೆಗಳನ್ನು ಹಾಕಿಸಿಕೊಂಡರೆ ಕೋವಿಡ್ ಹತ್ತಿರಕ್ಕೂ ಸುಳಿಯುವುದಿಲ್ಲ. ಕೋವಿಡ್ ಲಸಿಕೆ ಯಾರಲ್ಲೂ ಅಪನಂಬಿಕೆ ಬೇಡವೆಂದು ಆರೋಗ್ಯ ತಜ್ಱರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಲಸಿಕೆಯ ಪುನರ್ ಮೌಲ್ಯಮಾಪನದಲ್ಲಿ, ಇದು ದೃಢಪಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ- ಐಸಿಎಂಆರ್ ಕೋವಿಡ್ ಲಸಿಕೆ ಹಾಕಿಸಿಕೊಂಡರನ್ನು ಪರೀಕ್ಷೆಗೆ ಒಳಪಡಿಸಿದ್ದು,೧೦ ಸಾವಿರ ಜನರ ಪೈಕಿ ಯಾರಲ್ಲೂ ಮತ್ತೆ ರೋಗ ಕಾಣಬಂದಿಲ್ಲ ಎಂದು ಹೇಳಿದೆ.
ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ಅವರು, ವ್ಯಾಕ್ಸಿನೇಷನ್‌ನ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ಸಂಪೂರ್ಣವಾಗಿ ಲಸಿಕೆ ಹಾಕಿದವರಲ್ಲಿ ಸೋಂಕು ತಗುಲುವುದು ಬಹಳ ಕಡಿಮೆ. ಪರೀಕ್ಷೆಗೊಳಪಡಿಸಿದಾಗ ಕನಿಷ್ಠ ಶೇಕಡಾವಾರು ಜನರು ಮಾತ್ರ ಕೋವಿಡ್ ಗೆ ಮತ್ತೆ ತುತ್ತಾಗಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಕೋವಿಡ್ ಲಸಿಕೆ ಹಾಕಿಸಿಕೊಂಡರೂ, ಮಾಸ್ಕ್ ಧರಿಸುವುದು ದಿನನಿತ್ಯದ ಕಡ್ಡಾಯವಾಗಬೇಕು ಎಂದು ಕೂಡ ತಿಳಿಸಿದ್ದಾರೆ.