೨ ಕೋಟಿ ವೆಚ್ಚದ ಬಿಟಿ ರಸ್ತೆಗೆ ಶಾಸಕರಿಂದ ಭೂಮಿ ಪೂಜೆ

ರಾಯಚೂರು.ನ.೧೪- ಆಶಾಪೂರು ವಯಾ ಮರ್ಚೆಟ್ಹಾಳ್ ಗ್ರಾಮದ ಗಾರಲದಿನ್ನಿ ವರೆಗೆ ೨ ಕೋಟಿ ರೂ.ವೆಚ್ಚದಲ್ಲಿ ಬಿಟಿ ರಸ್ತೆ ಕಾಮಗಾರಿಗೆ ಗ್ರಾಮೀಣ ಶಾಸಕರಾದ ಬಸನಗೌಡ ರವರು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡುತ್ತಾ, ಗುತ್ತಿಗೆದಾರರು ರಸ್ತೆಯ ಗುಣಮಟ್ಟವನ್ನು ಕಾಪಾಡಿಕೊಂಡು ರಸ್ತೆ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿಕೊಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿದ್ಧನಗೌಡ ಗಾರಲದಿನ್ನಿ, ನಾಗೇಂದ್ರಪ್ಪಣ್ಣ, ಸೋಮಶೇಖರ್ ಪಾಟೀಲ್, ತಿಮ್ಮಪ್ಪ ಆಶಾಪೂರ, ರಾಮನಗೌಡ, ರಮೇಶ್ ರೋಸ್ಲೆ, ಎಸ್.ಶರಣಪ್ಪ, ಸತ್ಯನಾರಾಯಣ ಗೌಡ, ರಾಮಣ್ಣ, ಬಂಡೆಪ್ಪ, ಯೂಸುಫ್, ಎಂ.ಪಿ.ಬಸನಗೌಡ, ಬಸವರಾಜ ಪಾಟೀಲ್, ದಾದಪೀರ್, ಕೆ.ತಿಮ್ಮಪ್ಪ, ಪಂಪನಗೌಡ, ನಜೀರ್ ಸಾಬ್, ಶರಣಬಸವ ನಾಯಕ, ರಾಜಪ್ಪಗೌಡ, ಆಂಜಿನೇಯ್ಯ, ನಾರಾಯಣಕಿಂಗ್, ವೆಂಕಯ್ಯ, ನಲ್ಲಾರೆಡ್ಡಿ, ರಾಮಪ್ಪ, ಶಿವು, ಶಿವರಾಜ್ ವೆಂಕಟೇಶ್, ಹನುಮೇಶ, ಚನ್ನಬಸವ, ಪ್ರಾಣೇಶ, ಸುರೇಶ್, ನಾಗರಾಜ್, ಬಸವರಾಜ, ರಾಮಪ್ಪ, ಈಶಪ್ಪ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.