೨ ಕೋಟಿ ವಂಚನೆಗೆ ಯತ್ನ ಇಬ್ಬರು ಅಂದರ್

ಬೆಂಗಳೂರು,ಮಾ.೧೭- ಸಾಲಿ ಗ್ರಾಮ ಎಂಬ ಕಲ್ಲನ್ನು ವಿಷ್ಣು ರೂಪದ ಅದೃಷ್ಟದ ಕಲ್ಲನ್ನು ಅದೃಷ್ಟದ ಕಲ್ಲು ಎಂದು ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೋಜ್ (೫೭),ಆದಿತ್ಯ ಸಾಗರ್(೩೭) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಆರೋಪಿಗಳು ಗುಜರಾತಿಯ, ಗೋಮಾತಿ ನದಿಯಿಂದ ತಂದಿರುವಂತೆ ಸಾಲಿ ಗ್ರಾಮ ಎಂಬ ಎರಡು ಕಲ್ಲನ್ನು ಇಟ್ಟುಕೊಂಡು ಸಾಲಿಗ್ರಾಮ ಕಲ್ಲುಗಳು ವಿಷ್ಣು ರೂಪದ ಅದೃಷ್ಟದ ಕಲ್ಲೆಂದು ಸಾರ್ವಜನಿಕರಿಗೆ
ನಂಬಿಸಿ ಸಾಲಿಗ್ರಾಮದ ಕಲ್ಲುಗಳು ಕೋಟ್ಯಾಂತರ ರೂ ಬೆಲೆ ಬಾಳಲಿದ್ದು ಎಂದು ಹೇಳಿ ೨ ಕೋಟಿ ರೂ ಗಳಿಗೆ ಮಾರಾಟ ಮಾಡುವ ನೆಪದಲ್ಲಿ ಹಣ ಪಡೆದು ವಂಚನೆ ನಡೆಸುತ್ತಿದ್ದರು.
ಆರೋಪಿಗಳಿಂದ ಸಾಲಿ ಗ್ರಾಮ ಎಂಬ ಎರಡು ಕಲ್ಲನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.