
ಬೆಂಗಳೂರು,ಸೆ.೧-ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರನ್ನು ಹುಳಿಮಾವು ಪೊಲೀಸರು ಬಂಧಿಸಿ ೨ ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಮೂಲದ ಇಮ್ಯಾನುಯೆಲ್, ಹುಚೆನ್ನಾ ಲಿವಿನಸ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ೪೦೦ ಕ್ಕೂ ಹೆಚ್ಚು ಎಕ್ಸ್‌ಟೆಸಿ, ೧ ಸಾವಿರಕ್ಕೂ ಹೆಚ್ಚು ಎಂಡಿಎಂಎ ಮಾತ್ರೆ ವಶಕ್ಕೆ ಪಡೆಯಲಾಗಿದೆ. ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡಿ ಬಳಿಕ ಗೂಗಲ್‌ಪೇ ಮೂಲಕ ಹಣ ಪಡೆಯುತ್ತಿದ್ದರು.
ಹುಳಿಮಾವು ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
ನಗರದ ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸುತ್ತಮುತ್ತ ಡ್ರಗ್ಸ್ ಇನ್ಸ್‌ಪೆಕ್ಟರ್ ಗಳೆಂದು ಸಾರ್ವಜನಿಕರ ಬಳಿ ಬ್ರಾಂಡೆಡ್ ಮೊಬೈಲ್‌ಗಳನ್ನು ದೋಚಿ ಇದೀಗ ಹೆಬ್ಬಗೋಡಿ ಪೊಲೀಸರ ಅತಿಥಿಗಳಾಗಿದ್ದಾರೆ.
ಜಿಗಣಿ ಸಮೀಪದ ಕ್ಯಾಲಸನಹಳ್ಳಿ ವಾಸಿಗಳಾದ ಚನ್ನಕೇಶವ, ವೆಂಕಟೇಶ, ಆಂದ್ರಪ್ರದೇಶದ ಚರಣ್, ಇಂದ್ರ ಹಾಗೂ ಬಾಗಲಕೋಟೆ ಬಸವರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ೮ ಲಕ್ಷ ಮೌಲ್ಯದ ಐದು ಐಫೋನ್ ಸೇರಿದಂತೆ ೮ ಬ್ರಾಂಡೆಡ್ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.