೨,೮೫೮ ಹೊಸ ಕೊರೊನಾ ಪ್ರಕರಣ ಪತ್ತೆ

ನವದೆಹಲಿ: ದೇಶದಲ್ಲಿ ೨೪ ಗಂಟೆಗಳ ಅವಧಿಯಲ್ಲಿ ೨,೮೫೮ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ೧೧ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ ೪,೩೧,೧೯,೧೧೨ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ ೫,೨೪,೨೦೧ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧೮,೦೯೬ಕ್ಕೆ ಇಳಿಕೆಯಾಗಿದೆ.ಈ ನಡುವೆ ಕಳೆದ ೨೪ ಗಂಟೆಗಳಲ್ಲಿ ೩,೩೫ ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ ೪,೨೫,೭೬,೮೧೫ಕ್ಕೆ ತಲುಪಿದೆ.
ಇನ್ನು ಭಾರತದಲ್ಲಿ ಒಂದೇ ೪,೮೬,೬೨೮ ಮಂದಿ ಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾ ಗಿದ್ದು, ಈ ವರೆಗೂ ೮೪,೨೯,೪೪, ೭೯೫ ಮಂದಿಯನ್ನು ಪರೀಕ್ಷೆಗೊಳಪ ಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ೧,೯೦,೯೯, ೪೪,೮೦೩ ಜನರಿಗೆಲಸಿಕೆ ಯನ್ನು ನೀಡಲಾಗಿದೆ ಎಂದು ತಿಳಿಸಿದೆ