೨೮ಕ್ಕೆ ಪಂಚರತ್ನ ರಥಯಾತ್ರೆ ಆಗಮನ

ಸಿರವಾರ,ಜ.೧೧- ರಾಜ್ಯದ ಅಭಿವೃದ್ದಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಿಂದ ಮಾತ್ರ ಸಾದ್ಯ, ಅದಿಕಾರಕ್ಕೆ ಬಂದಾಗಲೆಲ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಬಿವೃದ್ದಿ ಮಾಡಿದೆ, ೨೦೨೩ ಕ್ಕೆ ಜೆಡಿಎಸ್ ಅದಿಕಾರಕ್ಕೆ ಬರುವುದು ನಿಶ್ಚಿತ ಅಧಿಕಾರ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲಾಗುವುದು, ಈಗಾಗಲೇ ರಾಜ್ಯಾದ್ಯಂತ ಈ ಪಂಚರತ್ನ ಯೋಜನೆಯ ರಥಯಾತ್ರೆಯು ಮಾನ್ವಿ ಕ್ಷೇತ್ರಕ್ಕೆ ೨೮ ರಂದು ಆಗಮಿಸುತ್ತದೆ ಎಲ್ಲಾ ಕಾರ್ಯಕರ್ತರು ಅದಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾನ್ವಿ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಪಂಚರತ್ನ ಯೋಜನೆಯನ್ನು ರಥಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು
ಮೊದಲನೆ ಹಂತದ ಯಾತ್ರೆಯು ಯಶಸ್ವಿಯಾಗಿ ಪೂರ್ಣಗೊಂಡು ಬೀದರ ಜಿಲ್ಲೆಯಿಂದ ಎರಡನೇ ಹಂತಕ್ಕೆ ಈಗಾಗಲೆ ಪ್ರಾರಂಭವಾಗಿದೆ. ಇದೇ ೨೮ ಕ್ಕೆ ಮಾನ್ವಿ ಕ್ಷೇತ್ರಕ್ಕೆ ಬರಲಿದೆ. ಕಲ್ಲೂರಿನಿಂದ ಕ್ಷೇತ್ರಕ್ಕೆ ಬರಮಾಡಿಕೊಂಡು ಒಂದು ದಿನ ಪೂರ್ತಿ ಕ್ಷೇತ್ರದಾದ್ಯಂತ ಸಂಚರಿಸಲಿದೆ.
ಅದಕ್ಕೆ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು, ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರು ಸಿರವಾರ ತಾಲೂಕಿನಲ್ಲಿ ಒಂದು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾರೆ
ಪಂಚರತ್ನ ಯೋಜನೆಯ ರೂಪ ರೇಷಗಳು ಗ್ರಾಮದ ಜನರಿಗೆ ತಲಪುವ ಪ್ರಯತ್ನ ಮಾಡುತ್ತಾರೆ ಈ ಪಂಚರತ್ನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಅರ್ಥವಿಲ್ಲದ ಬಿಜೆಪಿ ಜನರಿಲದ ಜನ ಸಂಪರ್ಕ ಯಾತ್ರೆ, ಕಾಂಗ್ರೇಸ್ ನವರ ಭಾರತ ಜೋಡೊ ಯಾತ್ರೆಗೆ ಜನರು ವ್ಯಂಗ್ಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇಲ್ಲದೆ ಇದರೂ ರೈತರಿಗೆ ೨ ಬೆಳೆಗೆ ನೀರು ಕೊಟ್ಟಿರುವೆ, ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿರುವೆ ಎಂದರು. ಕಾರ್ಯಕ್ರಮದ ಕುರಿತು ಜೆಡಿಎಸ್ ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ,ಜಿ.ಲೋಕರಡ್ಡಿ, ರಾಜಾ ಆರ್ದಶ ನಾಯಕ, ಚಂದ್ರಶೇಖರಯ್ಯಸ್ವಾಮಿ, ಜಂಬುನಾಥ ಯಾದವ,ರವಿಕುಮಾರ, ಕಾಶಿನಾಥ ಸರೋದೆ ಮಾತನಾಡಿದರು. ಈ ಸಂದರ್ಭದಲ್ಲಿ ವಿ.ಎಂ.ಪಾಟೀಲ, ಈಶಪ್ಪ ಹೂಗಾರ, ವಿಜಯಲಕ್ಷ್ಮಿ ಆದೇಪ್ಪ ಸಾಹುಕಾರ, ಸೈಯದ್ ಹುಸೇನ್ ,ಪಿ.ರವಿಕುಮಾರ್,ದಾನಪ್ಪ,ಗ್ಯಾನಪ್ಪ, ಬಂದೇನವಾಜ್, ನಾಗರಾಜ, ಸೋಮನಾಥರಡ್ಡಿ ಗಣದಿನ್ನಿ,ಎಸ್ ಯಕೋಬ, ಬುಡಪ್ಪ ನಾಯಕ,ಯಲಪ್ಪ ದೊರೆ ಸಿರವಾರ, ಮಾದುಕುಮಾರ,ಗೋಪಾಲ ನಾಯಕ ಹರವಿ,ಸೂಗೂರಾಯ್ಯ ಸ್ವಾಮಿ ಗಣದಿನ್ನಿ,ವಿಕ್ರಮ ಗೌಡ, ಶರೀಪ್ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು