೨೭ ನೇ ಮಯೂರಶಿಲೆ ನಾಡೋತ್ಸವ: ೧೭ ರಂದು ಸಾಮೂಹಿಕ ವಿವಾಹ-ರಥೋತ್ಸವ

ಸಿರವಾರ.ಮಾ.೧೫- ತಾಲೂಕಿನ ನವಲಕಲ್ ಬೃಹನ್ಮಠದ ಶ್ರೀ ಲಿಂ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ೨೭ ನೇ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, (ಈಗಾಗಲೇ ಕ್ರೀಡಾಕೂಟಗಳು ಪ್ರಾರಂಭವಾಗಿವೆ). ಈ ವರ್ಷ ಉಚಿತ ಆರೋಗ್ಯ ತಪಾಸಣೆ, ಮಾರ್ಚ್ ೧೭ ಭಾನುವಾರ – ಸಾಮೂಹಿಕ ವಿವಾಹ ಕಾರ್ಯಕ್ರಮ, ಧರ್ಮಸಭೆ, ಸಂಜೆ ರಥೋತ್ಸವ-ಜರುಗುವುದು ಎಂದು ನವಲಕಲ್ – ಬೃಹನ್ಮಠದ ಪೀಠಾಧಿಪತಿ ಅಬಿನವ ಶ್ರೀ ಸೋಮನಾಥ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶಾಖಾಮಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಕ್ರಿಕೆಟ್ ಟೂರ್ನಮೆಂಟ್ ಪ್ರಾರಂಭವಾಗಿದೆ. ಮಾರ್ಚ್ ೧೫ ಬೆಳಗ್ಗೆ ಹೆಣ್ಣು ಮಕ್ಕಳಿಗೆ, ಮಹಿಳೆಯರಿಗಾಗಿ ರಂಗೋಲಿ ಹಾಗೂ ವಿವಿಧ ಸ್ಪರ್ಧೆ, ಸಂಜೆ ಯುವಕರಿಗಾಗಿ ರಾಜ್ಯ ಮಟ್ಟದ ಹೊನ್ನಲು ಬೆಳಕಿನ ಕಬ್ಬಡಿ ಪಂದ್ಯಾವಳಿ. ಮಾರ್ಚ್ ೧೬ ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆಯನ್ನು ಮಾಜಿ ಶಾಸಕ ಜಿ.ಪಾಪರೆಡ್ಡಿ, ನಾಗರಾಜ ಬಿಲ್ಗಾರ್ ಉದ್ಘಾಟಿಸುವರು ಈ ಬಾರಿ ಕಿಲಾರಿ ಹಾಗೂ ಜನರಲ್ ಎಂದು ಎರಡು ಭಾಗವಾಗಿ ವಿಂಘಡಿಸಿ ಆಯೋಜನೆ ಮಾಡಲಾಗಿದೆ. ಅಂದೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ.
ಇದರಲ್ಲಿ ರಕ್ತದಾನ,ಕಣ್ಣಿನ ತಪಾಸಣೆ, ಸಾಂಕ್ರಾಮಿಕ ರೋಗಗಳ ತಪಾಸಣೆ, ೧೮ ವರ್ಷಗಳ ಒಳಗಿನ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಮಾರ್ಚ್ ೧೬ ಸಂಜೆ ಕಾಶಿ ಪೀಠದ ನೂತನ ಪೀಠಾದಿಪತಿಯಾಗಿರು ೧೦೦೮ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾದ್ಯ ಅವರ ಅಡ್ಡಪಲ್ಲಕಿಯನ್ನು ಹಟ್ಟಿ ರಸ್ತೆಯಿಂದ ಮಠದ ವರೆಗೂ ಮಾಡಲಾಗುವುದು ರಾತ್ರ ಸೋಮೇಶ್ವರ ಶಿಚಾರ್ಯರ ಉಚ್ಚಯ್ಯ ಮಹೋತ್ಸ ನಂತರ ಧರ್ಮಸಭೆ. ಮಾರ್ಚ್ ೧೭ ಭಾನುವಾರದಂದು ಶಾಂಭವಿ ಮೂರ್ತಿಗೆ ಹಾಗೂ ಸೋಮೇಶ್ವರ ಮಹಾಸ್ವಾಮಿಗಳವರ ಕತೃ ಗದ್ದುಗೆಗೆ ಹಾಗೂ ಎಲ್ಲಾ ದೇವಾಲಯಗಳಿಗೆ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ,ಜಂಗಮವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ.೧೧ ಗಂಟೆಗೆ ಧರ್ಮಸಭೆಯನ್ನು ನಂತರ ೬೦ ಅದಿಕ ಜೋಡಿಗಳ ಸಾಮೂಹಿಕ ವಿವಾಹಗಳು ಜರುಗುತ್ತವೆ. ಸಂಜೆ ೫ ಕ್ಕೆ ಮಹಾರಥೋತ್ಸವ ಜರುಗುವುದು, ಸಂಗೀತ ಸಂಜೆ, ಗ್ರಾಮದ ಯುವಕರಿಂದ ಸುಗ್ರೀವ ಬಯಲಾಟ ಜರುಗಿವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ೨೭ ನೇ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಕೊರಿದ್ದಾರೆ.