೨೬ ಸಾವಿರ ರೂಪಾಯಿ ಮಾಸ್ಕ್ ಧರಿಸಿದ ನಟಿ ಕರೀನಾ

ಮುಂಬೈ,ಏ.೬- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ. ಈ ನಡುವೆ ನಟಿಯರು ದುಬಾರಿ ಬೆಲೆಯ ಮಾಸ್ಕ್ ಧರಿಸಿ ಗಮನ ಸೆಳೆಯುತ್ತಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ೨೬ ಸಾವಿರ ರೂಪಾಯಿ ಬೆಲೆಯ ಧರಿಸಿ, ಗಮನಸೆಳೆದಿದ್ದಾರೆ.
ಕಪ್ಪು ಬಣ್ಣದ ಈ ಮಾಸ್ಕ್ ಲೂಯೀಸ್ ವಿಟ್ಡಂನ್ ತಯಾರು ಮಾಡಿದೆ. ಸಂಪೂರ್ಣವಾಗಿ ಬಾಯಿ ಮತ್ತು ಮೂಗು ಮುಚ್ಚುವಂತೆ ವಿನ್ಯಾಸಗೊಳಿಸಲಾಗಿದೆ.
ಬಾಲಿವುಡ್ ನ ಬಹುತೇಕ ನಟ-ನಟಿಯರು ಈ ಮಾದರಿಯ ಮಾಸ್ಕ್ ಧರಿಸಿದ್ದಾರೆ. ಅದರಲ್ಲೂ ಕರೀನಾ ಕಪೂರ್ ಖಾನ್ ತಾವು ದುಬಾರಿ ಬೆಲೆ ನೀಡಿ ಖರೀದಿಸಿದ ಮಾಸ್ಕ್ ಅನ್ನು ಧರಿಸಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಕರೀನಾ ಕಪೂರ್ ಖಾನ್ ಧರಿಸಿದ ಮಾಸ್ಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.

ಹಲವು ನಟಿಯರು ಮಾರು:
ದುಬಾರಿ ಬೆಲೆಯ ಈ ಮಾದರಿಯ ಮಾಸ್ಕ್ ಅನ್ನು ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಟ ರಣಬೀರ್ ಕಪೂರ್ ಸೇರಿದಂತೆ ಅನೇಕ ನಟ ನಟಿಯರು ಮಾಸ್ಕ್ ಧರಿಸಿ ಗಮನ ಸೆಳೆದಿದ್ದಾರೆ.
ದುಬಾರಿ ಬೆಲೆ ನೀಡಿ ವಸ್ತುಗಳನ್ನು ಖರೀದಿ ಮಾಡುವುದು ಬಾಲಿವುಡ್ ಸೇರಿದಂತೆ ವಿವಿಧ ಭಾಷೆಯ ನಟ-ನಟಿಯರಿಗೆ ಮಾಮೂಲಿನ ಸಂಗತಿಯಾಗಿದೆ.