೨೫ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ: ಶಾಸಕ ಖಾದರ್‌

ಮಂಗಳೂರು, ನ.1೯- ಬಂಟ್ವಾಳ ಮತ್ತು ಮಂಗಳೂರು ತಾಲೂಕಿನ  25ಹಳ್ಳಿಗಳಿಗೆ ನೇತ್ರಾವತಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬ ರಾಜು ಮಾಡಲು  ಕೈರಂಗಳದ ಬಳಿ 72ಎಂ.ಎಲ್.ಡಿ ಸಾಮ ರ್ಥ್ಯ ದ ನೀರು ಶುದ್ಧೀಕರಣದಿಂದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ರೂ.280ಕೋಟಿ ರೂ ಯೋಜನೆಯನ್ನು ರೂಪಿಸಿ ಅನುಷ್ಠಾನ ಗೊಳ್ಳುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಯೋಜನೆ ಯಿಂದ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್ ಸೇರಿದಂತೆ  25 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನ ಗೊಳ್ಳಲಿಕ್ಕಿದೆ. ಇದರೊಂದಿಗೆ ಮುಂದಿನ ಸುಮಾರು 30ವರ್ಷಗಳ ವರೆಗೆ ಈ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಗೆ ಪರಿಹಾರ ದೊರೆಯಲಿದೆ. ಇದರೊಂದಿಗೆ ಜಗಜ್ಜೀವನ್ ರಾಮ್ ಮಿಶನ್ ಮೂಲಕ ಮಂಗಳೂರು ತಾಲೂಕಿನ ಗ್ರಾಮಗಳಿಗೆ ಸಮುದಾಯದ ಸಹಭಾಗಿತ್ವದೊಂದಿಗೆ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲು 25.2 ಕೋಟಿ ರೂ ಮಂಜೂರಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ. ಹರೇಕಳದಲ್ಲಿ 200 ಕೋಟಿ ರೂ ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾ ಗುವ ಬ್ಯಾರೇಜ್ ಮೂಲಕ ಆಸುಪಾಸಿನ ಗ್ರಾಮಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಗೂ ಕುಡಿಯುವ ನೀರಿನ ಸಮಸ್ಯೆ ಗೆ ಶ್ವಾಶ್ವತ ಪರಿಹಾರ ದೊರೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ. ರಾಜ್ಯದ ಉಪ ಚುನಾವಣೆ ಯ ಸಂದರ್ಭದಲ್ಲಿ ಜನರಿಂದ ಮತ ಪಡೆಯಲು ಬಿಜೆಪಿ ಒಲೈಕೆ ರಾಜಕಾರಣ ದಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಶಿರಾ ವಿಧಾನ ಸಭಾ ಕ್ಷೇತ್ರ ದಲ್ಲಿ ಗೊಲ್ಲ ಸಮುದಾಯದ ಕ್ಕೆ ನಿಗಮ ನೀಡುವ ಭರವಸೆ ನೀಡಲಾಯಿತು. ಇದೀಗ ಬಸವ ಕಲ್ಯಾಣದಲ್ಲಿ  ಮರಾಠರ ಮತ್ತು ವೀರಶೈವ ಲಿಂಗಾಯತ ರ ಮತ ಪಡೆಯಲು ಮರಾಠ ಅಭಿವೃದ್ಧಿ ನಿಗಮ, ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಲು ಮುಖ್ಯ ಮಂತ್ರಿ ಮುಂದಾಗಿದ್ದಾರೆ.ಈ ರೀತಿ ಒಲೈಕೆ ರಾಜಕಾರಣದಲ್ಲಿ ತೊಡಗಿರುವ ರಾಜ್ಯದ ಮುಖ್ಯ ಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜಾತಿಯವರಿಗೂ ಅಭಿವೃದ್ಧಿ ನಿಗಮವನ್ನು ರಚಿಸಲು ಮುಂದಾಗಲಿ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ರನ್ನು ವಿನಾಕಾರಣ ವರ್ಗಾವಣೆ ಮಾಡಲಾಗುತ್ತದೆ.ಪೊಲೀಸರ ನೈತಿಕ ಬಲ ಹೆಚ್ಚಿಸಲು ಕಾಲ ಕಾಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆದ ಕುಂದು ಕೊರತೆಗಳನ್ನು ನಿವಾರಿಸಲು,ಅಕ್ರಮಗಳನ್ನು ತಡೆಯಲು ಕ್ರಮ ಕೈ ಗೊಳ್ಳಬೇಕಾಗಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಉಳ್ಳಾಲ ನಗರ ಸಭೆಯ ನೂತನ ಅಧ್ಯಕ್ಷೆ ಚಿತ್ರಕಲಾ ಉಪಾಧ್ಯಕ್ಷ ಅಯೂಬ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ಎ.ಸಿ.ಜಯರಾಜ್, ಸದಾಶಿವ ಉಳ್ಳಾಲ್, ಎನ್.ಎಸ್.ಕರೀಂ ಮೊದಲಾದವರು ಉಪಸ್ಥಿತರಿದ್ದರು.