೨೫ ವರ್ಷಗಳಲ್ಲಿ ಭಾರತ ವಿಶ್ವ ಗುರು

ನವದೆಹಲಿ, ಆ.೩ -ಮುಂದಿನ ೨೫ ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ದೇಶವಾಸಿಗಳು ಸಂಕಲ್ಪ ಪೂರೈಸಿದರೆ, ಭಾರತ ವಿಶ್ವ ಗುರುವಾಗಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“೨೦೪೭ ರಲ್ಲಿ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು ೨೦೪೭ ರ ವರ್ಷ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮಗೊಳಿಸುವ ವರ್ಷವಾಗಿದೆ. ಈ ದೃಷ್ಠಿ ಕೋನದಲ್ಲಿ ಕೆಲಸ ಮಾಡಿದರೆ. ಮುಂದಿನ ೨೫ ವರ್ಷಗಳಲ್ಲಿ ಭಾರತ ವಿಶ್ವ ಗುರುವಾಗಲಿದೆ, ಎಂದಿದ್ದಾರೆ.

ರಾಷ್ಡ್ರ ಪ್ರೇಮ ಪ್ತದರ್ಶಿಸಿ:

’ಹರ್ ಘರ್ ತಿರಂಗಾ’ ಅಭಿಯಾನದ ಭಾಗವಾಗಿ ಆಗಸ್ಟ್ ೧೩ ರಿಂದ ೧೫ ರವರೆಗೆ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಒತ್ತಾಯಿಸಿದ ಅಮಿತ್ ಶಾ ಅವರು ಈ ಕಾರ್ಯಕ್ರಮ ಭಾರತದ ಜನರ ಏಳಿಗೆಗಾಗಿ ಸಂಕಲ್ಪ ಮಾಡುವ ಸಂದೇಶವನ್ನು ಜಗತ್ತಿಗೆ ನೀಡುತ್ತದೆ ಎಂದು ಹೇಳಿದರು.

ಆಜಾದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ ಪ್ರತಿ ಮನೆಗಳಲ್ಲಿ ಧ್ವಜಾರೋಹಣಕ್ಕೆ ಕರೆ ನೀಡಲಾಗಿದ್ದು, ೯೦ ವರ್ಷಗಳ ಸುದೀರ್ಘ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಯುವ ಪೀಳಿಗೆಗೆ ತಿಳಿಸಲು ಮತ್ತು ಅವರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಲು ಸಹ ಕರೆ ನೀಡಿದ್ದಾರೆ.

ಹರ್ ಘರ್ ತಿರಂಗ ಅಭಿಯಾನ ವಿಶ್ವಕ್ಕೆ ಸಂದೇಶವಾಗಿದೆ, ಪ್ರತಿಯೊಬ್ಬ ಭಾರತೀಯ ನಾಗರಿಕನು ಮುಂದಿನ ೨೫ ವರ್ಷಗಳ ಕಾಲ ಸಂವಿಧಾನವನ್ನು ರಚಿಸಿದ ಪ್ರತಿಪಾದನೆ ಮತ್ತು ಸಂವಿಧಾನದ ನಿಯಮಾವಳಿಗಳ ಪ್ರಕಾರ ಅಭಿವೃದ್ಧಿ, ಸಾಧನೆ, ಭದ್ರತೆ ಮತ್ತು ಸಾಗಿಸಲು ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ಭಾರತೀಯ ಸಂಸ್ಕೃತಿ ರಕ್ಷಣೆಗೆ ಮುಂದಡಿ” ಇಡಿ ಎಂದು ಹೇಳಿದ್ದಾರೆ.