೨೪ ಸಾವಿರ ಪಾಕ್ ಸೈನಿಕರು ಭಾರತಕ್ಕೆ ಶರಣು

ರಾವಲ್ಪಿಂಡಿ,ನ.೨೫- ೧೯೭೧ ರ ಯುದ್ಧದಲ್ಲಿ ಕೇವಲ ೩೪,೦೦೦ ಪಾಕ್ ಸೈನಿಕರು ಮಾತ್ರ ಭಾರತಕ್ಕೆ ಶರಣಾಗಿದ್ದರು ಎಂದು ನಿರ್ಗಮಿತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಹೇಳಿಕೆ ವಿವಾದ ಸೃಷ್ಟಿಸಿದೆ.

“ಪೂರ್ವ ಪಾಕಿಸ್ತಾನದ ಬಿಕ್ಕಟ್ಟು ಸೇನಾ ಸಮಸ್ಯೆಯಲ್ಲ ಬದಲಾಗಿ ಅದು ರಾಜಕೀಯ ವೈಫಲ್ಯ. ೧೯೭೧ ರಲ್ಲಿ ಬಾಂಗ್ಲಾದೇಶದ ಸೋಲಿನ ಮೇಲೆ ಹೋರಾಡುವ ಸೈನಿಕರ ಸಂಖ್ಯೆ ೯೨,೦೦೦ ಅಲ್ಲ, ಬದಲಿಗೆ ೩೪,೦೦೦ ಮಾತ್ರ, ಉಳಿದ್ದರು ಅವರೆಲ್ಲಾ ವಿವಿಧ ಸರ್ಕಾರಿ ಇಲಾಖೆಗಳಿಂದ ಬಂದವರು ಎಂದು ಹೇಳಿದ್ದಾರೆ.

ರಕ್ಷಣಾ ಮತ್ತು ಹುತಾತ್ಮರ ದಿನದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಾಕಿಸ್ತಾನದ ೩೪,೦೦೦ ಸೈನಿಕರು ಭಾರತದ ೨ ಲಕ್ಷ ತರಬೇತಿ ಪಡೆದ ಸೈನಿಕರನ್ನು ಎದುರಿಸಬೇಕಾಗಿತ್ತು.ಇದರ ಹೊರತಾಗಿಯೂ ಪಾಕಿಸ್ತಾನದ ಸೈನಿಕರು ವೀರಾವೇಶದಿಂದ ಹೋರಾಡಿದ್ದರು ಎಂದು ತಿಳಿಸಿದ್ದಾರೆ.

೧೯೭೧ ರ ಡಿಸೆಂಬರ್ ೧೬ರಂದು ಪೂರ್ವ ಪಾಕಿಸ್ತಾನದ ಮುಖ್ಯ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್ ಮತ್ತು ಪೂರ್ವ ಪಾಕಿಸ್ತಾನದಲ್ಲಿರುವ ಪಾಕಿಸ್ತಾನದ ಸೇನಾ ಪಡೆಗಳ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಶರಣಾಗತಿಗೆ ಸಹಿ ಹಾಕಿದ್ದರು ಎಂದು ತಿಳಿಸಿದ್ದಾರೆ

೫೦ ವರ್ಷಗಳ ಹಿಂದೆ, ಎರಡನೇ ಮಹಾಯುದ್ಧದ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿ ಸಂಭವಿಸಿತು, ಪಾಕಿಸ್ತಾನದ ಸೇನೆ ೯೩ ಸಾವಿರ ಸೈನಿಕರು ಭಾರತೀಯ ಪಡೆಗಳ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಇದರ ಪರಿಣಾಮ ಬಾಂಗ್ಲಾದೇಶ ವಿಮೋಚನೆಗೊಳಿಸಿ ಹೊಸ ರಾಷ್ಟ್ರಕ್ಕೆ ಕಾರಣವಾಗಿತ್ತು ಎಂದಿದ್ದಾರೆ.

ಯುದ್ಧದ ಯೋಧರು ಮತ್ತು ಹುತಾತ್ಮರ ತ್ಯಾಗವನ್ನು ಪಾಕಿಸ್ತಾನ ಇಲ್ಲಿಯವರೆಗೆ ಸರಿಯಾಗಿ ಗೌರವಿಸಿಲ್ಲ, ಇದು ಭಾರಿ ಅನ್ಯಾಯವಾಗಿದೆ ಎಂದು ಅವರು ಪಾಕಿಸ್ತಾನ ಸೇನೆಯ ವಿರುದ್ಧ ಅನಗತ್ಯ ಟೀಕೆ ಮಾಡುವರ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪಾಕಿಸ್ತಾನ ಸೇನೆಯನ್ನು ಕೆಣಕಲು ಅಸಭ್ಯ ಪದಗಳನ್ನು ಬಳಸಲಾಗಿದೆ ಆದರೆ ಸಂಪನ್ಮೂಲಗಳು ಮತ್ತು ಆಯ್ಕೆಗಳ ಹೊರತಾಗಿಯೂ ಸೇನಾ ನಾಯಕತ್ವ ಸಂಯಮವನ್ನು ಪಾಲಿಸಿದೆ ಎಂದು ಹೇಳಿದ್ದಾರೆ.