೨೪ ವರ್ಷಗಳ ದಾಖಲೆ ಮುರಿದ ಕನ್ನಡಿಗ

ಬೆಂಗಳೂರು. ೨೪- ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ೨೪ ವರ್ಷದ ದಾಖಲೆ ಮುರಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಆರಂಭಿಕ ಪಂದ್ಯದಲ್ಲೇ ೪ ವಿಕೆಟ್ ಗಳಿಸಿ ಪ್ರಸಿದ್ಧ್ ಮಿಂಚಿದ್ದಾರೆ. ಈ ಮೂಲಕ ೨೪ ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ನಿನ್ನೆ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ಆರಂಭಿಕ ಆಟಗಾರರು ಭಾರತದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ್ದರು. ೧೩೫ ರನ್ ಗಳಿಸಿ ಗೆಲುವಿನ ಸುಳಿವು ನೀಡಿದ್ದರು. ಈ ವೇಳೆ ನಾಯಕ ವಿರಾಟ್‌ಕೊಹ್ಲಿ ಪ್ರಸಿದ್ಧ್ ಕೃಷ್ಣ ಅವರಿಗೆ ಬೌಲಿಂಗ್ ನೀಡಿದರು. ಇದನ್ನು ಸದುಪಯೋಗಪಡಿಸಿಕೊಂಡ ಪ್ರಸಿದ್ಧ್ ಆರಂಭಿಕ ಜೋಡಿಯ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು.
ಉತ್ತಮ ಬೌಲಿಂಗ್ ಪ್ರದರ್ಶಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖಪಾತ್ರ ವಹಿಸಿದ್ದರು. ಅಲ್ಲದೆ ಮೊದಲ ಪಂದ್ಯದಲ್ಲೇ ಆಯ್ಕೆ ಮಂಡಳಿಯ ಗಮನ ಸೆಳೆಯುವಲ್ಲೂ ಅವರು ಯಶಸ್ವಿಯಾಗಿದ್ದಾರೆ.