೨೪ ನೇ ವಾರ್ಡ್ ನಲ್ಲಿ ಲಸಿಕಾ ಅಭಿಯಾನ

ದಾವಣಗೆರೆ.ಏ.೨೨; ನಗರದ 24 ನೇ ವಾರ್ಡಿನ ಸೂಪರ್ ಮಾರ್ಕೆಟ್ ನಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ,  ಶಾಸಕರಾದ ಎಸ್.ಎ ರವಿಂದ್ರನಾಥ, ಮೇಯರ್ ಎಸ್.ಟಿ‌ ವೀರೇಶ್ ಅವರು ಲಸಿಕಾ ಅಭಿಯಾನಕ್ಕೆಚಾಲನೆ ನೀಡಿದರು, ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಮಾಜಿ‌ ಮುಖ್ಯ ಸಚೇತಕರಾದ ಶಿವಯೋಗಿ ಸ್ವಾಮಿ, ಮಾಜಿ ಮೇಯರ್ ಸುಧಾ ಜಯ ರುದ್ರೇಶ್, ಬಿಜೆಪಿ ಮುಖಂಡರಾದ ಕಲ್ಲೇಶ್,  ಪ್ರಮುಖರಾದ ಪದ್ಮನಾಭ ಶೆಟ್ರು, ಜೆ.ಕಿರಣ್ ಕುಮಾರ್ ಶೇಖರ್ ಉಪ್ಪಿನ್ ಉಪಸ್ಥಿತರಿದ್ದರು. 24 ನೇ ವಾರ್ಡಿನ ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಕೊವಿಡ್ ಮುಂಜಾಗೃತ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ವಾರ್ಡ ಮಟ್ಟದ ಲಸಿಕೆ ಅಭಿಯಾನಕ್ಕೆ ಹಿರಿಯ ನಾಗರೀಕರು ಬಂದು ಲಸಿಕೆ ಹಾಕಿಸಿ ಕೊಳ್ಳಬೇಕೆಂದು ಮನವಿ ಮಾಡಲಾಗಿತ್ತು.