೨೪ ತಾಸುಗಳಲ್ಲಿ ಚಂಡಮಾರುತ ತೀವ್ರ

ನವದೆಹಲಿ,ಜೂ.೧೦- ಅರಬ್ಬಿ ಸಮುದ್ರದ ಕರಾವಳಿಯ ವಲ್ಸಾದ್‌ನ ತಿಥಾಲ್ ಬೀಚ್‌ನಲ್ಲಿ ಎತ್ತರದ ಅಲೆಗಳ ಪರಿಣಾಮ ಮುಂದಿನ ೨೪ ಗಂಟೆಗಳಲ್ಲಿ ಬೈಪಾರ್ಜೋಯ್ ಚಂಡಮಾರುತ ತೀವ್ರಗೊಳ್ಳುವ ಸಾದ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಭಾರಿ ಚಂಡಮಾರುತ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ತಿಥಾಲ್ ಬೀಚ್‌ಗೆ ಪ್ರವಾಸಿಗರು ಭೇಟಿ ನೀಡುವುದನ್ನು ಜೂನ್ ೧೪ ರವರೆಗೆ ಪ್ರವಾಸಿಗರಿಗೆ ಮುಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಬಿಪಾರ್ಜೋಯ್ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಪ್ರಬಲವಾಗಿದೆ ಮುಂದಿನ ೨೪ ಗಂಟೆಗಳ ಅವಧಿಯಲ್ಲಿ ಮತ್ತಷ್ಟು ತೀವ್ರಗೊಳ್ಳುವ ಮತ್ತು ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ” ಹವಾಮಾನ ಇಲಾಖೆ ತಿಳಿಸಿದೆ,ಚಂಡಮಾರುತ ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ನಿರ್ದೇಶನ ನೀಡಿದ್ದೇವೆ. ಮೀನುಗಾರಿಕೆಗೆ ತೆರಳಿದ ಮಂದಿ ವಾಪಸ್ ಬಂದಿದ್ದಾರೆ. ಅಗತ್ಯವಿದ್ದರೆ ಜನರನ್ನು ಸಮುದ್ರ ತೀರದಲ್ಲಿರುವ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು. ಅವರಿಗೆ ಆಶ್ರಯ ನೀಡಲಾಗುವುದು ಜೂನ್ ೧೪ ರವರೆಗೆ ಪ್ರವಾಸಿಗರಿಗೆ ತಿಥಾಲ್ ಬೀಚ್ ಅನ್ನು ಮುಚ್ಚಿದ್ದೇವೆ ಎಂದಯ ಗುಜರಾತ್‌ನ ವಲ್ಸದ್‌ನ ತಹಸೀಲ್ದಾರ್ ಟಿ.ಸಿ.ಪಟೇಲ್ ಹೇಳಿದ್ದಾರೆ.ಮುಂದಿನ ೩೬ ಗಂಟೆಗಳಲ್ಲಿ ಬಿಪರ್‍ಜೋಯ್ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯ ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ.ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.