೨೪ ಗಂಟೆ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾದರು ವಿಮೆಗೆ ಅರ್ಹ

ವಡೋದರಾ, ಮಾ.೧೫ – ಯಾವುದೇ ವ್ಯಕ್ತಿ ಆಸ್ಪತ್ರೆಗೆ ದಾಖಲಾಗದಿದ್ದರೂ ಅಥವಾ ೨೪ ಗಂಟೆಗಳಿಗಿಂತ ಕಡಿಮೆ ಅವಧಿಗೆ ದಾಖಲಾಗಿದ್ದರೂ ಸಹ ವಿಮೆ ಕ್ಲೈಮ್ ಮಾಡಬಹುದು ಎಂದು ವಡೋದರಾದ ಗ್ರಾಹಕರ ವೇದಿಕೆ ವಿಮಾ ಸಂಸ್ಥೆಗೆ ಸೂಚಿಸಿದೆ.

ಹೊಸ ತಂತ್ರಜ್ಞಾನದ ಆಗಮನದೊಂದಿಗೆ, ರೋಗಿಗಳು ಕೆಲವೊಮ್ಮೆ ಕಡಿಮೆ ಸಮಯದಲ್ಲಿ ಅಥವಾ ಆಸ್ಪತ್ರೆಗೆ ದಾಖಲಾಗದೆ ಚಿಕಿತ್ಸೆ ಪಡೆಯುತ್ತಾರೆ ಎಂದು ವಡೋದರಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಆಯೋಗ ಹೇಳಿದೆ.

“ಹೊಸ ತಂತ್ರಗಳ ಕಾರಣದಿಂದಾಗಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದಿದ್ದರೆ ಅಥವಾ ಕಡಿಮೆ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಅಂತವರಿಗೂ ವಿಮೆ ಸೌಲಭ್ಯಕ್ಕೆ ಅರ್ಹರು ಎಂದು ತಿಳಿಸಿದೆ.

ವಿಮಾ ಸೌಲಭ್ಯದ ತನ್ನ ಹಕ್ಕನ್ನು ತಿರಸ್ಕರಿಸಿದ ನಂತರ ಜೋಶಿ ಎನ್ನುವುರು ಆಗಸ್ಟ್ ೨೦೧೭ ರಲ್ಲಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ವಿರುದ್ಧ ದೂರು ದಾಖಲಿಸಿದ್ದರು.

ಜೋಶಿಯವರ ಪತ್ನಿಗೆ ೨೦೧೬ ರಲ್ಲಿ ಚರ್ಮದ ಸಮಸ್ಯೆ ಇತ್ತು ಮತ್ತು ಅವರನ್ನು ಅಹಮದಾಬಾದ್‌ನ ಲೈಫ್‌ಕೇರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್‌ಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಮರುದಿನ ಅವರನ್ನು ಬಿಡುಗಡೆ ಮಾಡಲಾಯಿತು. ಅವರ ವೈದ್ಯಕೀಯ ಮೊತ್ತ
೪೪,೪೬೮ ರೂ.ಗಳ ವಿಮಾ ಕ್ಲೇಮ್‌ಗೆ ಅರ್ಜಿ ಸಲ್ಲಿಸಿದರು ಆದರೆ ಸಂಸ್ಥೆಯು ಷರತ್ತು ೩.೧೫ ಅನ್ನು ಉಲ್ಲೇಖಿಸಿ ಅದನ್ನು ತಿರಸ್ಕರಿಸಿತು

ಹೀಗಾಗಿ ಅರ್ಜಿದಾರರು ಎಲ್ಲಾ ದಾಖಲೆಗಳನ್ನು ಗ್ರಾಹಕರ ವೇದಿಕೆಯ ಮುಂದೆ ಹಾಜರುಪಡಿಸಿ ಪರಿಹಾರಕ್ಕೆ ಮನವಿ ಮಾಡಿದ್ದರು

೨೪ ಗಂಟೆಗಳಿಗಿಂತ ಕಡಿಮೆ ಅವಧಿಗೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾವಿಸಿದರೂ, ಆಧುನಿಕ ಯುಗದಲ್ಲಿ ಹೊಸ ಚಿಕಿತ್ಸೆಗಳು ಮತ್ತು ಔಷಧಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ವೈದ್ಯರು ಚಿಕಿತ್ಸೆ ನೀಡುತ್ತಾರೆ ಎಂದು ವೇದಿಕೆ ಹೇಳಿದೆ.

ವಿಮಾದಾರನಿಗೆ ಮಾನಸಿಕ ಕಿರುಕುಳಕ್ಕಾಗಿ ೩,೦೦೦ ರೂ. ಮತ್ತು ವ್ಯಾಜ್ಯ ವೆಚ್ಚಕ್ಕಾಗಿ ೨,೦೦೦ ರೂ.ಗಳನ್ನು ಜೋಶಿಗೆ ಪಾವತಿಸಲು ಆದೇಶಿಸಲಾಗಿದೆ.