೨೨ ವಷ೯ದಿಂದ ಪಾದಯಾತ್ರಿಗಳಿಗೆ ತಮ್ಮ ಮನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಿದ ಅಮರಪ್ಪ ಕುಂಬಾರ

ಮುದಗಲ್,ಮಾ.೧೧- ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಹೋಗುತ್ತಿರುವ ಪಾದಯಾತ್ರಿಗಳಿಗೆ ಕುಂಬಾರ ಓಣಿಯಲ್ಲಿ ಅಮರಪ್ಪ ಕುಂಬಾರ ಅವರ ಮನೆಯಲ್ಲಿ ಸರಿ ಸುಮಾರು ೨೦ ವಷ೯ಗಳಿಂದ ಅನ್ನ ದಾಸೋಹ ವ್ಯವಸ್ಥೆ ಮಾಡಿಸುತ್ತಾ ಬಂದಿದ್ದಾರೆ.
ಅಮರಪ್ಪ ಕುಂಬಾರ ಅವರು ಮೊದಲು ೧೧ಮಂದಿ ಇಂದ ಇವತ್ತು ಸರಿ ಸುಮಾರು ೩೫೦ ರಿಂದ ೪೦೦ ಮಂದಿ ಪಾದಯಾತ್ರಿಗಳು ಬರುತ್ತಾರೆ ಎಂದು ಹೇಳಿದರು. ಬಾಗಲಕೋಟೆ ಸಮೀಪದ ಕದಾಪೂರ ಇಂದ ಬರುವ ಪಾದಯಾತ್ರಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ವಿಶೇಷ ಎಂದರೆ ನಮ್ಮ ಮನೆಯಲ್ಲಿ ಕಂಬಿ ಪೂಜೆ ಸಲ್ಲಿಸಿ ಹಾಗೂ ಕಂಬಿಗೆ ಪ್ರಸಾದ ಸಲ್ಲಿಸಿ ನಂತರ ಪಾದಯಾತ್ರೆಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೊಳಬಸಯ್ಯ, ಉಚ್ಚಯ್ಯ, ಮಟಪತಿ ಸ್ವಾಮಿಗಳು ಹಾಗೂ ಅಮರಪ್ಪ ಕುಂಬಾರ, ಕುಟುಂಬದ ಮಂಜುನಾಥ ಕುಂಬಾರ, ಶಿವು, ನಂದಿನಿ, ಮಲ್ಲಿಕಾರ್ಜುನ, ಅಮರಪ್ಪ, ಮಹಾಂತೇಶ ಉಪಸ್ಥಿತರಿದ್ದರು.