೨೨ ವರ್ಷದಿಂದ ನನಗೆ ಅಧಿಕಾರ ಇಲ್ಲ ೨೦೨೩ ಕ್ಕೆ ಅಧಿಕಾರ ನೀಡಿ-ಗಂಗಾಧರ್ ನಾಯಕ್

ಮಾನ್ವಿ.ಸೆ.೨೧-ನನಗೆ ೨೨ ವರ್ಷದಿಂದ ಅಧಿಕಾರ ಇಲ್ಲ ಮುಂಬರುವ ೨೦೨೩ರ ಚುನಾವಣೆಗೆ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ತಮ್ಮ ಮತ ಆಶೀರ್ವಾದದಿಂದ ನನಗೆ ಅಧಿಕಾರ ನೀಡಬೇಕೆಂದು ಮಾಜಿ ಶಾಸಕ ಗಂಗಾಧರ ನಾಯಕ ಹೇಳಿದರು.
ತಾಲೂಕಿನ ಪೋತ್ನಾಳ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ ಅವರ ನೇತೃತ್ವದಲ್ಲಿ ನಡೆದ ಮಹಾಶಕ್ತಿ ಕೇಂದ್ರ ಮತ್ತು ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಕಾರ್ಯಕರ್ತರ ಸಂಪರ್ಕದಲ್ಲಿದ್ದೇನೆ ಕಾರ್ಯಕರ್ತರ ಸಂಪರ್ಕವೇ ನಮಗೆ ಸಂಪತ್ತು.ದೇಶ ಮೊದಲು ಆಮೇಲೆ ನಾವು ದೇಶ ಉಳಿಯಬೇಕಾದರೆ ಮೋದಿಯವರ ಕೈಬಲ ಪಡಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲುತ್ತದೆ ಎಂದ ಅವರು ಮುಂದಿನ ೨೦೨೩ ಚುನಾವಣೆಗೆ ಬಿಜೆಪಿ ಪಕ್ಷದಿಂದ ನಾನು ಸ್ಪರ್ಧೆ ಮಾಡಲು ತೀರ್ಮಾನಿಸಿದ್ದು ನಿಮ್ಮ ಆಶೀರ್ವಾದ ನಮಗೆ ಬೇಕು ಎಂದು ಹೇಳಿದರು.
ನಂತರ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್ ಮಹಾಶಕ್ತಿ ಕೇಂದ್ರ ಮತ್ತು ಪ್ರಮುಖ ಕಾರ್ಯಕರ್ತರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತವು ಇಡಿ ಜಗತ್ತಿಗೆ ವಿಶ್ವ ಗುರು ನರೇಂದ್ರ ಮೋದಿ ಸುಭದ್ರವಾದ ಸರಕಾರ ಈ ದೇಶಕ್ಕೆ ನೀಡಿದ್ದಾರೆ ಬೇರೆ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಕೆಲಸ ಮಾಡುತ್ತವೆ ಆದರೆ ಬಿಜೆಪಿ ಮಾತ್ರ ನಿರಂತರವಾಗಿ ಕೆಲಸ ಮಾಡುತ್ತದೆ ಎಂದ ಅವರು ಬಿಜೆಪಿ ಪಕ್ಷ ಶಿಸ್ತಿನ ಪಕ್ಷವಾಗಿದೆ ತತ್ವ ಸಿದ್ದಾಂತಗಳಲ್ಲಿ ಪಕ್ಷ ಕೆಲಸ ಮಾಡುತ್ತದೆ ರಾಯಚೂರು ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆಗೆ ೨೩೦೦ ಕೋಟಿ ಅನುದಾನ ನೀಡಿ ಈ ಜಿಲ್ಲೆಗೆ ಪ್ರಥಮ ಆದ್ಯತೆ ನೀಡಿದೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಾನ್ವಿ ವಿಧಾನಸಭಾಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಕೇಂದ್ರ ಮತ್ತು ರಾಜ್ಯ ಮುಖಂಡರಿಗೆ ಒತ್ತಾಯ ಮಾಡಲಾಗುತ್ತದೆ ಎಂದು ಹೇಳಿದರು. ಮಾಜಿ ಶಾಸಕ ಬ್ಯಾಗವಾಟ್ ಬಸನಗೌಡ, ನಯೋಪ್ರಾ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಮಾನಂದ ಯಾದವ್ ಮಾತನಾಡಿದರು.ಬಸವರಾಜ ನಕ್ಕುಂದಿ, ಜಗದೀಶ್ ಪೋತ್ನಾಳ್ ಹಾಗೂ ವಿವಿದ ಪಕ್ಷಗಳಿಂದ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಶರಣಪ್ಪಗೌಡ ಜಾಡಲದಿನ್ನಿ, ತಿಮ್ಮಾರೆಡ್ಡಿ ಬೋಗವತಿ, ಅಯಪ್ಪ ಮ್ಯಾಕಲ್, ಉಮೇಶ್ ಸಜ್ಜನ್, ಮಲನಗೌಡ ನಕ್ಕುಂದಿ, ಡಾ. ಶರಣಪ್ಪ ಬಲ್ಲಟ್ಟಿಗಿ, ಕೊಟ್ರೇಶಪ್ಪ ಕೋರಿ, ಗುರುಗೌಡ, ವಿರುಪಾಕ್ಷಿ ಗೌಡ ಪೋತ್ನಾಳ್, ಕುಮಾರಸ್ವಾಮಿ ಪೋತ್ನಾಳ್, ನವೀನ್ ನಾಡಗೌಡ, ಮಹಾತೇಶ ಅತ್ತನೂರು, ವಿಜಯ ಕುಮಾರ್ ಸಾಹುಕಾರ ಉದ್ಬಾಳ್ ಇತರರು ಉಪಸ್ಥಿತರಿದ್ದರು.