೨೨ ಲಕ್ಷ ಡೋಸ್ ಲಸಿಕೆ; ಖಾಸಗಿ ಆಸ್ಪತ್ರೆಗೆ ಹಂಚಿಕೆ


ನವದೆಹಲಿ,ಜೂ.೫- ದೇಶದ ಖಾಸಗಿ ಆಸ್ಪತ್ರೆಗಳಿಗೆ ೧.೨೯ ಕೋಟಿ ಕೊರೊನಾ ಸೋಂಕಿನ ಲಸಿಕೆ ಹಂಚಿಕೆ ಮಾಡಲಾಗಿದ್ದು ಅದರಲ್ಲಿ ೨೨ ಲಕ್ಷ ಡೋಸ್ ಲಸಿಕೆ ನೀಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
ಖಾಸಗಿ ಆಸ್ಪತ್ರೆಗಳಿಗೆ ಶೇಕಡ ೨೫ರಷ್ಟು ಕೊರೊನಾ ಸೋಂಕಿನ ಲಸಿಕೆ ಹಂಚಿಕೆ ಮಾಡಲಾಗಿದ್ದು ಅದರಲ್ಲಿ ಶೇ.೭.೫ ರಷ್ಟು ಲಸಿಕೆ ಹಂಚಿಕೆ ಮಾಡಲಾಗಿದೆ ಎನ್ನುವ ವ್ಯಾಪಕ ಟೀಕೆ ಮತ್ತು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವಾಲಯ ಸ್ಪಷ್ಟನೆ ನೀಡಿದೆ.
ಖಾಸಗಿ ಆಸ್ಪತ್ರೆಗಳ ಲಸಿಕೆ ಕುರಿತು ಮಾಧ್ಯಮಗಳು ನೀಡುತ್ತಿರುವ ವರದಿ ಆಧಾರರಹಿತ ವಾದದ್ದು ಎಂದು ಕೂಡ ಹೇಳಿದೆ.
ಮೇ ತಿಂಗಳ ಒಂದರ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮಾಧ್ಯಮಗಳನ್ನು ತುಲನೆ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತವೆ ಈ ರೀತಿಯ ಧೋರಣೆ ಸರಿಯಲ್ಲ ಎಂದು ತಿಳಿಸಿದೆ
ಮೇ ತಿಂಗಳಲ್ಲಿ ಲಭ್ಯವಿದ್ದ ೭.೪ ಕೋಟಿ ಲಸಿಕೆಯ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೆ ೧.೮೫ ಕೋಟಿ ಲಸಿಕೆ ಮೀಸಲಿಟ್ಟು ಅದರಲ್ಲಿ ೧.೨೯ ಕೋಟಿ ಲಸಿಕೆಯನ್ನು ಹಂಚಿಕೆ ಮಾಡಲಾಗಿತ್ತು. ಒಟ್ಟಾರೆ ಹಂಚಿಕೆಯಾದ ಲಸಿಕೆಯ ಪೈಕಿ ೨೨ ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ನೆನ್ನೆಯಷ್ಟೇ ಪಂಜಾಬ್‌ನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆಗೆ ಲಸಿಕೆಯನ್ನು ನೀಡಲಾಗುತ್ತದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದ್ದ ಎಲ್ಲ ಲಸಿಕೆಯನ್ನು ಹಿಂಪಡೆಯುವ ಮೂಲಕ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರ ಆದೇಶ ಹಿಂಪಡೆದಿತ್ತು