೨೨ ಯೋಧರ ಸಾವು ಸರ್ಕಾರ ನಿರ್ಲಕ್ಷ್ಯ ರಾಗಾ ಟೀಕೆ

ನವದೆಹಲಿ,ಏ.೫; ಛತ್ತೀಸ್‌ಗಢ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ನಿರ್ದಿಷ್ಟವಾಗಿ ಗುರಿಯೊಂದಿಗೆ ರೂಪಿಸದಿರುವುದೇ ೨೨ ಭದ್ರತಾ ಸಿಬ್ಬಂದಿ ಸಾವಿಗೆ ಕಾರಣವೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭದ್ರತಾಪಡೆ ಮೃತ್ತಪಟ್ಟ ಘಟನೆಗೆ ಸಂಬಂಧಿಸಿದಂತೆ ಗುಪ್ತಚರ ವೈಫಲ್ಯವಲ್ಲ ಎಂದು ಹೇಳಿಕೆ ನೀಡಿರುವ ಸಿಆರ್‌ಪಿಎಫ್ ಮಹಾನಿರ್ದೇಶಕ ಕುಲ್‌ದೀಪ್ ಸಿಂಗ್ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಗುಪ್ತಚರ ಇಲಾಖೆಯ ವೈಫಲ್ಯವಿಲ್ಲ ಎನ್ನುವುದನ್ನು ಕಾರ್ಯಾಚರಣೆಯನ್ನು ಸರಿಯಾಗಿ ವಿನ್ಯಾಸ ಗೊಳಿಸಲಿಲ್ಲ ಮತ್ತು ಅಸಮರ್ಥ ಕಾರ್ಯಾಚರಣೆ ಎಂದು ಅರ್ಥೈಸಿಕೊಳ್ಳುವುದೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ನಕ್ಸಲ್ ವಿರುದ್ಧದ ಹೋರಾಟದಲ್ಲಿ ಭದ್ರತಾಪಡೆ ಸಿಬ್ಬಂದಿ ಮೃತಪಟ್ಟಿರುವುದಕ್ಕೆ ಅಸಮರ್ಥ ಕಾರ್ಯಾಚರಣೆಯ ಕಾರಣ ನಮ್ಮ ಯೋಧರು ಲೆಕ್ಕವಿಲ್ಲದಂತೆ ಹುತ್ಮಾತರಾಗಲು ಅವರೇನು ಫಿರಂಗಿಗಳಿಗೆ ಆಹಾರವೇ ಎಂದು ಪ್ರಶ್ನಿಸಿದ್ದಾರೆ.
ಛತ್ತೀಸ್‌ಘಡದಲ್ಲಿ ನಕ್ಸಲರು ಹಾಗೂ ಭದ್ರತಾಪಡೆಗಳ ನಡುವೆ ನಡೆದ ಕಾರ್ಯಾಚರಣೆಯಲ್ಲಿ ೭೪ಕ್ಕೂ ಅಧಿಕ ಯೋಧರು ಹುತ್ಮಾತರಾದ ಘಟನೆಗೆ ಸಂಬಂಧಿಸಿದಂತೆ ಛತ್ತೀಸ್‌ಗಡ್‌ಗೆ ಭೇಟಿನೀಡಿದ್ದ ಕುಲ್‌ದೀಪ್ ಸಿಂಗ್‌ರವರು ಘಟನೆಗೆ ಕಾರ್ಯಾಚರಣೆ ವೈಫಲ್ಯವಿಲ್ಲ ಎಂದು ಹೇಳಿರುವುದಕ್ಕೆ ಯಾವುದೇ ಅರ್ಥವಿಲ್ಲ. ಸತ್ತವರ ಪ್ರಮಾಣ ೧:೧ ಅನುಪಾತದಂತಿದೆ ಎನ್ನುವುದಾದರೆ ಕಾರ್ಯಾಚರಣೆ ಸರಿಯಾಗಿ ರೂಪಿಸಿಲ್ಲ ಇದೊಂದು ಅಸಮರ್ಥ ಕಾರ್ಯಾಚರಣೆ, ಕಾರ್ಯಾಚರಣೆ ವೇಳೆ ಹಲವು ನಕ್ಸಲರು ಕೊಲ್ಲಲ್ಪಡುತ್ತಿರಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಈ ಘಟನೆಯಲ್ಲಿ ೨೨ ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೂ ೩೨ ಮಂದಿ ಗಾಯಗೊಂಡಿದ್ದಾರೆ.