೨೦ ವಿಶೇಷ ರೈಲುಗಳ ಸಂಚಾರ ರದ್ದು

ನವದೆಹಲಿ,ಏ.೩೦-ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಪುಣೆ-ದೆಹಲಿ ಡುರೊಂಟೊ ಮತ್ತು ದೆಹಲಿ-ಅಮಿಟ್ಸರ್ ಶತಾಬ್ದಿ ಎಕ್ಸ್ ಪ್ರೆಸ್ ಸೇರಿದಂತೆ ೨೦ ರೈಲುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.
ನಾಳೆ(ಮೇ ೧) ಮತ್ತು ಮೇ ೨ ರಂದು ನವದೆಹಲಿ-ಅಮೃತಸರ ಜಂಕ್ಷನ್ ಶತಾಬ್ದಿ ವಿಶೇಷ ಮತ್ತು ಮೇ ೩ ಮತ್ತು ೪ ರಂದು ಪುಣೆ ಜಂಕ್ಷನ್-ಹಜರತ್ ನಿಜಾಮುದ್ದೀನ್ ದುರೊಂಟೊ ವಿಶೇಷ ರೈಲುಗಳು ಸಹ ಸೇರಿವೆ.
ನರಸಾಪುರದಿಂದ ನಿಡದವೋಲು,ನಿಡದಾವೊಲುನಿಂದ ನರಸಾಪುರ,ಸಿಕಂದರಾಬಾದ್ ನಿಂದ ಬೀದರ್,ಬೀದರ್ ನಿಂದ ಹೈದರಾಬಾದ್,ಸಿಕಂದರಾಬಾದ್ ನಿಂದ ಕರ್ನೂಲ್ ಸಿಟಿ,ಕರ್ನೂಲ್ ಸಿಟಿಯಿಂದ ಸಿಕಂದರಾಬಾದ್ ರೈಲು ರದ್ದುಗೊಳಿಸಲಾಗಿದೆ.
ಮೈಸೂರಿನಿಂದ ರೇಣಿಗುಂಟಾ,ಮೈಸೂರಿಗೆ ರೇಣಿಗುಂಟಾ,ಸಿಕಂದರಾಬಾದ್ ನಿಂದ ಮುಂಬೈ ಎಲ್ ಟಿಟಿ,ಮುಂಬೈ ಎಲ್ ಟಿಟಿ ಯಿಂದ ಸಿಕಂದರಾಬಾದ್ ರೈಲನ್ನು ರದ್ದು ಪಡಿಸಲಾಗಿದೆ.