೨೦ ನಿಮಿಷ ವಿಳಂಬ ಪ್ರಶ್ನೆ ಪತ್ರಿಕೆ ಹಂಚಿಕೆ-ವಿದ್ಯಾರ್ಥಿ ಆರೋಪ:೫೯ ಗೈರು, ೭೭೪ ಹಾಜರಿ

ಸಿರವಾರ.ಮಾ.೨೬- ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಸೊಮವಾರ ಮಾ೨೫ ರಿಂದ ಕನ್ನಡ ವಿಷಯದೊಂದಿಗೆ ಪ್ರಾರಂಭವಾಗಿದ್ದೂ, ಎರಡು ಕೇಂದ್ರ ಸೇರಿ ೮೩೩ ವಿದ್ಯಾರ್ಥಿಗಳು ನೊಂದಣಿ ಮಾಡಿಸಿದರೆ, ೭೭೪ ಹಾಜರಿಯಾಗಿದ್ದೂ. ೫೯ ವಿದ್ಯಾರ್ಥಿಗಳು ಗೈರು ಆಗಿದರು ಎಂದು ತಿಳಿಸಿದರೆ.
ಪಟ್ಡಣದ ಬಾಲಕರ ಪ್ರೌಢಶಾಲೆಯಲ್ಲಿ ೪೮೦ ವಿದ್ಯಾರ್ಥಿಗಳಲ್ಲಿ, ೪೪೦ ಹಾಜರಿಗದ್ದೂ, ೪೦ಗೈರು ಆಗಿದರು ಎಂದು ಮೇಲ್ವಿಚಾರಕರಾದ ಅಯ್ಯನಗೌಡ ತಿಳಿಸಿದರು.
ಬಾಲಕೀಯರ ಪ್ರೌಢಶಾಲೆಯಲ್ಲಿ ೩೫೩ ನೊಂದಣಿ ಮಾಡಿಸಿಕೊಂಡಿದರೆ, ೩೩೪ ಹಾಜರಿ, ೨೯ ಗೈರು ಆಗಿದರು ಎಂದು ಮೆಲ್ವಿಚಾರಕರಾದ ರಾಜಶೇಖರದಿನ್ನಿ ತಿಳಿಸಿದರು. ಕೇಂದ್ರಗಳಿಗೆ ಡಿ ವೈ ಪಿಸಿ ಇಂದಿರಾ ಬೇಟಿ ನೀಡಿದರೆ, ಪಿಎಸ್‌ಐ ಮಾರುತಿ ಎಸ್.ವಿ ಸೂಕ್ತ ಬಂದೋಬಸ್ತ್ ಒದಗಿಸಿದರು. ಬಾಲಕರ ಪ್ರೌಢಶಾಲೆಯಲ್ಲಿ ಕೇಲ ಕೊಠಡಿಗಳಿಗೆ ನಿಗದಿತ ಸಮಯಕಿಂತ ೨೦-೩೦ ನಿಮಿಷ ವಿಳಂಭಾಗಿ ನೀಡಲಾಗಿದೆ ಎಂದು ವಿದ್ಯಾರ್ಥಿಗಳು, ಪಾಲಕರಿಗೆ ತಿಳಿಸಿದ ಕಾರಣ ಪಾಲಕರು ತರಾಟೆಗೆ ತೆಗುದುಕೊಂಡ ಕಾರಣ ಕೇಲ ಸಮಯ ಗೊಂದಲದ ಗೂಡಾಗಿತು. ನಂತರ ಸ್ಥಳಕ್ಕೆ ಪಿಎಸ್‌ಐ ಮಾರುತಿ ಆಗಮಿಸಿ ಸಮದಾನ ಪಡಿಸಿ ಪರಸ್ಥಿತಿ ಶಾಂತ ಗೊಳಿಸಿದರು.