
ಬೆಂಗಳೂರು, ಮೇ. ೧-ಯಶವಂತಪುರ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವುದರ ಜೊತೆಗೆ ಕೋವಿಡ್ ಸಮಯದಲ್ಲಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ. ಆದರೆ
ಪ್ರತಿಪಕ್ಷದ ಅಭ್ಯರ್ಥಿ ೨೦೫ ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ ಒಬ್ಬರಿಗೆ ಒಂದು ಮಾಸ್ಕ್ ಕೂಡ ಕೊಡಲಿಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.
ಕೆಂಗೇರಿ ವಾರ್ಡ್ ನಲ್ಲಿ ಮತಯಾಚನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಸಮಯದಲ್ಲಿ ಜನರು ಕಣ್ಣೀರಾಗುತ್ತಿದ್ದಾಗ ಬರಲಿಲ್ಲ. ಅವರದ್ದೇ ಪಕ್ಷದ ಕಾರ್ಯಕರ್ತರಿಗೆ ಒಂದೇ ಒಂದು ಫುಡ್ ಕಿಟ್ ಕೊಡಲಿಲ್ಲ ಎಂದರು.
ಅಧಿಕಾರ ಕೊಡಿ ಸಹಾಯ ಮಾಡುತ್ತೇನೆ ಎನ್ನುತ್ತಾರೆ. ಆದರೆ ಜನರಿಗೆ ಸಹಾಯ ಮಾಡಲು ಅಧಿಕಾರ ಬೇಕಿಲ್ಲ, ಮನುಷ್ಯತ್ವ ಇದ್ದರೆ ಸಾಕು. ಮನುಷ್ಯತ್ವ ಇರುವವರು ಕಷ್ಟಕ್ಕೆ ಸ್ಪಂದಿಸುತ್ತಾರೆ. ಆ ಕೆಲಸವನ್ನು ನಾನು ಮಾಡಿದ್ದೇನೆ ಎಂದರು.
ನಾನು ವರ್ಷದ ೩೬೫ ದಿನವೂ ಕ್ಷೇತ್ರದಲ್ಲಿ ಇರುತ್ತೇನೆ. ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತಾ ಜನತೆ ಜೊತೆ ಇದ್ದೇನೆ. ಅವರ ನೋವಿಗೆ ನಾನು ಸ್ಪಂದಿಸಿರುವುದರಿಂದ ಕ್ಷೇತ್ರದ ಜನತೆಯ ಸಹಾನುಭೂತಿ ನನ್ನ ಮೇಲಿದೆಯೇ ಹೊರತು ಐದು ವರ್ಷಕ್ಕೆ ಒಮ್ಮೆ ಬರುವ ವ್ಯಕ್ತಿ ಮೇಲಲ್ಲ ಎಂದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ೧೧೦ ಹಳ್ಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾವೇರಿ ಐದನೇ ಹಂತದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಸರ್.ಎಂ.ವಿಶ್ವೇಶ್ವರಯ್ಯ ಆರನೇ ಬ್ಲಾಕ್, ಲಿಂಗಧೀರೆನಹಳ್ಳಿ, ಬನಶಂಕರಿ ೬ನೇ ಹಂತದಲ್ಲಿ ೫೮ ಒಐಆ ಸಾಮರ್ಥ್ಯದ ಜಲಗಾರಗಳನ್ನು ನಿರ್ಮಿಸಿ ನೀರು ಶೇಖರಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಶುದ್ಧೀಕರಿಸಿದ ೧೧೦ ಒಐಆ ನೀರು ಕ್ಷೇತ್ರದ ಜನತೆಗೆ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲಾಗಿದೆ. ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣೆಗಾಗಿ ಕೆಂಗೇರಿ, ಹೆಮ್ಮಿಗೆಪುರ, ದೊಡ್ಡಬಿದರಕಲ್ಲು ಸೇರಿದಂತೆ ೫ SಖಿPಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿದ ೧೪ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಹೇಳಸೇವನೆ
ರಸ್ತೆಯಲ್ಲೇ ನಿಂತು ಉಪಹಾರ ಸೇವನೆ
ಕೆಂಗೇರಿ ವಾರ್ಡ್ ನಲ್ಲಿ ಎಸ್.ಟಿ.ಸೋಮಶೇಖರ್ ಅವರು ಚುನಾವಣಾ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರ ಜೊತೆ ರಸ್ತೆಯಲ್ಲಿ ನಿಂತು ಉಪಹಾರ ಸೇವಿಸಿದರು. ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ರವರು ಕೆಂಗೇರಿ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದಾರೆ.