ನವದೆಹಲಿ,ಸೆ.೨೮- ಭಾರತದಲ್ಲಿ ವಯಸ್ಸಾದ ಜನಸಂಖ್ಯೆ ತ್ವರಿತವಾಗಿ ಹೆಚ್ಚಾಗುತ್ತಿದೆ. ೨೦೩೬ರ ವೇಳೆಗೆ ಈ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇಕಡಾ ೧೫ ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಅದರಲ್ಲಿ ೬೦ ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರೇ ಹೆಚ್ಚಾಗಿರುವ ದೇಶದಲ್ಲಿ ಈಗ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದೆ.
“ಭಾರತದಲ್ಲಿ ವೃದ್ಧಾಪ್ಯದ ವೇಗ” ವನ್ನು ಸೂಚಿಸುವ ವಿಶ್ವಸಂಸ್ಥೆಯ ವರದಿ ಬಿಡುಗಡೆಯಾಗಿದ್ದು ೨೦೧೦ ರಿಂದ ಹಿರಿಯ ಜನಸಂಖ್ಯೆಯ ತೀವ್ರ ಬೆಳವಣಿಗೆ ಹೆಚ್ಚಾಗುತ್ತಿದೆ. ಪ್ರಸ್ತುತ ಯುವಕರ ದೊಡ್ಡ ಸಮೂಹವನ್ನು ಹೊಂದಿರುವ ದೇಶದಲ್ಲಿ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದೆ.
ವರದಿ ಪ್ರಕಾರ, ೨೦೪೬ ರಲ್ಲಿ, ಭಾರತದದಲ್ಲಿ ವಯಸ್ಸಾದವರ ಜನಸಂಖ್ಯೆ ೦-೧೪ ವರ್ಷದೊಳಗಿನ ಮಕ್ಕಳ ಜನಸಂಖ್ಯೆಯ ಗಾತ್ರಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ೧೫ ರಿಂದ ೫೯ ವರ್ಷಗಳ ನಡುವಿನ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖ ಇಳಿಸಿದೆ.
’ಇಂಡಿಯಾ ಏಜಿಂಗ್ ರಿಪೋರ್ಟ್ ೨೦೨೩’ ರ ವರದಿಯಲ್ಲಿ “ನಿಸ್ಸಂದೇಹವಾಗಿ, ತುಲನಾತ್ಮಕವಾಗಿ ಯುವ ಭಾರತ ಇಂದು ಮುಂಬರುವ ದಶಕಗಳಲ್ಲಿ ವೇಗವಾಗಿ ವಯಸ್ಸಾದ ಸಮಾಜವಾಗಿ ಬದಲಾಗುತ್ತದೆ ಎಂದು ಹೇಳಿದೆ.
೨೦೨೨ ರ ಜುಲೈ ೧ಕ್ಕೆ ಹೋಲಿಸಿದರೆ ದೇಶದ ಜನಸಂಖ್ಯೆಯ ಸುಮಾರು ಶೇಕಡಾ ೧೦.೫ ರಷ್ಟು ೬೦ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ೧೪.೯ ಕೋಟಿ ಜನರಿದ್ದಾರೆ ಇದು ೨೦೩೬ ರ ವೇಳೆಗೆ ಶೇಕಡಾ ೧೫ ರಷ್ಟು ಅಂದರೆ ಸುಮಾರು ೨೨.೭ ಕೋಟಿ ಮಂದಿಗೆ ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
೨೦೫೦ ರ ವೇಳೆಗೆ, ವಯಸ್ಸಾದ ವ್ಯಕ್ತಿಗಳ ಪಾಲು ಶೇಕಡಾ ೨೦.೮ ರಷ್ಟು ಅಂದರೆ ೩೪.೭ ಕೋಟಿ) ಕ್ಕೆ ಏರುತ್ತದೆ. ಅದು ಪ್ರತಿ ಐದು ವ್ಯಕ್ತಿಗಳಲ್ಲಿ ಒಬ್ಬರನ್ನು ವಯಸ್ಸಾದ ವ್ಯಕ್ತಿಯನ್ನಾಗಿ ಮಾಡುತ್ತದೆ. ಶತಮಾನದ ಅಂತ್ಯದ ವೇಳೆಗೆ, ವೃದ್ಧರು ದೇಶದ ಒಟ್ಟು ಜನಸಂಖ್ಯೆಯ ಶೇಕಾಡ ೩೬ ಕ್ಕಿಂತ ಹೆಚ್ಚು ಇದೆ ಎಂದು ಹೇಳಲಾಗಿದೆ.
ದಕ್ಷಿಣ ರಾಜ್ಯಗಳು ಮತ್ತು ಆಯ್ದ ಉತ್ತರದ ರಾಜ್ಯಗಳಾದ ಹಿಮಾಚಲ ಮತ್ತು ಪಂಜಾಬ್‌ಗಳು ೨೦೨೧ ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ವಯಸ್ಸಾದ ಜನಸಂಖ್ಯೆ ವರದಿ ಮಾಡಿದೆ, ಈ ಅಂತರ ೨೦೩೬ ರ ವೇಳೆಗೆ ಹೆಚ್ಚಾಗುವ ನಿರೀಕ್ಷೆಯಿದೆ.
ಭಾರತದಲ್ಲಿ ೧೦೦ ಮಕ್ಕಳಿಗೆ ೩೯ ಹಿರಿಯರಿದ್ದಾರೆ ಮತ್ತು ಮಧ್ಯ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಮತ್ತು ಪಶ್ಚಿಮ ಭಾರತದ ರಾಜ್ಯಗಳು ಹೆಚ್ಚಿನ ವಯಸ್ಸಿನವರಿದ್ದಾರೆ ಎಂದಿದೆ.