
ಮಾನ್ವಿ,ಮೇ.೨೫-
ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ಯಾಗವಾಟ್ ಸಂಯುಕ್ತಾಶ್ರಯದಲ್ಲಿ ಕ್ಷಯ ಮುಕ್ತ ಭಾರತ ಅಂಗವಾಗಿ ನಡೆದ ಆಶಾಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ ೨೦೨೫ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿಯನ್ನು ಹೊಂದಲಾಗಿದೆ ಎಂದರು.
ನಂತರ ಮಾತಾನಾಡಿದ ಅವರು ಪ್ರತಿ ಮನೆ ಮನೆಗೆ ತೆರಳಿ ಕ್ಷಯರೋಗವನ್ನು ಪತ್ತೆ ಹಚ್ಚುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು ಆಶಾ ಕಾರ್ಯಕರ್ತರು ಗ್ರಾಮದ ಪ್ರತಿ ಮನೆಗೆ ತೆರಳಿ ಕ್ಷಯರೋಗದ ಲಕ್ಷಣ ಇರುವವರನ್ನು ಗುರುತಿಸಿ ಅವರಿಗೆ ಕ್ಷಯರೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿ ಅವರಲ್ಲಿ ಜಾಗೃತಿ ಮೂಡಿಸಿ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಅವರಿಗೆ ಪೌಷ್ಠಿಕ ಆಹಾರಕ್ಕಾಗಿ ಐದು ನೂರು ರೂ ಗಳನ್ನು ಕೊಡಿಸುವ ಮೂಲಕ ಅವರನ್ನು ಕ್ಷಯರೋಗ ಮುಕ್ತರನ್ನಾಗಿಸುವುದಲ್ಲದೆ ಅವರಿಂದ ಇನ್ನೊಬ್ಬರಿಗೆ ಕ್ಷಯರೋಗ ಹರಡದಂತೆ ತಡೆಯುವ ಮೂಲಕ ಕ್ಷಯ ಮುಕ್ತ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿ ಉಪೇಂದ್ರ, ಗಿರಿಜಾ, ಯಂಕಮ್ಮ, ಶಿವಲಿಂಗಮ್ಮ, ಶಿವಮ್ಮ, ಅಮರಮ್ಮ, ಶಂಕ್ರಮ್ಮ, ಸೇರಿದಂತೆ ಆಶಾಕಾರ್ಯಕರ್ತರು ಇದ್ದರು.